ನಟ ದರ್ಶನ್ ಜೊತೆ ಆಪ್ತರಾಗಿದ್ದವರಲ್ಲಿ ನಟ ಪ್ರಜ್ವಲ್ ದೇವರಾಜ್ ಹೌದು. ದರ್ಶನ್ ವಿಚಾರವಾಗಿ ಇತ್ತೀಚೆಗೆ ಪ್ರಜ್ವಲ್ ಮಾತನಾಡಿದ್ದಾರೆ.ಆ ಒಂದು ವಿಷಯಕ್ಕೆ ತುಂಬಾ ಬೇಜಾರಿದೆ ಎಂದಿದ್ದಾರೆ . ಯಾವ ವಿಷಯ?!
ದರ್ಶನ್ ಅಣ್ಣ ಮತ್ತೆ ಜೈಲಿಗೆ ಹೋಗಿದ್ದು ನಿಜಕ್ಕೂ ಬೇಸರ ತಂದಿದೆ. ಸಾಮಾನ್ಯವಾಗಿ ನಮ್ಮ ಫ್ರೆಂಡ್ಸ್ ಗೆ ಏನಾದರೂ ತೊಂದರೆಯಾದರೆ ನಮಗೆ ನೋವಾಗುತ್ತೆ, ಹೀಗಿರುವಾಗ ದರ್ಶನ್ ನನ್ನ ಪಾಲಿಗೆ ಅಣ್ಣ ಇದ್ದಂತೆ, ಕಳೆದ ಬಾರಿ ಜೈಲಿಂದ ಬಂದ ನಂತರ ಅವರನ್ನು ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ.ಅವರನ್ನು ನೋಡಲು ಆಗಿರಲಿಲ್ಲ. ಭೇಟಿಯಾಗೋಕೆ ತುಂಬಾ ಪ್ರಯತ್ನ ಪಟ್ಟೆ, ಆದ್ರೂ ಆಗಲಿಲ್ಲ. ಅದು ನನಗೆ ತುಂಬಾ ಬೇಜಾರಾಗುತ್ತಿರುವ ವಿಷಯ ಈ ವಿಚಾರ ನೆನೆದಾಗಲೆಲ್ಲ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂದಿದ್ದಾರೆ ಪ್ರಜ್ವಲ್.
ದರ್ಶನ್ ಪತ್ನಿ ವಿಜಯಲಕ್ಷ್ಮಿ ಬಗ್ಗೆಯೂ ಪ್ರಜ್ವಲ್ ಮಾತನಾಡಿದ್ದು ವಿಜಯಲಕ್ಷೀಯವರಿಗೆ ಬೆಂಬಲ ಬೇಕಿಲ್ಲ, ಏಕೆಂದರೆ ಅವ್ರು ತುಂಬಾ ಗಟ್ಟಿ, ಅವರು ಎಷ್ಟು ಹೋರಾಡಿದ್ದಾರೆ ಎಂಬುದು ಇಡೀ ಕರ್ನಾಟಕಕ್ಕೆ ಗೊತ್ತು, ಎಂದಿಗೂ ನಾವು ಅವರ ಜೊತೆಯಲ್ಲೇ ಇರುತ್ತೇವೆ ಎಂದಿದ್ದಾರೆ.
ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸಿರುವ ಕರಾವಳಿ ಈಗಾಗಲೇ ಪೋಸ್ಟರ್ ಮತ್ತು ಟೀಸರ್ ಮೂಲಕ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಕರಾವಳಿ ಚಿತ್ರದಲ್ಲಿನ ತಮ್ಮ ಪಾತ್ರದ ಬಗ್ಗೆ ಪ್ರಜ್ವಲ್ ದೇವರಾಜ್ ಮಾತನಾಡಿದರು. ‘ಈ ರೀತಿಯ ಪಾತ್ರದಲ್ಲಿ ನಾನೆಂದೂ ಕಾಣಿಸಿಕೊಂಡಿರಲಿಲ್ಲ. ಬಹಳ ಶ್ರಮ ಹಾಕಿದ್ದೇವೆ. ಭಯಪಟ್ಟು ಮಾಡಿರುವ ಪಾತ್ರವಿದು. ಈ ಸಿನಿಮಾದಲ್ಲಿ ನಟಿಸಿದ್ದಕ್ಕೆ ತುಂಬ ಖುಷಿ ಇದೆ ಎಂದಿದ್ದಾರೆ.
ಈ ಚಿತ್ರದಲ್ಲಿ ಮಹಾವೀರ್ ಎಂದು ವಿಶೇಷ ಪಾತ್ರವಿದೆ, ಈ ಪಾತ್ರದಲ್ಲಿ ಸ್ಟಾರ್ ನಟರು ಕಾಣಿಸಿಕೊಂಡರೆ ಸೂಪರ್ ಎನ್ನುವ ಮಾತುಗಳು ಕೇಳಿ ಬಂದಿತ್ತು. ನಟ ಪ್ರಜ್ವಲ್ ದೇವರಾಜ್ ಮತ್ತು ನಟ ದರ್ಶನ್ ಆಪ್ತರಾಗಿರುವ ಕಾರಣ ಈ ಸ್ಪೆಷಲ್ ಪಾತ್ರವನ್ನು ದರ್ಶನ್ ಮಾಡಲಿದ್ದಾರೆ ಎಂದು ಈ ಹಿಂದೆ ಅನೌನ್ಸ್ ಮಾಡಿದ್ದರು. ಆದರೆ ದರ್ಶನ್ ಜೈಲಿಗೆ ಹೋದ ನಂತರ ಚಿತ್ರ ತಂಡ ದರ್ಶನ್ ಜಾಬದಲು ರಾಜ್ ಬಿ ಶೆಟ್ಟಿಯವರನ್ನು ಈ ಪಾತ್ರಕ್ಕೆ ಕರೆತಂದರು.
ಕರಾವಳಿ ಚಿತ್ರದ ಪ್ರಮುಖ ಪಾತ್ರದಲ್ಲಿ ರಾಜ್ ಬಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಮಾವೀರ ಎನ್ನುವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸುವ ಮೂಲಕ ಕರಾವಳಿ ಸಿನಿಮಾ ಚಿತ್ರಮಂದಿರಕ್ಕೆ ಬರಲು ಸಿದ್ದವಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


