ದೂರುದಾರ ಚಿನ್ನಯ್ಯ ತಾನು ನ್ಯಾಯಾಲಯಕ್ಕೆ ಬಂದಾಗ ತಂದಿದ್ದ ಬುರುಡೆಯ ರಹಸ್ಯ ಕೊನೆಗೂ ಬಹಿರಂಗಗೊಂಡಿದೆ.ಧರ್ಮಸ್ಥಳ ಬುರುಡೆ ಪ್ರಕರಣ ರೋಚಕ ತಿರುಪು ಪಡೆದುಕೊಂಡಿದೆ. ಧರ್ಮಸ್ಥಳದ ಹಲವೆಡೆ ಶವಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ಮಾಸ್ಕ್ ಮ್ಯಾನ್ ಆರೋಪಿ ಚಿನ್ನಯ್ಯ ಎಸ್ ಐಟಿ ವಿಚಾರಣೆ ವೇಳೆ ಹಲವು ಸ್ಫೋಟಕ ಹೇಳಿಕೆ ನೀಡಿದ್ದಾನೆ.
ಸಾಕ್ಷಿ ದೂರುದಾರನಾಗಿ ಬಂದ ಚಿನ್ನಯ್ಯನ ಬಂಧನವಾದಾಗಿನಿಂದ ಆತ ತಂದಿದ್ದ ಬುರುಡೆಯ ಬಗ್ಗೆ ಹಲವಾರು ಊಹಾಪೋಹಗಳು ಎಲ್ಲೆಡೆ ಹರಿದಾಡಿದ್ದವು. ಅದರ ಬಗ್ಗೆ ದಿನಕ್ಕೊಂದರಂತೆ ಕತೆಗಳೂ ಸೃಷ್ಟಿಯಾಗಿದ್ದವು.ಈಗ ಸತ್ಯ ಹೊರಬಿದ್ದಿದೆ.
ಬುರುಡೆ ತಂದುಕೊಟ್ಟಿದ್ದೇ ಸೌಜನ್ಯಾ ಮಾವ ವಿಠಲಗೌಡ ಎಂದು ವಿಚಾರಣೆ ವೇಳೆ ಹೇಳಿದ್ದಾನೆ ಎಂದು ತಿಳಿದುಬಂದಿದೆ.ವಿಠಲ ಗೌಡನನ್ನು ವಶಕ್ಕೆ ಪಡೆದ ಎಸ್ ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದ್ದಾರೆ. ಬುರುಡೆಯು ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಅಸ್ಥಿಪಂಜರದ ಅವಶೇಷವಾಗಿದೆ.
ಕಾಡಿನಿಂದ ಬುರುಡೆ ತಂದುಕೊಟ್ಟಿದ್ದೇ ಸೌಜನ್ಯಾ ಮಾವ ವಿಠಲ ಗೌಡ. ಬಂಗ್ಲಗುಡ್ಡದ ಕಾಡಿನಿಂದ ಬುರುಡೆ ತಂದಿದ್ದಾಗಿ ವಿಠಲ ಗೌಡ ಹೇಳಿದ್ದ. ಈ ಹಿನ್ನೆಲೆಯಲ್ಲಿ ಸೌಜನ್ಯ ಮಾವ ವಿಠಲ ಗೌಡ ಹಾಗೂ ಹೋರಾಟಗಾರ ಜಯಂತ್ ಟಿ. ಅವರೊಂದಿಗೆ ಶನಿವಾರ ಸಂಜೆ ಸ್ಥಳಕ್ಕೆ ತೆರಳಿದ ಎಸ್‌ಐಟಿ ತಂಡ ಸ್ಥಳ ಮಹಜರು ನಡೆಸಿ ಮಹತ್ವದ ಸಾಕ್ಷಿ ಕಲೆ ಹಾಕಿದೆ. ಬಂಗ್ಲಗುಡ್ಡದ ಯಾವ ಸ್ಥಳದಿಂದ ವಿಠಲ ಗೌಡ ಬುರುಡೆ ತಂದಿದ್ದಾನೆ ಎಂಬುದನ್ನು ಪರಿಶೀಲಿಸಿರುವ ಅಧಿಕಾರಿಗಳು ಬುರುಡೆ ಸಿಕ್ಕ ಸ್ಥಳದಲ್ಲಿದ್ದ ಮಣ್ಣನ್ನು ಸಂಗ್ರಹಿಸಿ ಎಫ್ ಎಸ್ ಎಲ್ ಗೆ ರವಾನಿಸಿದ್ದಾರೆ.
ಚಿನ್ನಯ್ಯ ಹಾಗೂ ವಿಠಲ್ ಗೌಡ ಅವರಿಗೆ ಹಳೆಯ ಸ್ನೇಹ ಸಂಬಂಧವಿತ್ತು. ನೇತ್ರಾವತಿ ನದಿ ತೀರದಲ್ಲಿ ಚಿಕ್ಕ ಹೋಟೆಲ್ ನಡೆಸುತ್ತಿದ್ದ ವಿಠಲ್ ಗೌಡ ಅವರ ಅಂಗಡಿಯಲ್ಲಿ ಚಿನ್ನಯ್ಯ ತಂಗುತ್ತಿದ್ದ. ಚಿನ್ನಯ್ಯನಿಗೆ ಬುರುಡೆ ತಂದು ಕೊಟ್ಟಿದ್ದೆ ವಿಠಲ್ ಗೌಡ ಎನ್ನುವುದು ಗೊತ್ತಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


