ಮ್ಯಾಂಗ್‌ಕಾಕ್: ಹಾಂಗ್‌ಕಾಂಗ್ ಸಿಕ್ಸಸ್ 2025 ಟೂರ್ನಿ ನಡೆಯುತ್ತಿದ್ದು ಲೀಗ್ ಹಂತದ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿವೆ.
ಆರು ಓವರ್‌ಗಳ ಪಂದ್ಯ ಇದಾಗಿದ್ದು, ಟೂರ್ನಿಯ ಹೆಸರೇ ಹೇಳುವಂತೆ ಹೆಚ್ಚು ಸಿಕ್ಸ್‌ಗಳ ಮೂಲಕ ರನ್ ಕಲೆಹಾಕುವ ಆಟ ಇದಾಗಿದೆ. ಇನ್ನು ಒಟ್ಟು 7 ಆಟಗಾರರು ಒಂದು ತಂಡದಲ್ಲಿ ಇರಲಿದ್ದಾರೆ.
ಈ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆರಿಸಿಕೊಂಡು ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ ರಾಬಿನ್ ಉತ್ತಪ್ಪ, ಭರತ್ ಚಿಪ್ಲಿ ಹಾಗೂ ದಿನೇಶ್ ಕಾರ್ತಿಕ್ ಅಬ್ಬರದ ಬ್ಯಾಟಿಂಗ್‌ನಿಂದ 6 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 84 ರನ್ ಕಲೆಹಾಕಿ ಪಾಕಿಸ್ತಾನಕ್ಕೆ 85 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಾಕಿಸ್ತಾನ 3 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 41 ರನ್ ಕಲೆಹಾಕಿತ್ತು. ಈ ಸಮಯಕ್ಕೆ ಮಳೆ ಬಂದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತ 2 ರನ್‌ಗಳ ಗೆಲುವು ಸಾಧಿಸಿದೆ.
ಪಾಕಿಸ್ತಾನ 1.4ರಿಂದ 2.1 ಓವರ್‌ವರೆಗೆ 3 ಚೆಂಡುಗಳಲ್ಲಿ ಯಾವುದೇ ರನ್ ಕಲೆಹಾಕದೇ ಇದ್ದದ್ದು ತಂಡಕ್ಕೆ ಸೋಲನ್ನು ಉಂಟುಮಾಡಿದೆ.
ಭಾರತ ಇನ್ನಿಂಗ್ಸ್: ತಂಡದ ಪರ ರಾಬಿನ್ ಉತ್ತಪ್ಪ 11 ಎಸೆತಗಳಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 28 ರನ್ ಗಳಿಸಿದರೆ, ಭರತ್ ಚಿಪ್ಲಿ 13 ಎಸೆತಗಳಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 24 ರನ್ ಗಳಿಸಿದರು. ಇನ್ನುಳಿದಂತೆ ಸ್ಟುವರ್ಟ್ ಬಿನ್ನಿ 2 ಎಸೆತಕ್ಕೆ 4 ರನ್, ಅಭಿಮನ್ಯು ಮಿಥುನ್ 5 ಎಸೆತಗಳಲ್ಲಿ 4 ರನ್ ಹಾಗೂ ನಾಯಕ ದಿನೇಶ್ ಕಾರ್ತಿಕ್ 4 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 17 ರನ್ ಬಾರಿಸಿದರು. ಅಬ್ಬರದ ಬ್ಯಾಟಿಂಗ್ ನಡೆಸಿದ ಉತ್ತಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪಾಕ್ ಪರ ಮುಹಮ್ಮದ್ ಶಹ್ಜಾದ್ 2 ವಿಕೆಟ್ ಹಾಗೂ ಅಬ್ದುಲ್ ಸಮದ್ 1 ವಿಕೆಟ್ ಪಡೆದರು.
ಪಾಕಿಸ್ತಾನ ಇನ್ನಿಂಗ್ಸ್: ಪಾಕ್ ಪರ ಮಾಜ್ ಸದಾಖತ್ 3 ಎಸೆತಗಳಲ್ಲಿ 7 ರನ್, ಅಬ್ದುಲ್ ಸಮದ್ 6 ಎಸೆತಗಳಲ್ಲಿ 2 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ ಅಜೇಯ 16 ರನ್ ಹಾಗೂ ಖವಾಜಾ ನಫಾಯ್ 9 ಎಸೆತಗಳಲ್ಲಿ 1 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ ಅಜೇಯ 18 ರನ್ ಬಾರಿಸಿದರು.
ಭಾರತದ ಪರ ಸ್ಟುವರ್ಟ್ ಬಿನ್ನಿ 1 ವಿಕೆಟ್ ಪಡೆದರು.
ಚಿನ್ನದ ದರದಲ್ಲಿ ಮತ್ತೆ ಇಳಿಕೆ; ಇಂದಿನ ರೇಟ್ ಚೆಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


