ಅಹ್ಮದಾಬಾದ್: ಸಣ್ಣ ಚಿನ್ನದ ಅಂಗಡಿಗಳಲ್ಲಿ ವ್ಯಾಪಾರಿಗಳು ಕಡಿಮೆ ಸಂಖ್ಯೆಯಲ್ಲಿ ಇರುತ್ತಾರೆ, ಹೀಗಾಗಿ ಸುಲಭವಾಗಿ ಯಾಮಾರಿಸಬಹುದು ಎಂದು ಕಳ್ಳತನಕ್ಕೆ ಮುಂದಾಗುವ ಕಳ್ಳರು ನಾನಾ ರೀತಿಯ ಉಪಾಯಗಳನ್ನು ಮಾಡಿ ದರೋಡೆಗೆ ಯತ್ನ ಮಾಡುತ್ತಿರುತ್ತಾರೆ.
ಅದೇ ರೀತಿ ಗುಜರಾತ್‌ನ ರಾಜಧಾನಿ ಅಹ್ಮದಾಬಾದ್‌ನಲ್ಲಿ ಕಳ್ಳಿಯೊಬ್ಬಳು ತನ್ನ ಕೈಚಳಕ ತೋರಿಸಲು ಹೋಗಿ ಮಾಲೀಕನಿಗೆ ಸಿಕ್ಕಿಬಿದ್ದಿದ್ದಾಳೆ. ಅಹ್ಮದಾಬಾದ್‌ನ ರಣೀಪ್ ಪ್ರದೇಶದಲ್ಲಿ ನವೆಂಬರ್ 3ರ ಮಧ್ಯಾಹ್ನ 12.30ರ ಸಮಯಕ್ಕೆ ಮಹಿಳೆಯೊಬ್ಬರು ಚಿನ್ನ ಖರೀದಿಸುವ ನೆಪದಲ್ಲಿ ಅಂಗಡಿಗೆ ಬಂದಿದ್ದಾಳೆ.
ಈ ಸಮಯದಲ್ಲಿ ಮಾಲೀಕ ಒಬ್ಬನೇ ಇರುವುದನ್ನು ಕಂಡು ಆತನ ಕಣ್ಣಿಗೆ ಖಾರದಪುಡಿ ಎರಚಿ ಚಿನ್ನ ದೋಚುವ ಸಂಚು ಮಾಡಿದ್ದಾಳೆ. ಆದರೆ ಮಾಲೀಕನಿಗೆ ಖಾರದಪುಡಿ ತಾಕಿಲ್ಲ. ಕೂಡಲೇ ಎಚ್ಚೆತ್ತ ಮಾಲೀಕ ಆಕೆಯನ್ನು ಹಿಡಿದು ಅಂಗಡಿಯಲ್ಲೇ ಸತತವಾಗಿ ಕಪಾಳಮೋಕ್ಷ ಮಾಡಿದ್ದಾನೆ. 15 ಸೆಕೆಂಡುಗಳಲ್ಲಿ 17 ಬಾರಿ ಆಕೆಯ ಕೆನ್ನೆಗೆ ಬಾರಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾನೆ.
ಇಷ್ಟು ಘಟನೆ ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೊ ವೈರಲ್ ಆಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


