Thursday, September 3, 2026
spot_img
More
    spot_img
    HomeTop Storyಅಕ್ರಮವಾಗಿ ಅಮೆರಿಕಾ ತಲುಪಲು ʼಕತ್ತೆ ಮಾರ್ಗʼ ಅನುಸರಿಸಿದ್ದ ವಲಸಿಗರು; ಏನಿದು ʼಡಾಂಕಿ ರೂಟ್‌ʼ? ಈ ಸಿನಿಮಾ...

    ಅಕ್ರಮವಾಗಿ ಅಮೆರಿಕಾ ತಲುಪಲು ʼಕತ್ತೆ ಮಾರ್ಗʼ ಅನುಸರಿಸಿದ್ದ ವಲಸಿಗರು; ಏನಿದು ʼಡಾಂಕಿ ರೂಟ್‌ʼ? ಈ ಸಿನಿಮಾ ನೋಡಿಬಿಡಿ ಸಾಕು!

    ಕಳೆದೆರಡು ದಿನಗಳಿಂದ ಅಮೆರಿಕಾ ತನ್ನ ದೇಶಕ್ಕೆ ಅಕ್ರಮವಾಗಿ ವಲಸೆ ಬಂದಿದ್ದ ವಿದೇಶಿಗರನ್ನು ಗಡಿಪಾರು ಮಾಡುತ್ತಿದೆ. ಅಕ್ರಮವಾಗಿ ವಲಸೆ ಬಂದವರ ಕೈ ಕಾಲಿಗೆ ಸರಪಳಿ ಕಟ್ಟಿ ಎಳೆದೊಯ್ದು ಅವರವರ ದೇಶಕ್ಕೆ ಮರಳಿಸಿದೆ. ಅಮೆರಿಕಾದಲ್ಲಿ ನೆಲೆಸೋಣ ಎಂದು ತೆರಳಿದ್ದ ಅವರೆಲ್ಲರೂ ವಿಧಿಯಿಲ್ಲದೇ ತಮ್ಮ ತಮ್ಮ ದೇಶಗಳಿಗೆ ವಾಪಸ್ಸಾಗಿದ್ದಾರೆ.

    Advertisement

    ವಿಶ್ವದ ವಿವಿಧ ಭಾಗಗಳಿಂದ ಜನರು ಅಮೆರಿಕಾ ತಲುಪಿದ್ದು, ಫೆಬ್ರವರಿ 5ರಂದು ಅಕ್ರಮವಾಗಿ ವಲಸೆ ಹೋಗಿದ್ದ 104 ಭಾರತೀಯರನ್ನು ಅಮೆರಿಕಾ ವಾಪಸ್‌ ಕಳುಹಿಸಿದೆ. ಹೀಗೆ ಭಾರತಕ್ಕೆ ವಾಪಸ್ಸಾದ ಹಾಗೂ ಅಮೆರಿಕಾದಿಂದ ತಾಯ್ನಾಡಿಗೆ ಹಿಂದಿರುಗಿದ ಇತರೆ ದೇಶಗಳ ಅಕ್ರಮ ವಲಸೆಗಾರರು ʼಡಾಂಕಿ ರೂಟ್‌ʼ ಬಳಸಿ ಅಮೆರಿಕಾ ತಲುಪಿದ್ದರು ಎಂಬ ಮಾತುಗಳು ಕೇಳಿಬರುತ್ತಿವೆ.

    ಏನಿದು ಡಾಂಕಿ ರೂಟ್?
    ಡಾಂಕಿ ರೂಟ್.. ಅಮೆರಿಕಾಗೆ ತೆರಳಲು ಅಗತ್ಯವಾದ ವಿಸಾ ಇಲ್ಲದವರು ಸಮುದ್ರದ ಮೂಲಕ, ಕಾಲ್ನಡಿಗೆಯ ಮೂಲಕ ಹಲವಾರು ದಿನಗಳು, ತಿಂಗಳುಗಳು ನಡೆದು ಕದ್ದು ಅಮೆರಿಕಾ ತಲುಪುವ ಮಾರ್ಗವೇ ಡಾಂಕಿ ರೂಟ್.‌ ಇನ್ನು ಈ ಡಾಂಕಿ ರೂಟ್‌ನಲ್ಲಿ ಅಮೆರಿಕಾ ತಲುಪಿಸಲು ಸಹ ಕಳ್ಳ ಏಜೆಂಟ್‌ಳಿದ್ದಾರೆ. ಅವರಿಗೆ ಇಂತಿಷ್ಟು ಲಕ್ಷ ಎಂದು ಕೊಟ್ಟರೆ ಅವರು ರೂಟ್‌ ತೋರಿಸಿ ಕರೆದುಕೊಂಡು ಹೋಗುತ್ತಾರೆ. ಲಕ್ಷ ಲಕ್ಷ ಕೊಟ್ಟ ಮಾತ್ರಕ್ಕೆ ಡಾಂಕಿ ರೂಟ್‌ ಸುಲಭದ ಹಾದಿಯಲ್ಲ. ದಟ್ಟಾರಣ್ಯಗಳ ಮಧ್ಯೆ ಹಗಲಿರುಳು ಸಾಗಬೇಕಾದ ಅನಿವಾರ್ಯತೆ ಇದೆ. ತಮ್ಮ ಬ್ಯಾಗ್‌, ಜೊತೆಗೆ ದೊಡ್ಡದೊಂದು ನೀರಿನ ಬಾಟಲ್‌ ಅನ್ನು ಬೆನ್ನಿಗೆ ಹಾಕಿಕೊಂಡು ಬಿಸಿಲು, ಮಳೆ ಎಲ್ಲವನ್ನೂ ಸಹಿಸಿಕೊಂಡು ಸಾಗಬೇಕಿದೆ. ವಿಷಜಂತುಗಳು, ಕಾಡುಪ್ರಾಣಿಗಳ ಹಾವಳಿ ಒಂದೆಡೆಯಾದರೆ, ಮತ್ತೊಂದೆಡೆ ಹೀಗೆ ವಲಸೆ ಬರುವ ಜನರ ಬಳಿ ಸುಲಿಗೆ ಮಾಡುವ ಕಳ್ಳರ ಗುಂಪಿನ ತೊಂದರೆ ಸಹ ಇಲ್ಲಿ ಎದುರಾಗಲಿದೆ. ಇನ್ನು ಹತ್ತರಿಂದ ಇಪ್ಪತ್ತು ಜನರನ್ನು ಗುಂಪು ಮಾಡಿ ಈ ಕತ್ತೆ ಮಾರ್ಗದ ಮೂಲಕ ಸಾಗಲಿದ್ದು, ಮಾರ್ಗ ಮಧ್ಯದಲ್ಲಿ ಯಾರಿಗಾದರೂ ಗಾಯಗಳಾಗಿ ನಡೆಯಲಾಗದಿದ್ದರೆ ಯಾವುದೇ ಕಾರಣಕ್ಕೂ ಗುಂಪಿನ ಮಾರ್ಗದರ್ಶಕ ಅವರಿಗಾಗಿ ಕಾಯುವುದಿಲ್ಲ. ಅವರನ್ನು ಅಲ್ಲೇ ಬಿಟ್ಟು ಉಳಿದವರನ್ನು ಕರೆದುಕೊಂಡು ಹೋಗಲಿದ್ದಾನೆ. ಅಷ್ಟೇ ಅಲ್ಲದೇ ಹೀಗೆ ಡಾಂಕಿ ರೂಟ್‌ನಲ್ಲಿ ಕರೆದುಕೊಂಡು ಹೋಗುವುದಾಗಿ ನಂಬಿಸಿ ಮೋಸ ಮಾಡಿದ ಜನರೂ ಉಂಟು. ಇನ್ನು ಎಲ್ಲಾ ಸವಾಲುಗಳನ್ನು ಎದುರಿಸಿ ಯುಎಸ್‌ ಬಾರ್ಡರ್‌ ದಾಟಿದ ಜನರನ್ನು ಅಲ್ಲಿನ ಪೊಲೀಸರು ಬಂಧಿಸುವ ಸಾಧ್ಯತೆಗಳೇ ಹೆಚ್ಚು. ಬಾರ್ಡರ್‌ ದಾಟಿದ ಬಳಿಕವೂ ಯಾವುದೇ ಪೊಲೀಸ್‌ಗೆ ಸಿಗದೇ ಇದ್ದವರು ಮಾತ್ರ ಯಶಸ್ವಿಯಾಗಿ ತಮ್ಮ ಗುರಿಯನ್ನು ಮುಟ್ಟಲಿದ್ದಾರೆ.

    ಡಾಂಕಿ ರೂಟ್‌ ಅನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದ ಮಲಯಾಳಂ ಸಿನಿಮಾ ʼಸಿಐಎʼ
    ಹೌದು, ನೀವು ಮೇಲೆ ಓದಿದ ಡಾಂಕಿ ರೂಟ್‌ ಅನ್ನು 2017ರಲ್ಲಿ ತೆರೆಗೆ ಬಂದಿದ್ದ ದುಲ್ಕರ್‌ ಸಲ್ಮಾನ್‌ ನಟನೆಯ ʼಸಿಐಎʼ ( ಕಾಮ್ರೇಡ್‌ ಇನ್‌ ಅಮೆರಿಕಾ ) ಚಿತ್ರ ಎಳೆ ಎಳೆಯಾಗಿ ತೋರಿಸಿತ್ತು. ಅಮಲ್‌ ನೀರದ್‌ ನಿರ್ದೇಶನದ ಈ ಚಿತ್ರದಲ್ಲಿ ನಾಯಕ ಕೇರಳದಲ್ಲಿ ವಿದ್ಯಾಭ್ಯಾಸ ಮುಗಿಸಿ ಅಮೆರಿಕಾಗೆ ತೆರಳಿದ್ದ ತನ್ನ ಪ್ರೇಯಸಿಗಾಗಿ ಇದೇ ರೀತಿ ಕತ್ತೆ ಮಾರ್ಗ ಅನುಸರಿಸಿದ್ದನ್ನು ತೆರೆ ಮೇಲೆ ಕಟ್ಟಿಕೊಡಲಾಗಿತ್ತು. ಅಲ್ಲೂ ಸಹ ನಾಯಕ ಇದೇ ರೀತಿಯ ಕಷ್ಟಗಳನ್ನು ಅನುಭವಿಸಿ ಕೊನೆಗೆ ಅಮೆರಿಕಾ ತಲುಪಿದ್ದ. ಆದರೆ ಡಾಂಕಿ ಮಾರ್ಗದಲ್ಲಿ ಆತ ಅನುಭವಿಸಿದ್ದು ಮಾತ್ರ ಅಕ್ಷರಶಃ ನರಕ. ಇನ್ನು ಚಿತ್ರದ ‘Vaanam Thilathilakkanu’ ಹಾಡಿನಲ್ಲಿ ಈ ಡಾಂಕಿ ರೂಟ್‌ನ ಕರಾಳತೆಯನ್ನು ಬಿಚ್ಚಿಡಲಾಗಿದ್ದು, ಆ ವಿಡಿಯೊ ವೀಕ್ಷಿಸಿದರೆ ಡಾಂಕಿ ರೂಟ್‌ನ ಸಂಪೂರ್ಣ ಚಿತ್ರಣ ನಿಮಗೆ ಸಿಗಲಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading