ದಕ್ಷಿಣ ಕನ್ನಡ: ದಕ್ಷಿಣ ಕನ್ನಡ: ಧರ್ಮಸ್ಥಳ ಸರಣಿ ಕೊಲೆ, ಅತ್ಯಾಚಾರ ಕೊಲೆಗಳ ಆರೋಪವನ್ನು ಮಾಡಿದ ಅನಾಮಿಕ ವ್ಯಕ್ತಿಯೋರ್ವ ದೂರು ದಾಖಲಿಸಿದ್ದು, ಸದ್ಯ ಪ್ರಕರಣ ಗಂಭೀರ ಸ್ವರೂಪವನ್ನು ಪಡೆದುಕೊಂಡಿದೆ.
ಸಾಕ್ಷಿ ದೂರುದಾರ ತಾನೇ ಹೆಣಗಳನ್ನು ಹೂತಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದ ಕಾರಣ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶಿಸಿದ್ದು, ನಿನ್ನೆ ( ಆಗಸ್ಟ್ 6 ) ಎಂಟನೇ ದಿನದ ಉತ್ಖನನ ಕಾರ್ಯ ನಡೆದಿತ್ತು.
ಇನ್ನು ಎಸ್‌ಐಟಿ ತನಿಖೆ ಆರಂಭವಾಗುತ್ತಿದ್ದಂತೆ ರಾಜ್ಯ ಹಾಗೂ ರಾಷ್ಟ್ರೀಯ ಮಾಧ್ಯಮಗಳೂ ಸಹ ಧರ್ಮಸ್ಥಳ ಗ್ರಾಮದಲ್ಲಿ ಬೀಡುಬಿಟ್ಟಿದ್ದು, ಕ್ಷಣ ಕ್ಷಣದ ಅಪ್‌ಡೇಟ್‌ಗಳನ್ನು ವೀಕ್ಷಕರಿಗೆ ಒದಗಿಸುವ ಕೆಲಸವನ್ನು ಮಾಡುತ್ತಿದ್ದಾರೆ.
ಅದೇ ರೀತಿ ಕರಾವಳಿ ಭಾಗದ ಜನಪ್ರಿಯ ಯಟ್ಯೂಬ್ ಚಾನೆಲ್‌ಗಳಾದ ಕುಡ್ಲ ರಾಂಪೇಜ್ ಹಾಗೂ ಯುನೈಟೆಡ್ ಮೀಡಿಯಾ ಕನ್ನಡ ಈ ಹಿಂದಿನಿಂದಲೂ ಈ ಪ್ರಕರಣದ ಕುರಿತ ವರದಿಗಳನ್ನು ಮಾಡುತ್ತಾ ಬಂದಿದ್ದವು.
ಇದೇ ಚಾನೆಲ್‌ಗಳ ಸಿಬ್ಬಂದಿ ಸಹ ಎಸ್‌ಐಟಿ ತನಿಖೆ ವರದಿಗೆಂದು ಧರ್ಮಸ್ಥಳಕ್ಕೆ ಆಗಮಿಸಿದ್ದರು. ನಿನ್ನೆ ಕೆಲ ಸ್ಥಳೀಯರು ಮಾಡುತ್ತಿದ್ದ ಈ ನಾಲ್ವರ ಮೇಲೆ ಹಲ್ಲೆ ನಡೆಸಿದ್ದು, ಕ್ಯಾಮೆರಾಗೂ ಹಾನಿ ಮಾಡಿದ್ದಾರೆ. ಹಲ್ಲೆಗೊಳಗಾದ ನಾಲ್ವರನ್ನು ಉಜಿರೆಯ ಬೆನಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಕುರಿತು ಪ್ರಕಾಶ್ ರಾಜ್ ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸೌಜನ್ಯ ಪರ ದನಿ ಎತ್ತಿದ ನಿಷ್ಠಾವಂತ ಪತ್ರಕರ್ತರ ಮೇಲೆ ಹಲ್ಲೆ ನಡೆದಿದ್ದನ್ನು ಖಂಡಿಸಿದ್ದಾರೆ.
ಇಂಥ ಗೂಂಡಾಗಳಿಂದಲೇ ಲಕ್ಷಾಂತರ ಜನರು ಪೂಜಿಸುವ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಹಾಗೂ ಕಳಂಕ ಎಂದಿರುವ ಪ್ರಕಾಶ್ ರಾಜ್ ಸೌಜನ್ಯಗೆ ನ್ಯಾಯ ಕೇಳಿದರೆ ಇವರಿಗೇನು ಕಷ್ಟ? ಇವರ ಹಿಂದೆ ಯಾರಿದ್ದಾರೆ? ಇವರನ್ನು ಕಳುಹಿಸಿ ಹೊಡೆಸುತ್ತಿರುವವರು ಯಾರು ಎಂಬ ಅನುಮಾನ ಹೆಚ್ಚಾಗುತ್ತಿದೆ. ಪೊಲೀಸರು ಈ ಗೂಂಡಾಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.
ಧರ್ಮಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ: ಕಲ್ಲು ತೂರಿದವರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು; ವಿಡಿಯೊ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


