ಲೂಧಿಯಾನಾ: ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸೋನು ಸೂದ್‌ಗೆ ಲೂಧಿಯಾನಾ ಕ್ರಿಮಿನಲ್ ಕೋರ್ಟ್ ಬಂಧನದ ವಾರೆಂಟ್ ಜಾರಿ ಮಾಡಿದೆ.
ಮೋಹಿತ್ ಶುಕ್ಲಾ ಎಂಬುವವರ ವಿರುದ್ಧ ವಕೀಲ ರಾಜೇಶ್ ಖನ್ನಾ 10 ಲಕ್ಷ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ರಿಜಿಕಾ ಕಾಯಿನ್‌ನಲ್ಲಿ ಹಣ ಹೂಡಿ ಎಂದು ಮೋಹಿತ್ ಶುಕ್ಲಾ ತಿಳಿಸಿದ್ದರು. ಆದರೆ ಅದು ನಕಲಿ ರಿಜಿಕಾ ಕಾಯಿನ್ ಆಗಿತ್ತು. ಈ ಪ್ರಕರಣದಕ್ಕೂ ಸೋನು ಸೂದ್‌ಗೂ ಸಂಬಂಧವಿದೆ ಎಂದು ದೂರಲಾಗಿತ್ತು.
ಹೀಗಾಗಿ ನ್ಯಾಯಾಲು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದರೂ ಸೋನು ಸೂದ್ ನ್ಯಾಯಾಲಯಕ್ಕೆ ಬರಲೇ ಇಲ್ಲ. ಇದರಿಂದಾಗಿ ಕೋರ್ಟ್ ಆದೇಶ ಹೊರಡಿಸಿದ್ದು, ಸೋನು ಸೂದ್ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಕರೆ ತನ್ನಿ ಎಂದಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


