Thursday, September 3, 2026
spot_img
More
    spot_img
    HomeTop Storyಕಳೆದ 365 ದಿನಗಳಲ್ಲಿ 9 ಕಾಲ್ತುಳಿತಗಳು, 150ಕ್ಕೂ ಹೆಚ್ಚು ಸಾವು; ಇಲ್ಲಿದೆ ಸಂಪೂರ್ಣ ಪಟ್ಟಿ

    ಕಳೆದ 365 ದಿನಗಳಲ್ಲಿ 9 ಕಾಲ್ತುಳಿತಗಳು, 150ಕ್ಕೂ ಹೆಚ್ಚು ಸಾವು; ಇಲ್ಲಿದೆ ಸಂಪೂರ್ಣ ಪಟ್ಟಿ

    ಜೂನ್‌ 4ರಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಟ್ರೋಫಿ ಸಂಭ್ರಮಾಚರಣೆ ವೇಳೆ ಕ್ರೀಡಾಂಗಣದ ಹೊರಗೆ ಉಂಟಾದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    Advertisement

    ಇದು ಕಳೆದ 365 ದಿನಗಳಲ್ಲಿ ನಡೆದ 9ನೇ ಕಾಲ್ತುಳಿತವಾಗಿದ್ದು, ಎಲ್ಲ ಕಾಲ್ತುಳಿತ ಪ್ರಕರಣಗಳೂ ಸೇರಿ ಸಾವಿನ ಸಂಖ್ಯೆ 150ಕ್ಕೂ ಮೀರಿದೆ. ಹಾಗಾದರೆ ಕಳೆದ 365 ದಿನಗಳಲ್ಲಿ ಸಂಭವಿಸಿದ ಕಾಲ್ತುಳಿತ ದುರಂತಗಳು ಯಾವುವು ಹಾಗೂ ಆ ಅವಘಡಗಳಲ್ಲಿ ಎಷ್ಟು ಜನರು ಸಾವನ್ನಪ್ಪಿದರು ಎಂಬ ಮಾಹಿತಿ ಮುಂದಿದೆ.

    ಉತ್ತರಪ್ರದೇಶದ ಹತ್ರಾಸ್‌ನ ಭೋಲೆ ಬಾಬಾ ಸತ್ಸಂಗ್‌ನಲ್ಲಿ 2024ರ ಜುಲೈ 2ರಂದು ನಡೆದ ಕಾಲ್ತುಳಿತದಲ್ಲಿ 121 ಮಂದಿ ಸಾವು

    ಬಿಹಾರ್‌ನ ಬಾಬಾ ಸಿದ್ಧಾರ್ಥ್‌ ದೇವಾಸ್ಥಾನದಲ್ಲಿ 2024ರ ಆಗಸ್ಟ್‌ 12ರಂದು ನಡೆದ ಕಾಲ್ತುಳಿತದಲ್ಲಿ 7 ಜನರ ಸಾವು

    ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ 2024ರ ಅಕ್ಟೋಬರ್‌ 27ರಂದು ನಡೆದ ಕಾಲ್ತುಳಿತದಲ್ಲಿ ಯಾವುದೇ ಸಾವು ಸಂಭವಿಸಿರಲಿಲ್ಲ.

    ಹೈದರಾಬಾದ್‌ನ ಸಂಧ್ಯಾ ಚಿತ್ರಮಂದಿರದಲ್ಲಿ 2024ರ ಡಿಸೆಂಬರ್‌ 4ರಂದು ಪುಷ್ಪ ಚಿತ್ರದ ಪ್ರೀಮಿಯರ್‌ ಶೋ ವೇಳೆ ನಡೆದಿದ್ದ ಕಾಲ್ತುಳಿತದಲ್ಲಿ 1 ಸಾವು

    ಆಂಧ್ರ ಪ್ರದೇಶದ ತಿರುಪತಿಯಲ್ಲಿ 2025ರ ಜನವರಿ 8ರಂದು ನಡೆದ ವೈಕುಂಠ ಏಕಾದಶಿ ಹಬ್ಬದಂದು ಸಂಭವಿಸಿದ ಕಾಲ್ತುಳಿತದಲ್ಲಿ 6 ಸಾವು

    2025ರ ಜನವರಿ 29ರಂದು ನಡೆದ ಪ್ರಯಾಗ್‌ರಾಜ್‌ನ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಸಾವು

    ಇದೇ ವರ್ಷದ ಫೆಬ್ರವರಿ 15ರಂದು ದೆಹಲಿಯ ರೈಲು ನಿಲ್ದಾಣದಲ್ಲಿ ನಡೆದ ಕಾಲ್ತುಳಿತದಲ್ಲಿ 18 ಸಾವು

    ಗೋವಾದ ಶಿರ್‌ಗಾವ್‌ ಗ್ರಾಮದಲ್ಲಿ 2025ರ ಮೇ 3ರಂದು ನಡೆದ ಕಾಲ್ತುಳಿತದಲ್ಲಿ 6 ಸಾವು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading