ಬೆಂಗಳೂರು: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್ ಆಗಿ ಹೊರಹೊಮ್ಮಿದ ಮೇಲೆ ಉಂಟಾದ ಕಾಲ್ತುಳಿತದ ಬಳಿಕ ಫ್ರಾಂಚೈಸಿ ದೊಡ್ಡ ತೀರ್ಮಾನವೊಂದನ್ನು ಮಾಡಿದೆ.
ಫ್ರಾಂಚೈಸಿಯ ಮಾಲೀಕತ್ವವನ್ನು ಮಾರಾಟ ಮಾಡಲು ಯುಕೆ ದೈತ್ಯ ಕಂಪನಿ ಡಿಯಾಜಿಯೊ ನಿಶ್ಚಯಿಸಿದೆ. ಕಾಲ್ತುಳಿತ ಸಂಭವಿಸಿದ ಕೆಲವು ದಿನಗಳ ಬಳಿ ಆರ್ಸಿಬಿ ಮಾರಾಟದ ಸುದ್ದಿ ಹರಿದಾಡಿದಾಗ ಅದೆಲ್ಲ ಸುಳ್ಳು ಎಂದಿದ್ದ ಡಿಯಾಜಿಯೊ ಇದೀಗ ನಿಜವಾಗಿಯೂ ಆರ್ಸಿಬಿ ಮಾರಾಟ ಮಾಡಲು ಮುಂದಾಗಿದೆ.
ಇನ್ನು ಕ್ರಿಕ್ಬಜ್ ಪ್ರಕಾರ ಅದಾನಿ ಗ್ರೂಪ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಲು ಇಚ್ಛಿಸುತ್ತಿದ್ದು, ಮೆಡಿಕಲ್ ಇಂಡಸ್ಟ್ರಿಯ ಬೃಹತ್ ಕಂಪನಿ ಸೀರಮ್ ಇನ್ಸ್ಟಿಟ್ಯೂಟ್ನ ಅದಾರ್ ಪೂನಾವಾಲಾ ಸಹ ಆಸಕ್ತರಾಗಿದ್ದಾರಂತೆ. ಅಲ್ಲದೇ ಜೆಎಸ್ಡಬ್ಲ್ಯೂ ಗ್ರೂಪ್ನ ಪಾರ್ಥ್ ಜಿಂದಾಲ್, ದೆಹಲಿ ಮೂಲದ ಕೋಟ್ಯಧಿಪತಿ ಹಾಗೂ ಅಮೆರಿಕಾ ಮೂಲದ ಎರಡು ಖಾಸಗಿ ಸಂಸ್ಥೆಗಳು ಹೀಗೆ ಆರು ಸಂಸ್ಥೆಗಳು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಲು ಆಸಕ್ತಿ ತೋರಿಸಿವೆ. ಇಷ್ಟರಲ್ಲಿ ಆರ್ಸಿಬಿ ಒಡೆತನ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಆರ್ಸಿಬಿ ಮುಂದಿನ ಮಾಲೀಕರು ಯಾರಾಗಲಿದ್ದಾರೆ ಎನ್ನುವುದರ ಜತೆಗೆ ಇದೀಗ ತಂಡದ ಹೆಸರು ಬದಲಾವಣೆಯಾಗುವ ಅನುಮಾನಗಳೂ ಸಹ ಶುರುವಾಗಿವೆ. ಹೌದು, ರಾಯಲ್ ಚಾಲೆಂಜರ್ಸ್ ಎಂಬ ಹೆಸರನ್ನು ರಾಯಲ್ ಚಾಲೆಂಜ್ ಎಂಬ ಮದ್ಯಪಾನದ ಬ್ರಾಂಡ್ನಿಂದ ಆರಿಸಿ ಇಡಲಾಗಿತ್ತು. ಹೀಗಾಗಿ ಆರ್ಸಿಬಿ ಖರೀದಿಸುವ ಮುಂದಿನ ಮಾಲೀಕರು ತಮ್ಮದಲ್ಲದ ರಾಯಲ್ ಚಾಲೆಂಜ್ ಬ್ರಾಂಡ್ಗೆ ಉಚಿತವಾಗಿ ಪ್ರಚಾರ ಮಾಡಲು ಮುಂದಾಗುವುದಿಲ್ಲ. ಹೀಗಾಗಿ ಖಂಡಿತವಾಗಿಯೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೆಸರು ಬದಲಾಗಲಿದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದೆ ಡೆಕ್ಕನ್ ಚಾರ್ಜರ್ಸ್ ತಂಡವನ್ನು ಸನ್ ನೆಟ್ವರ್ಕ್ ಖರೀದಿಸಿದ ಬಳಿಕ ಸನ್ರೈಸರ್ಸ್ ಹೈದರಾಬಾದ್ ಎಂದು ನಾಮಕರಣ ಮಾಡಿತ್ತು. ಡೆಲ್ಲಿ ಡೇರ್ಡೆವಿಲ್ಸ್ ತಂಡದ ಹೆಸರನ್ನು ಡೆಲ್ಲಿ ಕ್ಯಾಪಿಟಲ್ಸ್ ಎಂದು ಅದರ ಹೊಸ ಮಾಲೀಕರು ಬದಲಿಸಿದ್ದರು. ಹೀಗಾಗಿ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳಲ್ಲಿ ತಂಡಕ್ಕೆ ಮುಂದಿನ ದಿನಗಳಲ್ಲಿ ಏನೆಂದು ಹೆಸರಿಡಬಹುದು ಎಂಬ ಪ್ರಶ್ನೆ ಎದ್ದಿದೆ.
ಜಿಎಸ್ಟಿ ಇಳಿಕೆ ನಂತರವೂ ರಾಜ್ಯದ ವಾಣಿಜ್ಯ ತೆರಿಗೆ ಸಂಗ್ರಹದಲ್ಲಿ ಗಣನೀಯ ಏರಿಕೆ; ಅಕ್ಟೋಬರ್ನಲ್ಲಿ ದಾಖಲೆ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


