Tuesday, September 1, 2026
spot_img
More
    spot_img
    HomeLatest newsರಕ್ತಚಂದ್ರ ಗ್ರಹಣ: ಆಕಾಶದ ವಿಸ್ಮಯಕ್ಕೆ ಕ್ಷಣಗಣನೆ, ವೀಕ್ಷಣೆ ಹೇಗೆ?

    ರಕ್ತಚಂದ್ರ ಗ್ರಹಣ: ಆಕಾಶದ ವಿಸ್ಮಯಕ್ಕೆ ಕ್ಷಣಗಣನೆ, ವೀಕ್ಷಣೆ ಹೇಗೆ?

    ಖಗೋಳಶಾಸ್ತ್ರದಲ್ಲಿ ಗ್ರಹಣವು ಒಂದು ವಿಸ್ಮಯ. ಇದು ಮನುಷ್ಯನ ಊಹೆಗೂ ನಿಲುಕದಂಥ ಅಚ್ಚರಿ. ಗ್ರಹಣ ಎಂದರೆ ಒಂದು ಕಡೆ ಕುತೂಹಲ, ಮತ್ತೊಂದು ಕಡೆ ಆತಂಕ ಮತ್ತು ಭಯ. ಪ್ರಾಚೀನ ಭಾರತದಲ್ಲಿ ಗ್ರಹಣವನ್ನು ದೇವರೊಂದಿಗೆ ಜೋಡಿಸಿ ಹಲವು ನಂಬಿಕೆಗಳು ಹುಟ್ಟಿಕೊಂಡಿವೆ. ಗ್ರಹಣದಿಂದ ಕೆಲವರಿಗೆ ಕೆಟ್ಟದಾಗುತ್ತೆ, ಇನ್ನು ಕೆಲವರಿಗೆ ಒಳ್ಳೆಯದಾಗುತ್ತೆ ಎಂಬಂತಹ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಗ್ರಹಣದಿಂದ ಏನಾಗಬಹುದು ಎಂಬ ಭಯ ಅನೇಕರನ್ನು ಕಾಡುತ್ತದೆ.

    Advertisement

    ವಿಜ್ಞಾನದ ಪ್ರಕಾರ ಗ್ರಹಣವೆಂದರೆ ಕೇವಲ ಒಂದು ಖಗೋಳ ವಿದ್ಯಮಾನ. ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ರೇಖೆಯಲ್ಲಿ ಬಂದಾಗ ಗ್ರಹಣ ಸಂಭವಿಸುತ್ತದೆ. ಇಂದು ಭಾರತದಲ್ಲಿ ಖಗ್ರಾಸ ಚಂದ್ರಗ್ರಹಣ ಸಂಭವಿಸಲಿದೆ. 2022ರ ನಂತರ ಇದೊಂದು ಸುದೀರ್ಘ ಪೂರ್ಣ ಚಂದ್ರಗ್ರಹಣವಾಗಿದ್ದು, ಸುಮಾರು 7 ವರ್ಷಗಳ ನಂತರ ದೇಶದಾದ್ಯಂತ ಸ್ಪಷ್ಟವಾಗಿ ಗೋಚರಿಸಲಿದೆ. ವಿಜ್ಞಾನಿಗಳ ಪ್ರಕಾರ, ಇದು ಆಕಾಶ ವೀಕ್ಷಣೆಗೆ ಒಂದು ಅಪೂರ್ವ ಅವಕಾಶ.ಇಂದು ರಾತ್ರಿ ನಭೋಮಂಡಲದಲ್ಲಿ ಅಪರೂಪದ ರಕ್ತಚಂದ್ರ ಗ್ರಹಣದ ವಿಸ್ಮಯ ನಡೆಯಲಿದೆ. ಈ ಖಗೋಳ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ದೇಶದಾದ್ಯಂತ ಜನರು ಕಾತರದಿಂದ ಕಾಯುತ್ತಿದ್ದಾರೆ.

    ಚಂದ್ರ ರಕ್ತವರ್ಣದಲ್ಲಿ ಏಕೆ ಕಾಣಿಸುತ್ತಾನೆ?

    ಸೂರ್ಯ ಮತ್ತು ಚಂದ್ರರ ನಡುವೆ ಭೂಮಿ ನಿಖರವಾಗಿ ಬಂದಾಗ ಚಂದ್ರಗ್ರಹಣ ಸಂಭವಿಸುತ್ತದೆ. ಆಗ ಭೂಮಿಯ ನೆರಳು ಚಂದ್ರನ ಮೇಲೆ ಬೀಳುತ್ತದೆ. ಭೂಮಿಯ ವಾತಾವರಣದ ಮೂಲಕ ಸೂರ್ಯನ ಬೆಳಕು ಹಾದುಹೋಗುವಾಗ, ನೀಲಿ ಬಣ್ಣದ ಬೆಳಕು ಚದುರಿಹೋಗುತ್ತದೆ, ಆದರೆ ಕೆಂಪು ಬಣ್ಣದ ಬೆಳಕು ಮಾತ್ರ ಚಂದ್ರನನ್ನು ತಲುಪುತ್ತದೆ. ಈ ಕೆಂಪು ಬೆಳಕು ಚಂದ್ರನ ಮೇಲೆ ಪ್ರತಿಫಲಿಸುವುದರಿಂದ ಅದು ರಕ್ತವರ್ಣದಲ್ಲಿ ಕಾಣಿಸುತ್ತದೆ.

    ರಕ್ತಚಂದ್ರ ಗ್ರಹಣ ವೀಕ್ಷಣೆ ಹೇಗೆ?
    ಈ ಅದ್ಭುತ ವಿದ್ಯಮಾನವನ್ನು ವೀಕ್ಷಿಸಲು ಯಾವುದೇ ವಿಶೇಷ ಉಪಕರಣಗಳ ಅಗತ್ಯವಿಲ್ಲ. ಬರಿಗಣ್ಣಿನಿಂದಲೇ ಸುರಕ್ಷಿತವಾಗಿ ನೋಡಬಹುದು. ಆದರೆ, ದೂರದರ್ಶಕ ಅಥವಾ ಬೈನಾಕ್ಯುಲರ್ಸ್‌ ಬಳಸಿದರೆ ಚಂದ್ರನ ಮೇಲ್ಮೈಯಲ್ಲಿರುವ ಕುಳಿಗಳು ಮತ್ತು ಕೆಂಪು ಛಾಯೆಯನ್ನು ಮತ್ತಷ್ಟು ಸ್ಪಷ್ಟವಾಗಿ ವೀಕ್ಷಿಸಬಹುದು. ನಗರದ ಬೆಳಕಿನಿಂದ ದೂರವಿರುವ ಸ್ಥಳಗಳು, ಟೆರೇಸ್‌ಗಳು ಅಥವಾ ಉದ್ಯಾನವನಗಳು ವೀಕ್ಷಣೆಗೆ ಸೂಕ್ತವಾಗಿವೆ.

    ಬೆಂಗಳೂರು, ದೆಹಲಿ, ಮುಂಬೈ ಸೇರಿದಂತೆ ಭಾರತದಾದ್ಯಂತ ಗ್ರಹಣ ಸ್ಪಷ್ಟವಾಗಿ ಗೋಚರಿಸಲಿದೆ. ಬೆಂಗಳೂರಿನ ನೆಹರೂ ತಾರಾಲಯ ಮತ್ತು ಲಾಲ್‌ಬಾಗ್‌ನಂತಹ ಸ್ಥಳಗಳಲ್ಲಿ ವಿಶೇಷ ವೀಕ್ಷಣಾ ವ್ಯವಸ್ಥೆಗಳನ್ನು ಮಾಡಲಾಗಿದೆ.

    ಗ್ರಹಣದ ಸಮಯಗಳು
    ಗ್ರಹಣ ಪ್ರಾರಂಭ: ಸೆಪ್ಟೆಂಬರ್ 7, ರಾತ್ರಿ 8:58 (IST)

    ಸಂಪೂರ್ಣ ಗ್ರಹಣ (ಕೆಂಪು ಚಂದ್ರ): ರಾತ್ರಿ 11:00 ರಿಂದ 12:22 (ಸುಮಾರು 82 ನಿಮಿಷಗಳ ಕಾಲ)

    ಗರಿಷ್ಠ ಗ್ರಹಣ (ಅತ್ಯಂತ ಕೆಂಪು ಬಣ್ಣ): ರಾತ್ರಿ 11:41ಕ್ಕೆ

    ಗ್ರಹಣದ ಅಂತ್ಯ: ಸೆಪ್ಟೆಂಬರ್ 8, ಬೆಳಗ್ಗೆ 2:25 (IST)

    ಈ ಖಗೋಳ ವಿದ್ಯಮಾನ ಸುಮಾರು 5 ಗಂಟೆ 27 ನಿಮಿಷಗಳ ಕಾಲ ನಡೆಯಲಿದೆ.

    ಡಿಎಸ್‌ಎಲ್‌ಆರ್ (DSLR) ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಈ ವಿಸ್ಮಯವನ್ನು ಸೆರೆಹಿಡಿಯಲು ಟ್ರೈಪಾಡ್ ಬಳಸಬಹುದು. 1-2 ಸೆಕೆಂಡ್ ಎಕ್ಸ್‌ಪೋಷರ್, ISO 400-800, ಮತ್ತು ಮ್ಯಾನುವಲ್ ಫೋಕಸ್ ಬಳಸಿ ಟೈಮ್-ಲ್ಯಾಪ್ಸ್ ವಿಡಿಯೋ ಅಥವಾ ಫೋಟೋಗಳನ್ನು ತೆಗೆಯಬಹುದು.

    ಕರ್ನಾಟಕ ವಿಧಾನ ಪರಿಷತ್‌ನ 4 ಸ್ಥಾನಗಳಿಗೆ ರಾಜ್ಯಪಾಲರ ಒಪ್ಪಿಗೆ: ಪಟ್ಟಿಯಲ್ಲಿ ಯಾರೆಲ್ಲಾ ಇದ್ದಾರೆ?


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading