ಪೆಹಲ್ಗಾಮ್ ಉಗ್ರರ ದಾಳಿಯ ವಿರುದ್ಧ ಭಾರತದ ಸೇನೆ ಇಂದು ಆಪರೇಷನ್ ಸಿಂದೂರ್ ನಡೆಸಿದ್ದು, ಹಲವಾರು ಉಗ್ರರ ಹೆಡೆಮುರಿ ಕಟ್ಟಿದೆ. ಉಗ್ರ ಸಂಘಟನೆಯ ಕೇಂದ್ರಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಭಾರತೀಯ ಸೇನೆ ಪೆಹಲ್ಗಾಮ್ ದಾಳಿಗೆ ಪ್ರತಿಕಾರ ತೀರಿಸಿಕೊಂಡು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.
ಉಗ್ರ ಸಂಘಟನೆಯ ಮದರಸಗಳು, ಮನೆಗಳು ದಾಳಿಯಲ್ಲಿ ಧ್ವಂಸವಾಗಿದ್ದು ಉಗ್ರರ ನೆತ್ತರು ಹರಿದಿದ್ದು, ಇದರ ಬೆನ್ನಲ್ಲೇ ಪಾಕ್ ಕಾಶ್ಮೀರದ ಪೂಂಚ್‌ನಲ್ಲಿ ದಾಳಿ ನಡೆಸುವ ಮೂಲಕ ಬಾಲ ಬಿಚ್ಚಿದೆ.
ಹೌದು, ಪೂಂಚ್‌ನಲ್ಲಿ ಹಲವೆಡೆ ದಾಳಿ ನಡೆದಿದ್ದು, ಮಕ್ಕಳು, ಮಹಿಳೆಯರು ಸೇರಿದಂತೆ ಒಟ್ಟು 15 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಪೂಂಚ್‌ನಲ್ಲಿ ಸಾವು ನೋವು ಸಂಭವಿಸಿರುವ ವಿಡಿಯೊಗಳು ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ದಾಳಿಗೊಳಗಾಗಿ ರಕ್ತಸಿಕ್ತ ಸ್ಥಿತಿಯಲ್ಲಿ ಒದ್ದಾಡುತ್ತಿರುವ ಮಂದಿ ಒಂದೆಡೆಯಾದರೆ, ಬೆಂಕಿಯ ಕೆನ್ನಾಲೆಗೆ ಮತ್ತೊಂದೆಡೆ ವಾಹನಗಳು ಬಲಿಯಾಗಿವೆ. ಆಸ್ಪತ್ರೆಗಳಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಈ ದಾಳಿಯಿಂದ ಹಲವರು ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


