ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ( ಮಾರ್ಚ್ 7 ) 2025 – 26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ.
4,09,549 ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ ಸಿದ್ದರಾಮಯ್ಯ 16ನೇ ಬಾರಿಗೆ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆದರು. ಕಾಲು ನೋವಿನಿಂದ ಬಳಲುತ್ತಿರುವ ಸಿದ್ದರಾಮಯ್ಯ ಕುಳಿತುಕೊಂಡು ಬಜೆಟ್ ಮಂಡಿಸಿದ್ದು, ಬರೋಬ್ಬರಿ 3 ಗಂಟೆ 30 ನಿಮಿಷಗಳ ಕಾಲ ಆಯವ್ಯಯ ಪಟ್ಟಿ ಓದಿದ್ದಾರೆ.
ಇನ್ನು ನಿರೀಕ್ಷೆಯಂತೆ ವಿರೋಧ ಪಕ್ಷಗಳು ಸಿದ್ದರಾಮಯ್ಯ ಮಂಡಿಸಿದ ಬಜೆಟ್ ಕುರಿತು ಟೀಕೆಗಳನ್ನು ವ್ಯಕ್ತಪಡಿಸುತ್ತಿದೆ. ರಾಜ್ಯ ಬಿಜೆಪಿ ತನ್ನ ಎಕ್ಸ್ ಖಾತೆಯಲ್ಲಿ ಸಿದ್ದರಾಮಯ್ಯನವರ ಫೋಟೊವನ್ನು ಮುಸ್ಲಿಂರ ಹಾಗೆ ಎಡಿಟ್ ಮಾಡಿ ಹಲಾಲ್ ಬಜೆಟ್ ಎಂದು ಬರೆದುಕೊಂಡಿದೆ.
ಕರ್ನಾಟಕ ಬಜೆಟ್ ಅನ್ನು ಇಸ್ಲಾಮೀಕರಣಗೊಳಿಸಿರುವ ಸಿದ್ದರಾಮಯ್ಯನವರೇ ಎಸ್‌ಸಿ, ಎಸ್‌ಟಿ ಹಾಗೂ ಒಬಿಸಿ ಸಮುದಾಯಗಳಿಗೆ ನೀವು ಕೊಟ್ಟಿರುವುದು ಕೇವಲ ಚಿಪ್ಪು ಮಾತ್ರ ಎಂದು ಬರೆದುಕೊಂಡಿದೆ. ಜತೆಗೆ ಬಜೆಟ್‌ನಲ್ಲಿ ಸಿದ್ದರಾಮಯ್ಯ ಮುಸ್ಲಿಂ ಸಮುದಾಯಕ್ಕೆ ಘೋಷಿಸಿದ ಯೋಜನೆಗಳ ಪಟ್ಟಿಯನ್ನೂ ಸಹ ಉಲ್ಲೇಖಿಸಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


