ಹೊಸದಿಲ್ಲಿ;ಭಾರತೀಯ ರಿಸರ್ವ್ ಬ್ಯಾಂಕ್(RBI) ದೇಶದ ಕೇಂದ್ರ ಬ್ಯಾಂಕ್ ಆಗಿದ್ದು, ಇದು ದೇಶದ ಎಲ್ಲ ಬ್ಯಾಂಕುಗಳಿಗೆ ಸಾಲ ನೀಡುವ ದರವನ್ನೇ ‘ರೆಪೋ ದರ’ ಎಂದು ಕರೆಯಲಾಗುತ್ತದೆ.ಭಾರತೀಯ ರಿಸರ್ವ್ ಬ್ಯಾಂಕ್ ಹೊಸ ಹಣಕಾಸು ನೀತಿಯನ್ನು(Financial policy) ಪ್ರಕಟಿಸಿದೆ.RBI 5 ವರ್ಷಗಳ ನಂತರ ರೆಪೋ ದರವನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ.ರೆಪೊ ದರದಲ್ಲಿ 0.25 ಅಂಕ ಇಳಿಕೆಯಾಗಿದೆ. ಇದರೊಂದಿಗೆ ರೆಪೋ ದರವು(Reporate) ಶೇ.6.50ರಷ್ಟಿದ್ದ ಬಡ್ಡಿದರವನ್ನು 6.25%ಕ್ಕೆ ಇಳಿಕೆಯಾಗಿದೆ. ಈ ನಿರ್ಧಾರದಿಂದ ಗ್ರಾಹಕರ ಸಾಲದ EMI ಕಡಿಮೆಯಾಗಲಿದೆ. ಮೇ 2020ರ ನಂತರ RBI ರೆಪೋ ದರವನ್ನು ಕಡಿಮೆ ಮಾಡಿರುವುದು ಇದೇ ಮೊದಲು. ರೆಪೋ ದರ ಅಂದರೆ ರಿಸರ್ವ್ ಬ್ಯಾಂಕ್ ಇತರ ಬ್ಯಾಂಕುಗಳಿಗೆ ಸಾಲವನ್ನು ನೀಡುವ ದರವಾಗಿದೆ.ನೂತನ ಗವರ್ನರ್ ಸಂಜಯ್ ಮಲ್ಹೋತ್ರಾ(Sanjay Malhotra) ನೇತೃತ್ವದ ಮೊದಲ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.ಮಂದಗತಿಯ ಆರ್ಥಿಕತೆಯನ್ನು ಪುನಶ್ಚೇತನಗೊಳಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ,2023ರ ಫೆಬ್ರುವರಿಯಿಂದ, ಅಂದರೆ ಎರಡು ವರ್ಷದಿಂದ ರಿಪೋ ದರ ಶೇ. 6.50ರಲ್ಲೇ ಇತ್ತು. 2020ರ ಮೇ ಬಳಿಕ ಆರ್ಬಿಐ ತನ್ನ ದರಗಳನ್ನು ಇಳಿಸಿದ್ದೇ ಇಲ್ಲ. ನಾಲ್ಕರಿಂದ ಐದು ವರ್ಷದ ಬಳಿಕ ರ್ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ಬಾರಿಗೆ ರಿಪೋ ದರ ಇಳಿಸಿದಂತಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


