ಕೋಲ್ಕತ್ತ: 18ನೇ ಆವೃತ್ತಿಯ ಐಪಿಎಲ್ ಟೂರ್ನಿಯ 57ನೇ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಈಡನ್ ಗಾರ್ಡನ್‌ನಲ್ಲಿ ಗೆಲುವಿಗಾಗಿ ಸೆಣಸಾಡಿದವು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 179ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ 8 ವಿಕೆಟ್ ಕಳೆದುಕೊಂಡು 2 ಎಸೆತಗಳು ಬಾರಿ ಇರುವಂತೆ ಗೆಲುವಿನ ಡದ ಸೇರಿತು.
ಸಿಎಸ್‌ಕೆ ವಿರುದ್ದ ಸೋಲು ಅನುಭವಿಸುವ ಮೂಲಕ ಕೆಕೆಆರ್
ಪ್ಲೇಆಫ್ ಪ್ರವೇಶಿಸುವ ಕನಸಿಗೆ ತಣ್ಣಿರು ಎರಚಿದಂತಾಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಕೋಲ್ಕತ್ತ ನೈಟ್ ರೈಡರ್ಸ್ ಪರ ಉತ್ತಮ ಬ್ಯಾಟ್ ಮಾಡಿದ
ನಾಯಕ ಅಜಿಂಕ್ಯ ರಹಾನೆ 48ರನ್ ಬಾರಿಸಿದರು.ಆಂಡ್ರ್ಯೆ ರಸೆಲ್ 38, ಮನಿಷ್ ಪಾಂಡೆ 36 ಮತ್ತು ಸುನಿಲ್ ನರೈನ್ 26ರನ್ ಬಾರಿಸಿದರು. ಅಂತಿಮವಾಗಿ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 179ರನ್‌ಗಳಿಸಿತು.
ಸಿಎಸ್‌ಕೆ ಪರ ಉತ್ತಮ ಬೌಲಿಂಗ್ ಮಾಡಿದ ನೂರ್ ಅಹ್ಮದ್ 4 ವಿಕೆಟ್ ಕಬಳಿಸಿದರು. ರವೀಂದ್ರ ಜಡೇಜಾ ಮತ್ತು ಅಂಶೂಲ್ ಕಾಂಬೊಜ ತಲಾ ಒಂದು ವಿಕೆಟ್ ಪಡೆದುಕೊಂಡರು.
ಈ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಆರಂಭಿಕ ಆಘಾತ ಎದುರಿಸಿದರು. ಆಯುಷ್ ಮಾತ್ರೆ ಮತ್ತು ಡಿವೊನ್ ಕಾನ್ವೆ ಖಾತೆ ತೆರೆಯದೆ ಪೆವಿಲಿಯನ್‌ಗೆ ಮರಳಿದರು. ನಂತರ ಕ್ರೀಸ್‌ಗಿಳಿದ ಉರ್ವಿ ಪಟೇಲ್ 31ರನ್‌ಗಳಿಸಿ ವಿಕೆಟ್ ಒಪ್ಪಿಸಿದರೇ ಜಡೇಜಾ 19ರನ್‌ಗಳಿಸಿದರು. ಅಶ್ವಿನ್ 8 ರನ್‌ಗಳಿಗೆ ಪೆವಿಲಿಯನ್ ಕಡೆಗೆ ನಡೆದರು. ಮೊದಲ ಐದು ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡ ಸಿಎಸ್‌ಕೆ ಸಂಕಷ್ಟಕ್ಕೆ ಸಿಲುಕಿತು. ನಂತರದಲ್ಲಿ ಡೆವಾಲ್ಡ್ ಬ್ರೆವಿಸ್ 52ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ 45ರನ್‌ಗಳಿಸಿದರು. ನೂರ್ ಅಹ್ಮದ್ 2 ರನ್ ಬಾರಿಸಿದರು. ಎಂಎಸ್ ಧೋನಿ ಅಜೇಯ 17ರನ್ ಗಳಿಸಿದರು.
ಕೆಕೆಆರ್ ಪರ ಉತ್ತಮ ಬೌಲಿಂಗ್ ಮಾಡಿದ
ವೈಭವ್ ಅರೋರಾ 3 ವಿಕೆಟ್ ಕಬಳಿಸಿದರು.
ಹರ್ಷಿತ್ ರಾಣಾ ಮತ್ತು ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದುಕೊಂಡರು. ಮೊಯಿನ್ ಅಲಿ ಒಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


