Tuesday, September 1, 2026
spot_img
More
    spot_img
    HomeLatest newsಸೆಕೆಂಡ್ ಹ್ಯಾಂಡ್ ಕಾರು ಖರೀದಿಸ್ತಿದ್ದೀರಾ? ಮೋಸ ಹೋಗದೆ ಇರಲು ಇಲ್ಲಿವೆ ಪ್ರಮುಖ ಸಲಹೆಗಳು!

    ಸೆಕೆಂಡ್ ಹ್ಯಾಂಡ್ ಕಾರು ಖರೀದಿಸ್ತಿದ್ದೀರಾ? ಮೋಸ ಹೋಗದೆ ಇರಲು ಇಲ್ಲಿವೆ ಪ್ರಮುಖ ಸಲಹೆಗಳು!

    ಭಾರತದಲ್ಲಿ ಕಾರುಗಳ ಬೇಡಿಕೆ ದಿನೇ ದಿನೇ ಹೆಚ್ಚುತ್ತಿದೆ. ಹೊಸ ಮಾಡೆಲ್‌ಗಳನ್ನು ಕಂಪನಿಗಳು ನಿರಂತರವಾಗಿ ಬಿಡುಗಡೆ ಮಾಡುತ್ತಿದ್ದರೂ, ಬಜೆಟ್‌ಗೆ ಅನುಗುಣವಾಗಿ ಅನೇಕರು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಕಡಿಮೆ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಕಾರು ಸಿಗುವುದು, ಹೆಚ್ಚಿನ ವೇರಿಯಂಟ್‌ಗಳ ಲಭ್ಯತೆ ಮತ್ತು ಆರ್ಥಿಕ ಹೊರೆ ಕಡಿಮೆಯಿರುವುದು ಇದಕ್ಕೆ ಪ್ರಮುಖ ಕಾರಣಗಳಾಗಿವೆ.

    Advertisement

    ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಒಳ್ಳೆಯ ನಿರ್ಧಾರವಾಗಬಹುದು, ಆದರೆ ಎಚ್ಚರಿಕೆ ವಹಿಸದಿದ್ದರೆ ಅದು ತಲೆನೋವಿನ ಕಾರಣವಾಗಬಹುದು. ದುಬಾರಿ ಐಷಾರಾಮಿ ಕಾರು ಖರೀದಿಸುವುದು ಹಲವರ ಕನಸು. ಆದರೆ ಹೆಚ್ಚಿನ ಹಣದ ಅಗತ್ಯದಿಂದ ಅದು ಅನೇಕರಿಗೆ ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಕೆಲವರು ಕಡಿಮೆ ಬಜೆಟ್‌ನಲ್ಲಿ ಐಷಾರಾಮಿ ಅನುಭವ ಪಡೆಯಲು ಸೆಕೆಂಡ್ ಹ್ಯಾಂಡ್ ಲಕ್ಸುರಿ ಕಾರುಗಳನ್ನು ಆರಿಸುತ್ತಾರೆ.

    ಹೊಸ ಕಾರಿಗೆ ಇರುವಷ್ಟು ಬೇಡಿಕೆ ಭಾರತದಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಮಾರುಕಟ್ಟೆಗೂ ಇದೆ. ಅನೇಕ ಬಡ ಮತ್ತು ಮಧ್ಯಮವರ್ಗದ ಕುಟುಂಬಗಳು ತಮ್ಮ ಕನಸುಗಳನ್ನು ನೆರವೇರಿಸಲು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತವೆ. ಆದಾಗ್ಯೂ, ಕಾರು ಕಡಿಮೆ ಬೆಲೆಯಲ್ಲಿ ಸಿಕ್ಕರೂ ಖರೀದಿಸುವಾಗ ಹೆಚ್ಚಿನ ಎಚ್ಚರಿಕೆ ಅಗತ್ಯ. ಹಾಗಿದ್ದರೆ, ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವಾಗ ಯಾವ ಯಾವ ಟಿಪ್ಸ್ ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.

    ಹಳೆಯ ಕಾರು ಖರೀದಿಗೆ ಕೆಲವು ಸಲಹೆಗಳು

    ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವುದು ಬುದ್ಧಿವಂತಿಕೆಯ ನಿರ್ಧಾರವಾಗಿದ್ದರೂ, ಕೆಲವೊಂದು ಸಂಗತಿಗಳ ಬಗ್ಗೆ ನೀವು ಎಚ್ಚರ ವಹಿಸದಿದ್ದರೆ ಅದು ತಲೆನೋವು ತರಬಹುದು. ಹಾಗಾದ್ರೆ, ಹಳೆಯ ಕಾರು ಖರೀದಿಸುವಾಗ ಯಾವೆಲ್ಲಾ ಅಂಶಗಳನ್ನು ಗಮನಿಸಬೇಕು ಎಂಬುದನ್ನು ನೋಡೋಣ.

    1.ಸರಿಯಾದ ಬಜೆಟ್ ಮತ್ತು ಅಗತ್ಯತೆಗಳು
    ಕಾರು ಖರೀದಿಸುವ ಮೊದಲು ನಿಮ್ಮ ಬಜೆಟ್ ನಿರ್ಧರಿಸಿ. ಕಾರಿನ ಬೆಲೆಯ ಜೊತೆಗೆ, ನಿರ್ವಹಣಾ ವೆಚ್ಚ, ವಿಮೆ, ಇಂಧನ ವೆಚ್ಚ ಮತ್ತು ಆರ್‌ಸಿ ವರ್ಗಾವಣೆ (RC Transfer) ಮುಂತಾದ ಹೆಚ್ಚುವರಿ ವೆಚ್ಚಗಳನ್ನೂ ಪರಿಗಣಿಸಿ. ನೀವು ಕಾರನ್ನು ದಿನನಿತ್ಯದ ಓಡಾಟಕ್ಕೆ ಅಥವಾ ದೂರ ಪ್ರಯಾಣಕ್ಕೆ ಬಳಸಲು ಬಯಸುತ್ತೀರಾ ಎಂಬುದರ ಬಗ್ಗೆ ಸ್ಪಷ್ಟತೆ ಇರಲಿ.

    2.ಸಾಲ ಮತ್ತು ವಿಮೆ
    ಹಳೆಯ ಕಾರಿಗೆ ದೊಡ್ಡ ಮೊತ್ತದ ಸಾಲದ ಅಗತ್ಯವಿರುವುದಿಲ್ಲ, ಆದ್ದರಿಂದ ಇಎಂಐ (EMI) ಕಡಿಮೆಯಿರುತ್ತದೆ. ಹಳೆಯ ಕಾರು ಸಾಲದ ಮೇಲಿನ ಬಡ್ಡಿ ದರಗಳು ಹೊಸ ಕಾರುಗಳಿಗಿಂತ ಸ್ವಲ್ಪ ಹೆಚ್ಚಿರಬಹುದು, ಆದರೆ ವಿಮಾ ಕಂತು ಗಣನೀಯವಾಗಿ ಕಡಿಮೆ ಇರುತ್ತದೆ.

    3.ಸರಿಯಾದ ಡೀಲರ್ ಆಯ್ಕೆ
    ಹಳೆಯ ಕಾರು ಖರೀದಿಸುವಾಗ ವಿಶ್ವಾಸಾರ್ಹ ಡೀಲರ್ ಅನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ಡೀಲರ್‌ಗಳು ತಮ್ಮ ವ್ಯಾಪಾರಕ್ಕಾಗಿ ಮೋಸ ಮಾಡುವ ಸಾಧ್ಯತೆ ಇರುವುದರಿಂದ, ಪ್ರಸಿದ್ಧ ಮತ್ತು ನಂಬಲರ್ಹ ಡೀಲರ್‌ಗಳಿಂದಲೇ ಕಾರು ಖರೀದಿಸಲು ಪ್ರಯತ್ನಿಸಿ.

    4.ಕಡ್ಡಾಯ ಟೆಸ್ಟ್ ಡ್ರೈವ್
    ಕಾರು ನೋಡಲು ಸುಂದರವಾಗಿ ಕಂಡರೂ ಅದರ ಎಂಜಿನ್ ಮತ್ತು ಬಿಡಿಭಾಗಗಳ ಸ್ಥಿತಿಯ ಬಗ್ಗೆ ತಿಳಿದಿರುವುದು ಅಗತ್ಯ. ಆದ್ದರಿಂದ, ಕನಿಷ್ಠ 15-20 ನಿಮಿಷಗಳ ಕಾಲ ಟೆಸ್ಟ್ ಡ್ರೈವ್ ಮಾಡಿ. ಗೇರ್ ಬದಲಾಯಿಸುವುದು, ಬ್ರೇಕ್‌ಗಳು ಮತ್ತು ಹ್ಯಾಂಡ್ಲಿಂಗ್‌ನಂತಹ ವಿಷಯಗಳನ್ನು ಪರಿಶೀಲಿಸಿ. ಅಗತ್ಯವಿದ್ದರೆ ಒಬ್ಬ ನುರಿತ ಮೆಕ್ಯಾನಿಕ್ ಸಹಾಯ ಪಡೆದುಕೊಳ್ಳಿ.

    1. ದಾಖಲೆಗಳ ಪರಿಶೀಲನೆ
      ಕಾರಿನ ಎಲ್ಲಾ ದಾಖಲೆಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಿ. ಈ ಕೆಳಗಿನ ಅಂಶಗಳನ್ನು ತಪ್ಪದೇ ಪರಿಶೀಲಿಸಿ,ಆರ್‌ಸಿ ಬುಕ್ (RC Book): ಮಾಲೀಕರ ಹೆಸರು, ಚೇಸಿಸ್ ಮತ್ತು ಎಂಜಿನ್ ಸಂಖ್ಯೆ ಆರ್‌ಸಿ ಬುಕ್ ಜೊತೆ ಹೊಂದಿಕೆಯಾಗಿದೆಯೇ ಎಂದು ಪರಿಶೀಲಿಸಿ. ಕಾರು ಮಾರಾಟ ಮಾಡುವಾಗ ಇದು ಎಷ್ಟನೇ ಮಾಲೀಕರು ಎಂಬುದನ್ನು ಸಹ ತಿಳಿದುಕೊಳ್ಳಿ.

    ವಿಮೆ (Insurance): ವಿಮೆ ಮಾನ್ಯವಾಗಿದೆಯೇ ಮತ್ತು ಯಾವ ಪ್ರಕಾರದ ವಿಮೆಯಾಗಿದೆ ಎಂಬುದನ್ನು ಪರಿಶೀಲಿಸಿ.ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUC): ಪಿಯುಸಿ ಪ್ರಮಾಣಪತ್ರದ ಮಾನ್ಯತೆ ಪರಿಶೀಲಿಸಿ.ಕಾರಿನ ಮೇಲೆ ಯಾವುದೇ ಸಾಲ ಬಾಕಿ ಇಲ್ಲ ಎಂದು ಖಚಿತಪಡಿಸಿಕೊಳ್ಳಿ.

    ಭಾರತಕ್ಕೆ ಎಂಟ್ರಿ ಕೊಟ್ಟ ಮೊದಲ ಟೆಸ್ಲಾ ಕಾರು: ‘ಮಾಡಲ್ ವೈ’ ಖರೀದಿಸಿದ ಮಹಾರಾಷ್ಟ್ರ ಸಚಿವರು!

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading