Monday, November 9, 2026
spot_img
More
    spot_img
    HomeEntertainmentವಿಧಿವಶರಾದ ಕೆಜಿಎಫ್‌ ಚಾಚಾ ಹರೀಶ್‌ ರಾಯ್‌ ಮಗನನ್ನು ಕಾರಿನೊಳಗೆ ಕರೆದೊಯ್ದು ಸಹಾಯ ಮಾಡಿದ ಯಶ್;‌ ವಿಡಿಯೊ

    ವಿಧಿವಶರಾದ ಕೆಜಿಎಫ್‌ ಚಾಚಾ ಹರೀಶ್‌ ರಾಯ್‌ ಮಗನನ್ನು ಕಾರಿನೊಳಗೆ ಕರೆದೊಯ್ದು ಸಹಾಯ ಮಾಡಿದ ಯಶ್;‌ ವಿಡಿಯೊ

    ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟ ಹರೀಶ್‌ ರಾಯ್‌ ನಿನ್ನೆ ( ನವೆಂಬರ್‌ 6 )ನಿಧನರಾದರು. ಕ್ಯಾನ್ಸರ್‌ ಖಾಯಿಲೆಗೆ ತುತ್ತಾಗಿದ್ದ ಖಳನಟ ಹರೀಶ್‌ ರಾಯ್‌ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು.

    ಹರೀಶ್‌ ರಾಯ್‌ ಕನ್ನಡದ ಹಲವು ಸ್ಟಾರ್‌ ನಟರ ಚಿತ್ರಗಳಲ್ಲಿ ನಟಿಸಿದ್ದರೂ ಸಹ ಇತ್ತೀಚೆಗೆ ಅವರು ಮಾಡಿದ ಕೆಜಿಎಫ್‌ ಚಿತ್ರದ ಚಾಚಾ ಪಾತ್ರದಿಂದಲೇ ಹೆಚ್ಚು ಖ್ಯಾತಿಯನ್ನು ಪಡೆದಿದ್ದರು. ಹೀಗೆ ದೊಡ್ಡ ಚಿತ್ರದಲ್ಲಿ ಯಶ್‌ ಜತೆ ತೆರೆ ಹಂಚಿಕೊಂಡಿದ್ದ ಹರೀಶ್‌ ರಾಯ್‌ ಕೆಜೆಎಫ್‌ ಚಾಚಾ ಎಂದೇ ಫೇಮಸ್.‌

    ಇನ್ನು ಹರೀಶ್‌ ರಾಯ್‌ ಅಂತಿಮ ದರ್ಶನ ಪಡೆಯಲು ರಾಕಿಂಗ್‌ ಸ್ಟಾರ್‌ ಯಶ್‌ ಆಗಮಿಸಿದ್ದರು. ಹೂವಿನ ಮಾಲೆ ತಂದು ತನ್ನ ಚಾಚಾ ಪಾರ್ಥಿವ ಶರೀರಕ್ಕೆ ಹಾಕಿ ನಮಸ್ಕರಿಸಿದ ಯಶ್‌ ಕೆಲಕಾಲ ಹರೀಶ್‌ ರಾಯ್‌ ಮುಖವನ್ನೇ ನೋಡುತ್ತಾ ನಿಂತರು.

    ಇನ್ನು ಹರೀಶ್‌ ರಾಯ್‌ ಅವರಿಗೆ ಇಬ್ಬರು ಪುತ್ರರಿದ್ದು, ಯಶ್‌ ಅವರಿಗೆ ಸಾಂತ್ವನ ಹೇಳಿದರು. ಅಲ್ಲದೇ ಹರೀಶ್‌ ರಾಯ್‌ನ ಹಿರಿಯ ಪುತ್ರನನ್ನು ತಮ್ಮ ಕಾರಿನೊಳಗೆ ಕರೆದೊಯ್ದು ಸಹಾಯ ಮಾಡಿದರು ಎಂದು ಹಲವು ಇನ್ಸ್ಟಾಗ್ರಾಮ್‌ ಪೇಜ್‌ಗಳು ವಿಡಿಯೊಗಳನ್ನು ಹಂಚಿಕೊಂಡಿವೆ.

    ಯಶ್‌ ಹರೀಶ್‌ ರಾಯ್‌ ಪುತ್ರನನ್ನು ಒಳಗೆ ಬಾ ಎಂದು ಕಾರಿನೊಳಗೆ ಕೂರಿಸಿಕೊಂಡು ಯಾರಿಗೂ ಕಾಣದಂತೆ ಸಹಾಯ ಮಾಡಿರುವ ವಿಡಿಯೊವನ್ನು ಪೇಜ್‌ಗಳು ಹಂಚಿಕೊಂಡಿವೆ. ಈ ವಿಡಿಯೊ ವೈರಲ್‌ ಆಗಿದ್ದು ಯಶ್‌ಗೆ ನೆಟ್ಟಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search