Thursday, November 5, 2026
spot_img
More
    spot_img
    HomeLatest newsಮೈಸೂರು ದಸರಾ ವೀಕ್ಷಣೆ: ‘ಗೋಲ್ಡ್‌ ಕಾರ್ಡ್‌’ಟಿಕೆಟ್ ದರ ಎಷ್ಟು

    ಮೈಸೂರು ದಸರಾ ವೀಕ್ಷಣೆ: ‘ಗೋಲ್ಡ್‌ ಕಾರ್ಡ್‌’ಟಿಕೆಟ್ ದರ ಎಷ್ಟು

    ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ರಾಜ್ಯದ ಪ್ರಮುಖ ಆಕರ್ಷಣೆಯಲ್ಲಿ ಒಂದು. ಮೈಸೂರು ದಸರಾ ನೋಡಲು ಬೇರೆ ಬೇರೆ ರಾಜ್ಯದಿಂದ, ವಿದೇಶದಿಂದ ಜನ ಆಗಮಿಸುತ್ತಾರೆ.  ಜಂಬೂಸವಾರಿ ಹಾಗೂ ಪಂಜಿನ ಕವಾಯತು ಕಾರ್ಯಕ್ರಮಗಳ ವೀಕ್ಷಣೆಗೆ ಟಿಕೆಟ್ ವೆಬ್ ಸೈಟ್ ಓಪನ್ ಆಗಿದೆ.  

    ಈ ಬಾರಿಯ ದಸರಾ ಸೆ.22ರಿಂದ ಅ.2ರವರೆಗೆ ನಡೆಯಲಿದೆ. https://mysoredasara.gov.in/ ಆಧಿಕೃತ ಜಾಲತಾಣದಲ್ಲಿ ಶನಿವಾರ ಮಧ್ಯಾಹ್ನ 3ರಿಂದಲೇ ಆನ್‌ಲೈನ್‌ನಲ್ಲಿ ಖರೀದಿಗೆ ಲಭ್ಯ ಇದೆ.

    ದಸರಾ ಗೋಲ್ಡ್ ಕಾರ್ಡ್ ₹6500, ಜಂಬೂಸವಾರಿ ಟಿಕೆಟ್ ₹3500 ಹಾಗೂ ಪಂಜಿನ ಕವಾಯತು ಟಿಕೆಟ್‌ಗೆ ₹1500 ನಿಗದಿ ಮಾಡಲಾಗಿದೆ.

    ಗೋಲ್ಡ್‌ ಕಾರ್ಡ್‌ ಖರೀದಿಸಿದವರಿಗೆ (ಒಂದಕ್ಕೆ ₹ 6,500) ಚಾಮರಾಜೇಂದ್ರ ಮೃಗಾಲಯ, ಚಾಮುಂಡಿಬೆಟ್ಟ (ವಿಶೇಷ ದರ್ಶನಕ್ಕೆ), ಮೈಸೂರು ಅರಮನೆಗೆ ಒಂದು ಬಾರಿ ಉಚಿತವಾಗಿ ಪ್ರವೇಶ ದೊರೆಯಲಿದೆ. ಡ್ರೋನ್‌ ಶೋ, ಜಂಬೂಸವಾರಿ ಹಾಗೂ ಪಂಜಿನ ಕವಾಯತು ವೀಕ್ಷಣೆಗೆ ಪ್ರತ್ಯೇಕವಾಗಿ ಆಸನಗಳನ್ನು ವ್ಯವಸ್ಥೆ ಮಾಡಲಾಗಿದೆ.

    ವಿಶ್ವವಿಖ್ಯಾತ ಮೈಸೂರು ದಸರಾದ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸಕಲ ಸಿದ್ಧತೆ ಪೂರ್ಣಸಿದ್ಧತೆ ಪೂರ್ಣಗೊಂಡಿದೆ.ಸತತ 6ನೇ ಬಾರಿಗೆ ಅಭಿಮನ್ಯು ಆನೆಯು ತಾಯಿ ಚಾಮುಂಡೇಶ್ವರಿ ವಿಗ್ರಹ ಇರುವ ಚಿನ್ನದ ಅಂಬಾರಿಯನ್ನು ಹೊರುತ್ತಿದ್ದು, ಈ ಬಾರಿ ಅಭಿಮನ್ಯು ಆನೆಯೊಂದಿಗೆ ಒಟ್ಟು 14 ಆನೆಗಳು ಜಂಬೂ ಸವಾರಿಯಲ್ಲಿ ಹೆಜ್ಜೆ ಹಾಕಲಿವೆ.

    ಅ.2ರ ವಿಜಯದಶಮಿ ದಿನ ಜಂಬೂಸವಾರಿ ಮೆರವಣಿಗೆ ಇರುತ್ತದೆ. 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ಸಾಗುವ ಚಾಮುಂಡೇಶ್ವರಿ ಉತ್ಸವ ಮೂರ್ತಿ ಮೆರವಣಿಗೆಯಲ್ಲಿ ಸಾಗಲಿದೆ. 48 ಸಾವಿರ ಆಸನ ವ್ಯವಸ್ಥೆ ಮಾಡಲು, ಅಷ್ಟೇ ಪ್ರಮಾಣದಲ್ಲಿ ಪಾಸ್, ಟಿಕೆಟ್, ಕಾರ್ಡ್‌ ನೀಡಲು ನಿರ್ಧರಿಸಲಾಗಿದೆ. ಇದರಿಂದಾಗಿ, ವಿವಿಐಪಿ, ವಿಐಪಿಗಳಿಗೆ ಕೂಡ 1 ಸಾವಿರ ಆಸನ ಕಡಿತಗೊಳಿಸಲು ತೀರ್ಮಾನಿಸಲಾಗಿದೆ.

    ನಿಯಮಗಳು ಮತ್ತು ಷರತ್ತುಗಳು (ಟಿಕೆಟ್ ಖರಿದಿಸಲು)
    1. ಟಿಕೆಟ್/ಗೋಲ್ಡ್ ಕಾರ್ಡ್ ರಿಡೆಂಪ್ಶನ್‌ಗೆ ಸರ್ಕಾರ ನೀಡಿದ ಮಾನ್ಯ ಐಡಿ ಪ್ರೂಫ್ ಕಡ್ಡಾಯವಾಗಿದೆ.
    2. ಮೂರನೇ ವ್ಯಕ್ತಿಯಿಂದ ರಿಡೆಂಪ್ಶನ್‌ಗೆ, ಗೋಲ್ಡ್ ಕಾರ್ಡ್ ಹೊಂದಿರುವವರು ಮತ್ತು ಅಧಿಕೃತ ವ್ಯಕ್ತಿಯ ಐಡಿ ಪ್ರೂಫ್ ಜೊತೆಗೆ ಅಧಿಕೃತ ಪತ್ರ ಕಡ್ಡಾಯವಾಗಿದೆ.
    3. ಗೋಲ್ಡ್ ಕಾರ್ಡ್ ಸದಸ್ಯರಿಗಾಗಿ ಡ್ರೋನ್ ಶೋ ಅನ್ನು ನಿರ್ದಿಷ್ಟ ದಿನಾಂಕದಂದು ನಿಗದಿಪಡಿಸಲಾಗಿದೆ, ಅದನ್ನು ಕಾರ್ಡ್‌ನ ಹಿಂಭಾಗದಲ್ಲಿ ಉಲ್ಲೇಖಿಸಲಾಗುತ್ತದೆ. ನಮೂದಿಸಿದ ದಿನಾಂಕದಂದು ಮಾತ್ರ ಪ್ರವೇಶವನ್ನು ಅನುಮತಿಸಲಾಗುತ್ತದೆ.
    4. ಒಮ್ಮೆ ಬುಕ್ ಮಾಡಿದ ಟಿಕೆಟ್‌ಗಳನ್ನು ರದ್ದುಗೊಳಿಸಲು, ವಿನಿಮಯ ಮಾಡಿಕೊಳ್ಳಲು ಅಥವಾ ಮರುಪಾವತಿಸಲು ಸಾಧ್ಯವಿಲ್ಲ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search