Saturday, September 19, 2026
spot_img
More
    spot_img
    HomeEntertainmentFact Check: ರಾಜಮೌಳಿ ಹೊಸ ಚಿತ್ರದ ಪೋಸ್ಟರ್‌ ರಿಲೀಸ್; ಮತ್ತೆ ಹಾಲಿವುಡ್‌ ಕಾಪಿ ಮಾಡಿ ಸಿಕ್ಕಿಬಿದ್ದ...

    Fact Check: ರಾಜಮೌಳಿ ಹೊಸ ಚಿತ್ರದ ಪೋಸ್ಟರ್‌ ರಿಲೀಸ್; ಮತ್ತೆ ಹಾಲಿವುಡ್‌ ಕಾಪಿ ಮಾಡಿ ಸಿಕ್ಕಿಬಿದ್ದ ಜಕ್ಕಣ್ಣ!

    ದಕ್ಷಿಣ ಭಾರತದ ಅತಿಯಶಸ್ವಿ ನಿರ್ದೇಶಕರ ಪಟ್ಟಿಯಲ್ಲಿ ನಂಬರ್‌ 1 ಸ್ಥಾನ ಗಿಟ್ಟಿಸಿಕೊಂಡಿರುವ ನಿರ್ದೇಶಕ ರಾಜಮೌಳಿ ಆರ್‌ಆರ್‌ಆರ್‌ ಬಳಿಕ ಮತ್ತೊಂದು ದೊಡ್ಡ ಚಿತ್ರಕ್ಕೆ ಕೈಹಾಕಿದ್ದಾರೆ. ತೆಲುಗು ಸಿನಿ ರಸಿಕರ ಬಹು ದಿನಗಳ ಕನಸಿನ ಕಾಂಬಿನೇಷನ್‌ ಮೌಳಿ ಹಾಗೂ ಮಹೇಶ್‌ ಈ ಚಿತ್ರದಲ್ಲಿ ಒಂದಾಗಿದ್ದಾರೆ.

    Advertisement

    ಹೌದು, ಟಾಲಿವುಡ್‌ನ ನಂಬರ್‌ 1 ನಟ ಮಹೇಶ್‌ ಬಾಬು ಹಾಗೂ ನಂಬರ್‌ 1 ನಿರ್ದೇಶಕ ರಾಜಮೌಳಿ ಇದೇ ಮೊದಲ ಬಾರಿಗೆ ಚಿತ್ರವೊಂದಕ್ಕಾಗಿ ಒಂದಾಗಿದ್ದಾರೆ. ಈ ಜೋಡಿ ಸಿನಿಮಾ ಮಾಡಲಿದೆಯಂತೆ ಎಂಬ ಸಣ್ಣ ಸುದ್ದಿ ಹೊರಬೀಳುತ್ತಿದ್ದಂತೆಯೇ ಭಾರೀ ಸದ್ದು ಮಾಡಿತ್ತು. ಸದ್ಯ ಚಿತ್ರದ ಚಿತ್ರೀಕರಣವನ್ನು ಪ್ರೇಕ್ಷಕರು ಅಂದುಕೊಂಡಿದ್ದಕ್ಕಿಂತ ವೇಗವಾಗಿಯೇ ಮಾಡಿರುವ ಚಿತ್ರತಂಡ ಕ್ಲೈಮ್ಯಾಕ್ಸ್‌ ಚಿತ್ರೀಕರಣದಲ್ಲಿ ನಿರತವಾಗಿದ್ದು, ಇದೇ 15ರಂದು ಹೈದರಾಬಾದ್‌ನಲ್ಲಿ ದೊಡ್ಡ ಕಾರ್ಯಕ್ರಮವನ್ನೂ ಸಹ ಮಾಡಹೊರಟಿದೆ.

    ಅದಕ್ಕೂ ಮುನ್ನ ಇಂದು ( ನವೆಂಬರ್‌ 7 ) ಚಿತ್ರತಂಡ ಚಿತ್ರದಲ್ಲಿ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಮಲಯಾಳಂನ ಪ್ರತಿಭಾವಂತ ನಟ ಪೃಥ್ವಿರಾಜ್‌ ಸುಕುಮಾರನ್‌ ಪಾತ್ರದ ಪೋಸ್ಟರ್‌ ಬಿಡುಗಡೆಗೊಳಿಸಿದೆ. ಪೃಥ್ವಿ ಈ ಚಿತ್ರದಲ್ಲಿ ಕುಂಭ ಎಂಬ ಪಾತ್ರ ನಿರ್ವಹಿಸುತ್ತಿದ್ದು, ಅಕ್ಟೋಪಸ್‌ ಹೋಲಿಕೆಯ ಕೈಗಳಿರುವ ವೀಲ್‌ಚೇರ್‌ ಮೇಲೆ ಕುಳಿತು ಖಡಕ್‌ ಲುಕ್‌ ಕೊಟ್ಟಿದ್ದಾರೆ. ಚಿತ್ರಕ್ಕೆ ಗ್ಲೋಬ್‌ಟ್ರಾಟರ್‌ ಎಂದು ಹೆಸರಿಡಲಾಗಿದೆ.

    ಈ ಪೋಸ್ಟರ್‌ ಬಿಡುಗಡೆಗೊಳ್ಳುತ್ತಿದ್ದಂತೆ ನಿರೀಕ್ಷೆಯಂತೆ ಎಕ್ಸ್‌ ವೇದಿಕೆಯಲ್ಲಿ ಇದು ಕಾಪಿ, ಕದ್ದ ಮಾಲು ಎಂದೆಲ್ಲ ಟ್ರೋಲ್‌ಗಳು ಆರಂಭವಾಗಿವೆ. ಅದರಲ್ಲೂ ಒಂದು ಪೋಸ್ಟರ್‌ ಥೇಟ್‌ ಪೃಥ್ವಿರಾಜ್‌ ಸುಕುಮಾರನ್‌ ಪೋಸ್ಟರ್‌ನಂತೆಯೇ ಇದೆ. ಹೌದು, 1999ರಲ್ಲಿ ಬಿಡುಗಡೆಯಾದ ʼಫ್ಯಾಮಿಲಿ ಗಯ್‌ʼ ಎಂಬ ಸಿಟ್‌ಕಾಮ್‌ ಸರಣಿಯ ಪೋಸ್ಟರ್‌ವೊಂದರ ಕಾಪಿ ಎಂದು ಸಾಮಾಜಿಕ ಜಾಲತಾಣದಲ್ಲಿ ಹೋಲಿಕೆ ಮಾಡಿ ಟ್ರೋಲ್‌ ಮಾಡಲಾಗುತ್ತಿದೆ.

    ಆದರೆ ಅಸಲಿಯತ್ತಿಗೆ ಇದು ಅಧಿಕೃತ ಪೋಸ್ಟರ್‌ ಅಲ್ಲವೇ ಅಲ್ಲ. ಆ ಸಿಟ್‌ಕಾಮ್‌ನ ಪಾತ್ರವೊಂದರ ಪೋಸ್ಟರ್‌ನಲ್ಲಿ ವೀಲ್‌ಚೇರ್‌ ಮಾತ್ರ ಇದ್ದು, ಇದನ್ನು ಪೃಥ್ವಿರಾಜ್‌ ಸುಕುಮಾರನ್‌ ಪೋಸ್ಟರ್‌ ರೀತಿ ಎಐ ಬಳಸಿ ಎಡಿಟ್‌ ಮಾಡಲಾಗಿದೆ.

    ಇನ್ನೂ ಕೆಲವರು ಇದನ್ನು ಸ್ಟೀಫನ್‌ ಹಾಕಿಂಗ್ಸ್‌ ಮತ್ತು ಡಾಕ್ಟರ್‌ ಆಕ್ಟೋಪಸ್‌ನ ಮಿಶ್ರಣ ಎಂದು ಕಾಲೆಳೆಯುತ್ತಿದ್ದಾರೆ. ಇನ್ನು ರಾಜಮೌಳಿ ಈ ಹಿಂದೆ ವೇದಿಕೆ ಕಾರ್ಯಕ್ರಮವೊಂದರಲ್ಲಿ ತಾವು ಇತರೆ ಚಿತ್ರಗಳಿಂದ ಸ್ಪೂರ್ತಿ ಪಡೆಯುವುದು ನಿಜ ಎಂದಿದ್ದರು. ಆ ಮಾತ್ರಕ್ಕೆ ಅಲ್ಲಿ ಹೇಗಿದೆಯೋ ಅದೇ ರೀತಿ ಕಾಪಿ ಮಾಡುವ ಕೆಲಸಕ್ಕೆ ಅವರು ಕೈಹಾಕುವುದಿಲ್ಲ. ಬದಲಾಗಿ ಇದೇ ರೀತಿ ಇದಕ್ಕಿಂತ ಚೆನ್ನಾಗಿ ಫಲಿತಾಂಶ ಬರುವ ಹಾಗೆ ಸಾಕಷ್ಟು ಬದಲಾವಣೆಗಳನ್ನು ಅಳವಡಿಸಿಕೊಂಡು ಕಟ್ಟಿಕೊಡುವುದು ಅವರ ಸಾಮರ್ಥ್ಯ. ಏನೇ ಹೇಳಿದರೂ ಪ್ರಪಂಚದಲ್ಲಿ ʼಎವರಿಥಿಂಗ್‌ ಈಸ್‌ ಎ ಕಾಪಿ ಆಫ್‌ ಎ ಕಾಪಿ ಆಫ್‌ ಎ ಕಾಪಿʼ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading