Sunday, August 9, 2026
spot_img
More
    spot_img
    HomeLatest newsKarnataka Budget 2025-26: ಬೆಂಗಳೂರಿಗೆ ಅನುದಾನ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ!

    Karnataka Budget 2025-26: ಬೆಂಗಳೂರಿಗೆ ಅನುದಾನ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ!

    ಬೆಂಗಳೂರು ;ಕರ್ನಾಟಕ ರಾಜ್ಯದ ಆರ್ಥಿಕ ಹಬ್ಬವಾದ ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ Karnataka Budget 2025-26 ನಲ್ಲಿ ಮಹತ್ವದ ಅನುದಾನವನ್ನು ಮೀಸಲಿಡಲಾಗಿದೆ. ನಗರದಲ್ಲಿ ರಸ್ತೆ, ಮೆಟ್ರೋ, ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ಹಾಗೂ ಕೆರೆಗಳ ಸಂರಕ್ಷಣೆ ಸೇರಿದಂತೆ ಹಲವು ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ.ನಗರದ ಸಂಚಾರ ಮತ್ತು ಮೂಲಸೌಕರ್ಯ ಸುಧಾರಣೆಗಾಗಿ ₹40,000 ಕೋಟಿ ವೆಚ್ಚದಲ್ಲಿ ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಸುರಂಗ ಕಾರಿಡಾರ್ ನಿರ್ಮಿಸಲು ಯೋಜನೆ ರೂಪಿಸಲಾಗಿದೆ, ಇದಕ್ಕೆ ಸರ್ಕಾರ ₹19,000 ಕೋಟಿ ಗ್ಯಾರಂಟಿ ನೀಡಿದೆ. ಈ ಮೆಗಾ ಯೋಜನೆಗಳು ಬೆಂಗಳೂರು ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ, ನಗರೀಕರಣದ ಬೆಳವಣಿಗೆಯೊಂದಿಗೆ ಹೆಜ್ಜೆ ಹಾಕಲು ಸಹಾಯ ಮಾಡಲಿವೆ.

    Advertisement

    ಬೆಂಗಳೂರಿಗೆ ಈ ಬಾರಿ ಎಷ್ಟು ಅನುದಾನ? ಇಲ್ಲಿದೆ ವಿವರ

    brand Bengaluru ಯೋಜನೆಯಡಿ 2024-25 ಸಾಲಿನಲ್ಲಿ ಅನುಮೋದನೆಗೊಂಡ 21 ಯೋಜನೆಗಳನ್ನು 1,800 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.

    413 ಕೋಟಿ ರೂ. ವೆಚ್ಚದಲ್ಲಿ “ಸಮಗ್ರ ಆರೋಗ್ಯ ಯೋಜನೆ” ಜಾರಿ.

    ಬೆಂಗಳೂರು ನಗರದಲ್ಲಿ ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ನಿರ್ಮಿಸಲು 3 ಸಾವಿರ ಕೋಟಿ ರೂ. ಆರ್ಥಿಕ ನೆರವು.

    ಕಾವೇರಿ 5ನೇ ಹಂತದ ಯೋಜನೆ ಲೋಕಾರ್ಪಣೆಯಿಂದ 50 ಲಕ್ಷ ಜನರಿಗೆ ನೀರು ಪೂರೈಕೆ.

    ಬೆಂಗಳೂರಿನಲ್ಲಿ ಟನಲ್ ಕಾರಿಡಾರ್ ಯೋಜನೆಗೆ 19,000 ಕೋಟಿ ರೂ

    ನಮ್ಮ ಮೆಟ್ರೋ ಹಂತ-3 ಯೋಜನೆ ಅಡಿ 40.50 ಕಿ.ಮಿ. ಉದ್ದದ ಡಬಲ್‌-ಡೆಕ್ಕರ್‌ ಮೇಲ್ಸೇತುವೆ 8,916 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ.

    ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ನಮ್ಮ ಮೆಟ್ರೋ ಜಾಲ ಅಭಿವೃದ್ಧಿ.

    ಕಾವೇರಿ 6ನೇ ಹಂತ ಯೋಜನೆ ಅನುಷ್ಠಾನಗೊಳಿಸಲು ವಿಸ್ತೃತ ಯೋಜನಾ ವರದಿ ತಯಾರಿಕೆ

    BWSSB ವತಿಯಿಂದ ಎಸ್.ಟಿ.ಪಿ ಘಟಕಗಳ ತ್ಯಾಜ್ಯವನ್ನು ಬಳಸಿ ಬಯೋಗ್ಯಾಸ್-ಆಧಾರಿತ ಆದಾಯ ಮತ್ತು ಕಾರ್ಬನ್ ಕ್ರೆಡಿಟ್‌ಗಳ ಉಪಯೋಗವನ್ನು ಪಡೆಯುವ ನಿಟ್ಟಿನಲ್ಲಿ PPP ಮಾದರಿಯಲ್ಲಿ ಯೋಜನೆಯನ್ನು ರೂಪಿಸಲಾಗುವುದು.

    ಬೆಂಗಳೂರು ಬಿಸಿನೆಸ್ ಕಾರಿಡಾರ್‌ ಯೋಜನೆ: 73 ಕಿ.ಮೀ ಉದ್ದದ ರಸ್ತೆ ನಿರ್ಮಾಣಕ್ಕೆ 27 ಸಾವಿರ ಕೋಟಿ ರೂ.

    ಹವಾಮಾನ ವೈಪರಿತ್ಯದಿಂದ ಉಂಟಾಗುವ ಪ್ರವಾಹ ನಿಯಂತ್ರಣ ಮತ್ತು ಒಳಚರಂಡಿ ವ್ಯವಸ್ಥೆಯ ಸುಧಾರಣೆಗಾಗಿ ಬಿಬಿಎಂಪಿ ಮತ್ತು ಬಿಡಬ್ಲ್ಯುಎಸ್​ಎಸ್​​ಬಿಗೆ ₹3,000 ಕೋಟಿ ಅನುದಾನ

    300 ಕಿಮೀ ರಸ್ತೆ ಅಭಿವೃದ್ಧಿಗೆ ₹3,000 ಕೋಟಿ ರೂ

    ಬೆಂಗಳೂರು ನಗರ ನೀರು ಸರಬರಾಜು ಮತ್ತು ಒಳಚರಂಡಿ ಅಭಿವೃದ್ಧಿಗೆ ₹1,070 ಕೋಟಿ ಅನುದಾನ​

    “ಸೇಫ್ ಸಿಟಿ” ಯೋಜನೆಗೆ ₹667 ಕೋಟಿ ರೂ ನೀಡಲಾಗುವುದು. ಈ ಯೋಜನೆಯಡಿಯಲ್ಲಿ 7,500 ಕ್ಯಾಮೆರಾಗಳು, 10 ಡ್ರೋನ್‌ಗಳು, 560 ಬಾಡಿ-ಕ್ಯಾಮ್‌ಗಳು ಅಳವಡಿಸಲಾಗುತ್ತಿದೆ​

    ಮಹಿಳಾ ಭದ್ರತೆಗಾಗಿ 60 ಮಹಿಳಾ ಔಟ್-ಪೋಸ್ಟ್ ಠಾಣೆಗಳ ನಿರ್ಮಾಣ

    ಬೆಂಗಳೂರಿನಲ್ಲಿ ಸಿಗ್ನಲ್ ಫ್ರೀ ಜಂಕ್ಷನ್​​ಗಳ ನಿರ್ಮಾಣ

    14 ಕೆರೆಗಳ ಅಭಿವೃದ್ಧಿ ಯೋಜನೆಗೆ 35 ಕೋಟಿ ರೂ

    50 ಲಕ್ಷ ಜನರಿಗೆ ಉಪಯೋಗವಾಗುವ ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಗೆ 5,550 ಕೋಟಿ ರೂ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading