ಬಿಜೆಪಿ ನಾಯಕಿಯೊಬ್ಬಳು ತನ್ನ ಬಾಯ್‌ಫ್ರೆಂಡ್ ಹಾಗೂ ಸ್ನೇಹಿತನಿಂದ ತನ್ನ ಸ್ವಂತ ಮಗಳ ಮೇಲೆ ಅತ್ಯಾಚಾರ ಮಾಡಿಸಿರುವ ನೀಚ ಕೃತ್ಯ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದಿದೆ.
ಹರಿದ್ವಾರ ಬಿಜೆಪಿ ಮೋರ್ಚಾದ ಮಾಜಿ ಅಧ್ಯಕ್ಷೆ ಅನಾಮಿಕ ಶರ್ಮಾ ಎಂಬಾಕೆ ತನ್ನ ಬಾಯ್‌ಫ್ರೆಂಡ್ ಸುಮಿತ್ ಪತ್ವಾಲ್ ಹಾಗೂ ಆತನ ಸ್ನೇಹಿತ ಶುಭಂ ಜತೆ ಸೇರಿಕೊಂಡು ತನ್ನ 13 ವರ್ಷ ವಯಸ್ಸಿನ ಮಗಳ ಮೇಲೆ ಅತ್ಯಾಚಾರ ನಡೆಸಿದ್ದಾರೆ. ಈ ಸಂಬಂಧ ಮೂವರನ್ನೂ ಸಹ ಪೊಲೀಸರು ಬಂಧಿಸಿದ್ದಾರೆ. ಅತ್ತ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಬಿಜೆಪಿ ಅನಾಮಿಕ ಶರ್ಮಾಳನ್ನು ಪಕ್ಷದಿಂದ ವಜಾ ಮಾಡಿದೆ.
2024ರ ತನಕ ಬಿಜೆಪಿ ಮೋರ್ಚಾದ ಅಧ್ಯಕ್ಷನಾಗಿ ಕೆಲಸ ನಿರ್ವಹಿಸುತ್ತಿದ್ದ ಅನಾಮಿಕ ಶರ್ಮಾ ಗಂಡನಿಂದ ಬೇರ್ಪಟ್ಟಿದ್ದಳು ಹಾಗೂ ಗಂಡನ ಬಳಿ ಉಳಿದುಕೊಂಡಿದ್ದ ಮಗಳನ್ನು ನೋಡಲು ಆಗಾಗ ಗಂಡನ ಮನೆಗೆ ಬರುತ್ತಿದ್ದಳು. ಈ ನಡುವೆ ಸುಮಿತ್ ಎಂಬಾತನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು.
ಸುಮಿತ್ ಜೊತೆ ಹೊಟೇಲ್‌ನಲ್ಲಿ ಉಳಿದುಕೊಳ್ಳುತ್ತಿದ್ದ ಅನಾಮಿಕ ಜನವರಿಯಿಂದ ಮಾರ್ಚ್‌ವರೆಗೆ ಹರಿದ್ವಾರ, ಬೃಂದಾವನ ಹಾಗೂ ಆಗ್ರಾದಲ್ಲಿ ಹಲವಾರು ಬಾರಿ ಮಗಳ ಮೇಲೆ ಬಾಯ್‌ಫ್ರೆಂಡ್ ಸುಮಿತ್ ಹಾಗೂ ಆತನ ಸ್ನೇಹಿತ ಶುಭಂನಿಂದ ಅತ್ಯಾಚಾರ ಮಾಡಿಸಿದ್ದಳು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


