ಬೆಂಗಳೂರು: ಸ್ಯಾಂಡಲ್‌ವುಡ್‌ನ ಖ್ಯಾತ ಖಳನಟ ಹರೀಶ್ ರಾಯ್ ನಿನ್ನೆ ( ನವೆಂಬರ್ 6 ) ನಿಧನರಾದರು. ಕ್ಯಾನ್ಸರ್ ಖಾಯಿಲೆಗೆ ತುತ್ತಾಗಿದ್ದ ಖಳನಟ ಹರೀಶ್ ರಾಯ್ ಅವರು ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು.
ಹಲವು ದಿನಗಳಿಂದ ಕ್ಯಾನ್ಸರ್ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದ ಹರೀಶ್ ರಾಯ್ ತಮ್ಮ ಪತ್ನಿ, ತಾಯಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಬಿಟ್ಟು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದು, ಇಂದು ಅವರ ಅಂತ್ಯಕ್ರಿಯೆ ನಡೆಯಿತು.
ಇನ್ನು ಹರೀಶ್ ರಾಯ್ ಅವರ ಕಿರಿಯ ಪುತ್ರ ತನ್ನ ತಂದೆ ಸಾವಿನಿಂದ ಕುಗ್ಗಿ ಹೋಗಿದ್ದು, ಮಾಧ್ಯಮಗಳ ಮುಂದೆ ತಂದೆಯನ್ನು ನೆನೆದು ಗೋಳಾಡಿದ್ದಾರೆ. ಕ್ರೀಡೆಯಲ್ಲಿ ಭಾರತ ತಂಡದ ಪರ ತಾನು ಆಡಬೇಕು ಎಂಬುದು ಅವರ ಕನಸಾಗಿತ್ತು. ಸಾಯುವ ಮುನ್ನವೂ ಅದರ ಬಗ್ಗೆಯೇ ಮಾತನಾಡಿದ್ದರು, ಅದನ್ನು ಮಾಡಿಯೇ ತೀರುತ್ತೇನೆ ಎಂದರು.
ಇನ್ನು ತನ್ನ ತಂದೆಯ ಹುಟ್ಟೂರು ಉಡುಪಿ, ಈ ಹಿಂದೆ ಊರಿಗೆ ಹೋದಾಗ ಕಾಂತಾರ ರೀತಿ ದೈವವನ್ನು ಕೇಳಿದ್ದೆವು. ಆಗ ದೈವ ಹಾಗೂ ದೇವರು ಇಬ್ಬರೂ ತಂದೆಯನ್ನು ಉಳಿಸಿಕೊಡುವುದಾಗಿ ಮಾತು ಕೊಟ್ಟಿದ್ದವು, ಈಗ ಎಲ್ಲಿ ಹೋಯಿತು ಆ ದೈವ ಎಂದು ಕಣ್ಣೀರು ಹಾಕುತ್ತಾ ಆಕ್ರೋಶ ಹೊರಹಾಕಿದರು.
ಅಂತ್ಯ ಸಂಸ್ಕಾರದ ಬಳಿ ಮಾತನಾಡಿದ ಅವರು ತಮ್ಮ ತಂದೆ ಅಪ್ಪು ಹಾಗೂ ಚಿರು ಮಾಮ ಇರುವ ಕಡೆಗೆ ಹೋಗಿ ಸೇರುತ್ತಾರೆ ಎಂದು ಕಳಿಸಿಕೊಟ್ಟೆ ಎಂದು ಭಾವುಕರಾದರು.
ಇನ್ನು ಯಶ್ ಸಹ ಹರೀಶ್ ರಾಯ್ ಅವರ ಪುತ್ರರನ್ನು ಭೇಟಿ ಮಾಡಿ ತಮ್ಮ ತಂದೆಯ ಹೆಸರನ್ನು ಉಳಿಸುವ ಹಾಗೆ ಕೆಲಸ ಮಾಡಬೇಕು, ಚಿತ್ರರಂಗದಲ್ಲಿ ಅವರು ಹೆಸರು ಮಾಡಿದ್ದಾರೆ, ನೀವು ಆ ಹೆಸರನ್ನು ಮುಂದುವರಿಸುವ ಕೆಲಸ ಮಾಡಿದರೆ ಮಾತ್ರ ಅವರ ಹೆಸರು ಉಳಿಯುತ್ತದೆ, ಇಲ್ಲದಿದ್ದರೆ ಜನ ಮರೆತುಬಿಡುತ್ತಾರೆ ಎಂದು ಧೈರ್ಯ ಹೇಳಿದರು ಎಂದು ಹರೀಶ್ ರಾಯ್ ಕಿರಿಯ ಪುತ್ರ ಹೇಳಿಕೊಂಡಿದ್ದಾರೆ.
ನಿನ್ನೆ ನಡೆದ ಬಿಹಾರ ಚುನಾವಣೆಯಲ್ಲೂ ಮತಗಳ್ಳತನ ನಡೆದಿದೆ ಎಂದ ರಾಹುಲ್ ಗಾಂಧಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


