ಬೀಜಿಂಗ್: ಚೀನಾದಲ್ಲಿ ಚಿಕುನ್ ಗುನ್ಯಾ ವೈರಸ್ ಹರಡುತ್ತಿದ್ದು, ಸಾವಿರಾರು ಜನರು ಸೋಂಕಿಗೆ ಒಳಗಾಗಿದ್ದಾರೆ.
ಚೀನಾದ ಹಲವೆಡೆ ಸೋಂಕು ಹರಡಿದ್ದು, ಬುಧವಾರದವರೆಗೆ 7000ಕ್ಕೂ ಹೆಚ್ಚು ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ. ಸೊಳ್ಳೆಯ ಮೂಲಕ ಚಿಕುನ್ ಗುನ್ಯಾ ಹರಡುತ್ತಿದ್ದು, ಈ ಸೋಂಕು ಕಾಣಿಸಿಕೊಂಡರೆ ಡೆಂಗ್ಯೂ ಜ್ವರದಂತೆ ಜ್ವರ ಮತ್ತು ಕೀಲು ನೋವು ಕಾಣಿಸಿಕೊಳ್ಳುತ್ತದೆ.
ಯುವಜನತೆ, ವೃದ್ಧರು ಹಾಗೂ ಆರೋಗ್ಯದ ಸಮಸ್ಯೆ ಉಳ್ಳವರು ಚಿಕುನ್ ಗುನ್ಯಾ ಸೋಂಕಿಗೆ ತುತ್ತಾಗುವ ಅಪಾಯ ಹೆಚ್ಚಿದೆ. ಹಾಗಾಗಿ ಸೋಂಕು ಹರಡುವುದನ್ನು ನಿಯಂತ್ರಿಸಲು ಚೀನಾ ಸರ್ಕಾರ ತೆಗೆದುಕೊಂಡಿದೆ.
ಜನರು ತಮ್ಮ ಮನೆ ಬಳಿ, ಪಾಟ್‌ಗಳಲ್ಲಿ ನೀರು ನಿಲ್ಲದಂತೆ ತಡೆಯಬೇಕು, ಇದರಲ್ಲಿ ವಿಫಲರಾದರೆ 10,000 ಯುವಾನ್ (1400 ಡಾಲರ್) ವರೆಗೆ ದಂಡ ವಿಧಿಸಲು ಸರ್ಕಾರ ಮುಂದಾಗಿದೆ. ಸೊಳ್ಳೆಗಳು ಸಂತಾನೋತ್ಪತ್ತಿ ಮಾಡುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಕ್ರಿಮಿನಾಶಕ ಸಿಂಪಡಿಸಲು ಡೋನ್‌ಗಳನ್ನೂ ಬಳಸಿಕೊಳ್ಳಲಾಗುತ್ತಿದೆ.
ಡಿಕೆ ಶಿವಕುಮಾರ್ ಸವಾರಿ ಮಾಡಿದ್ದ ಸ್ಕೂಟರ್ ಮೇಲಿವೆ 34 ಕೇಸ್
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


