ಧರ್ಮಸ್ಥಳದಲ್ಲಿ ಶವ ಹೂತಿದ್ದಾಗಿ ಹೇಳಿದ ಆರೋಪದಲ್ಲಿ ಬಂಧಿತನಾಗಿದ್ದ ಚಿನ್ನಯ್ಯನನ್ನು ಪೊಲೀಸರು ಬಂಧಿಸಿದ ನಂತರ, ಬೆಳ್ತಂಗಡಿ ಜೆ.ಎಂ.ಎಫ್.ಸಿ. ಕೋರ್ಟ್ ನ್ಯಾಯಾಂಗ ಬಂಧನದ ಆದೇಶದ ನಂತರ ಅವನನ್ನು ಮಧ್ಯರಾತ್ರಿಯಲ್ಲಿ ಶಿವಮೊಗ್ಗ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ.
16 ದಿನಗಳ ಎಸ್ ಐಟಿ ಕಸ್ಟಡಿ ಮುಗಿದ ಬಳಿಕ ಶನಿವಾರ ವಿಚಾರಣೆಯ ಕಾರಣಕ್ಕಾಗಿ ಚಿನ್ನಯ್ಯನನನ್ನು ಬೆಳ್ತಂಗಡಿ ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದೆ. ಹಾಗಾಗಿ ಭದ್ರತೆಯ ದೃಷ್ಟಿಯಿಂದ ಚಿನ್ನಯ್ಯನನ್ನು ದಕ್ಷಿಣ ಕನ್ನಡದಿಂದ ಶಿವಮೊಗ್ಗಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಯಿತು.
ಶಿವಮೊಗ್ಗ ಕೇಂದ್ರ ಕಾರಾಗೃಹವು ಹೈಟೆಕ್ ಮತ್ತು ಸುಸಜ್ಜಿತವಾಗಿದೆ. ಸುಮಾರು 850 ಕೈದಿಗಳಿದ್ದಾರೆ. ಚಿನ್ನಯ್ಯನನ್ನು ಜೈಲಿನ ಕಾವೇರಿ ಬ್ಯಾರಕ್‌ನಲ್ಲಿ ಇರಿಸಲಾಗಿದೆ. ಇದು ಹೊಸ ಕೈದಿಗಳಿಗೆ ನಿಯೋಜಿಸುವ ಪ್ರಾಥಮಿಕ ಬ್ಯಾರಕ್ ಆಗಿದೆ. ಅಲ್ಲಿನ ಅಧಿಕಾರಿಗಳು ಚಿನ್ನಯ್ಯನ ನಡವಳಿಕೆಯನ್ನು ಗಮನಿಸಿ, ಕೆಲವು ದಿನಗಳ ನಂತರ ಬೇರೆ ಬ್ಯಾರಕ್‌ಗೆ ಸ್ಥಳಾಂತರಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಆಗಸ್ಟ್ 23 ರಂದು ಎಸ್‌ಐಟಿ ಅಧಿಕಾರಿಗಳು ಚಿನ್ನಯನನ್ನು ಬಂಧಿಸಿ ಕೋರ್ಟಿಗೆ ಹಾಜರುಪಡಿಸಿದ್ದರು. ಹೆಚ್ಚಿನ ವಿಚಾರಣಾಗಿ ಕೋರ್ಟ್ ಆರೋಪಿಯನ್ನು 12 ದಿನಗಳ ಕಾಲ ಎಸ್‌ಐಟಿ ಕಸ್ಟಡಿಗೆ ನೀಡಿತ್ತು. ಬಳಿಕ ಮತ್ತೆ ಮೂರು ದಿನ ಕಸ್ಟಡಿಗೆ ಎಸ್‌ಐಟಿ ಪೊಲೀಸರು ಪಡೆದಿದ್ದರು. ಇದೀಗ ಒಟ್ಟು 15 ದಿನಗಳ ಕಾಲ ಎಸ್‌ಐಟಿ ಕಸ್ಟಡಿ ನಂತರ ಬುರುಡೆ ಚಿನ್ನಯ್ಯ ಜೈಲು ಪಾಲಾಗಿದ್ದಾರೆ.
ಉಚಿತ ಕಾನೂನು ಸೇವೆಗಳ ಪ್ರಾಧಿಕಾರ ನೇಮಿಸಿದ್ದ ಚಿನ್ನಯ್ಯ ಪರ ವಕೀಲರಿಂದ ಜಾಮೀನು ಕೋರಿ ಬೆಳ್ತಂಗಡಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್ ಸೆಪ್ಟೆಂಬರ್ 9ಕ್ಕೆ ಮುಂದೂಡಿದೆ.
ಧರ್ಮಸ್ಥಳ ವಿರುದ್ಧ ಷಡ್ಯಂತ್ರ ನಡೆದಿದೆ, ನನ್ನ ಪಾಡಿಗೆ ನಾನು ಇದ್ದೆ, ಇದೆಲ್ಲ ನನಗ್ಯಾಕೆ ಬೇಕಿತ್ತು, ಹಣದ ಆಸೆಗೆ ನಾನು ಬಲಿಯಾದ ಎಂದ ಚಿನ್ನಯ್ಯ, ನನ್ನ ಬಳಸಿಕೊಂಡು ಧರ್ಮಸ್ಥಳಕ್ಕೆ ಕಳಂಕ ತರಲು ಹುನ್ನಾರ ನಡೆದಿದೆ. ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ಷಡ್ಯಂತ್ರ ಮಾಡಿದ್ದಾರೆ ಅಂತಾ ಎಸ್ಐಟಿ ಎದುರು ಗ್ಯಾಂಗ್‌ನ ಹೆಸರನ್ನ ಚಿನ್ನಯ್ಯ ಹೇಳಿದ್ದಾನೆ ಎನ್ನಲಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


