ಬೆಂಗಳೂರು;ಬದನೆಕಾಯಿ(Brinjal) ಹಲವರಿಗೆ ಬಹಳಷ್ಟು ಇಷ್ಟವಾದ ಒಂದು ತರಕಾರಿ ಆಹಾರ ಪದಾರ್ಥ. ಸುಮಾರು 82 ಗ್ರಾಂ ಬದನೆಕಾಯಿ ಹೋಳುಗಳಲ್ಲಿ 3 ಗ್ರಾಂ ನಷ್ಟು ನಾರಿನ ಅಂಶ ಮತ್ತು ಕೇವಲ 20 ಕ್ಯಾಲೋರಿಗಳು ಮಾತ್ರ ಇರುತ್ತವೆ. ಬದನೆಕಾಯಿಗಳಲ್ಲಿ ಕಂಡು ಬರುವ ಇಷ್ಟು ಕಡಿಮೆ ಪ್ರಮಾಣದ ಕ್ಯಾಲೊರಿ(Callory) ಅಂಶಗಳು ಮತ್ತು ಹೆಚ್ಚಿನ ಪ್ರಮಾಣದ ನಾರಿನ ಅಂಶಗಳು ಮನುಷ್ಯನ ದೇಹದ ತೂಕ ನಿರ್ವಹಣೆಯಲ್ಲಿ ಹೆಚ್ಚಿನ ಪಾತ್ರ ವಹಿಸುತ್ತವೆ. ಯಾರು ಬೇಕಾದರೂ ಬದನೆಕಾಯಿಗಳನ್ನು ಯಾವುದೇ ಅನುಮಾನವಿಲ್ಲದೆ ತಿನ್ನಬಹುದು ಬೇಯಿಸಿ ಹುರಿದು ಎಣ್ಣೆಯಲ್ಲಿ ಕರಿದು ಪಲ್ಯ ಸಾಂಬಾರ್ ಗಳಲ್ಲಿ ಸುಲಭವಾಗಿ ಉಪಯೋಗಿಸಬಹುದು. ಎಣ್ಣೆ ಬದನೆಕಾಯಿ ರುಚಿಗೆ ಮನಸೋಲದವರು ಯಾರಿದ್ದಾರೆ ಅಲ್ವಾ? ಚಪಾತಿ, ರೊಟ್ಟಿ, ಬಿಸಿ ಬಿಸಿ ಅನ್ನ ಇವುಗಳಿಗೆ ಎಣ್ಣೆ ಬದನೆಕಾಯಿ ಇದ್ದರೆ ನಾವು ಹೊಟ್ಟೆ ತುಂಬಿದರೂ ಒಂದುತುತ್ತು ಹೆಚ್ಚೇ ತಿನ್ನುತ್ತೇವೆ, ಅಷ್ಟೊಂದು ರುಚಿಯಾಗಿರುತ್ತದೆ,ಹಾಗಾದರೆ ನಾವಿಂದು ರೊಟ್ಟಿ, ಚಪಾತಿಗೆ ರುಚಿರುಚಿಯಾದ ಎಣ್ಣೆ ಬದನೆಕಾಯಿ ಮಾಡುವುದು ಹೇಗೆ ಎಂಬುದನ್ನು ನೋಡೋಣ.

ಎಣ್ಣೆ ಬದನೆಕಾಯಿ ಮಾಡಲು ಬೇಕಾಗುವ ಪದಾರ್ಥಗಳು:-
ಎಣ್ಣೆ ಬದನೆಕಾಯಿ ಮಸಾಲ ಮಾಡಲು ಬೇಕಾಗುವ ಪದಾರ್ಥಗಳು ಬದನೆಕಾಯಿ-5ರಿಂದ 6 ಏಲಕ್ಕಿ-2 ಚಕ್ಕೆ ಲವಂಗ-4 ಶುಂಠಿ ಬೆಳ್ಳುಳ್ಳಿ-1 ತೆಂಗಿನಕಾಯಿ-ಅರ್ಧ ಕಪ್ ಧನಿಯಾ ಕಾಳು ಬಿಳಿ ಎಳ್ಳು ಕಡಲೇ ನೀಜ ಗಸಗಸೆ ಗೋಡಂಬಿ ಹಸಿಮೆಣಸು ಟೊಮೆಟೊ-2 ಈರುಳ್ಳಿ-1 ಖಾರದ ಪುಡಿ ಅರಶಿನ ಪುಡಿ ಎಣ್ಣೆ ಕರಿಬೇವು ಸಾಸಿವೆ
ಎಣ್ಣೆ ಬದನೆಕಾಯಿ ಮಾಡುವ ವಿಧಾನ
- ಮೊದಲು ಬದನೆಕಾಯಿಯನ್ನು ಚೆನ್ನಾಗಿ ತೊಳೆದು ಸೀಳಿಕೊಳ್ಳಿ,ಉಪ್ಪು ನೀರಲ್ಲಿ ಹಾಕಿ ಬಿಡಿ,ಸ್ವಲ್ಪವೇ ಮೇಲ್ಭಾಗದಲ್ಲಿ ಕತ್ತರಿಸಿ ಅವುಗಳನ್ನು ಬೆಚ್ಚಗಿನ ನೀರಿಗೆ 1 ಚಮಚ ಉಪ್ಪನ್ನು ಹಾಕಿ 15-20 ನಿಮಿಷ ನೆನೆಸಿಡಿ. ಒಂದು ನಿಂಬೆಹಣ್ಣಿನ ಗಾತ್ರದ ಹುಣಿಸೆಹಣ್ಣನ್ನು ತೆಗೆದುಕೊಂಡು ಅದನ್ನು 1/4 ಕಪ್ ಬೆಚ್ಚಗಿನ ನೀರಿನಲ್ಲಿ 10-15 ನಿಮಿಷ ನೆನೆಸಿಡಿ. ನಂತರ ಅದನ್ನು ಚೆನ್ನಾಗಿ ಹಿಚುಕಿ ಹುಣಿಸೆ ಹಣ್ಣಿನ ಪಲ್ಪ್ ಅನ್ನು ತಯಾರಿಸಿಟ್ಟುಕೊಳ್ಳಿ.
- ಒಲೆಯಲ್ಲಿ ಮೇಲೆ ಒಂದು ತವೆಯನ್ನು ಇಟ್ಟು ಅದರಲ್ಲಿ ಶೆಂಗಾ ಹಾಕಿ ಉರಿದುಕೊಳ್ಳಿ ಅದನ್ನು ಮಿಕ್ಸಿ ಜಾರ್‌ಗೆ ಹಾಕಿಕೊಳ್ಳಿ.
- ಬಳಿಕ ಶೆಂಗಾ ಪುಡಿಗೆ ಮೂರು ಚಮಚ ಎಣ್ಣೆ ಹಾಕಿ ಅದಕ್ಕೆ ಹೆಚ್ಚಿದ ಈರುಳ್ಳಿ , ಟೊಮೊಟೊ, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕಲಸಿಕೊಳ್ಳಿ
- ಬಳಿಕ ಬದನೆಕಾಯಿಯಲ್ಲಿ ಆ ಮಿಶ್ರಣವನ್ನು ತುಂಬಿ ಇಟ್ಟುಕೊಳ್ಳಿ.
- ಒಂದು ಪಾತ್ರೆಯನ್ನು ಒಲೆಯ ಮೇಲೆ ಇಟ್ಟು ಅದಕ್ಕೆ ಹತ್ತು ಟೀಸ್ಪೂನ್ ಎಣ್ಣೆ ಹಾಕಿ. ಬೆಳ್ಳುಳ್ಳಿ ಹಾಕಿ ಬದನೆಕಾಯಿಯನ್ನು ಹಾಕಿ, ಉಳಿದ ಮಿಶ್ರಣವನ್ನು ಅದರಲ್ಲಿ ಹಾಕಿ ಬದನೆಕಾಯಿ ಅರ್ಧ ಮುಳುಗುವಷ್ಟು ನೀರು ಹಾಕಿ.
- ಬಳಿಕ ಅದಕ್ಕೆ ಅರಿಶಿಣ, ಕೊತ್ತಂಬರಿ ಸೊಪ್ಪು, ಹುಣಸೆಹಣ್ಣಿನ ರಸ ಹಾಕಿ ಒಂದು ಬಾರಿ ಮಾತ್ರ ಕಲಸಿ, ಪಾತ್ರೆಯನ್ನು ಮುಚ್ಚಿ. ಉರಿಯನ್ನು ಮಧ್ಯಮ ಗಾತ್ರದಲ್ಲಿ ಇಡಿ.
- 15 ನಿಮಿಷ ಬಿಟ್ಟು ಅದನ್ನು ನಿಧಾನವಾಗಿ ಮತ್ತೊಮ್ಮೆ ಕಲಸಿ, ಉರಿಯನ್ನು ಸಂಪೂರ್ಣವಾಗಿ ಕಡಿಮೆ ಮಾಡಿ. ಬದನೆಕಾಯಿ ತಳಹಿಡಿಯದಂತೆ ನೋಡಿಕೊಳ್ಳಬೇಕು
- ನೀರು ಆವಿಯಾಗಿ ಬದನೆಕಾಯಿ ಮೇಲೆ ಎಣ್ಣೆ ಕಾಣುವಂತಾದರೆ ಸ್ವಲ್ಪ ಸಮಯದ ನಂತರ ಮುಚ್ಚಳವನ್ನು ತೆಗೆದು ಅದರ ಮೇಲೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಉದುರಿಸಿಕೊಂಡರೆ ರುಚಿ ರುಚಿಯಾದ ಬದನೆಕಾಯಿ ಎಣ್ಣೆಗಾಯಿ ಸವಿಯಲು ಸಿದ್ಧ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


