2026ರ ವನಿತೆಯರ ಇಂಡಿಯನ್ ಪ್ರೀಮಿಯರ್ ಲೀಗ್‌ಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಇದೇ ತಿಂಗಳ 27ರಂದು ಹರಾಜು ಪ್ರಕ್ರಿಯೆ ನಡೆಯಲಿದ್ದು, ನಿನ್ನೆ ( ನವೆಂಬರ್ 6 ) ಬಿಸಿಸಿಐ ನಿಯಮದಂತೆ ಎಲ್ಲ 5 ತಂಡಗಳು ಯಾವ ಆಟಗಾರ್ತಿಯರನ್ನು ಎಷ್ಟು ಹಣಕ್ಕೆ ಉಳಿಸಿಕೊಂಡಿದ್ದೇವೆ ಎಂಬುದನ್ನು ಬಿಚ್ಚಿಟ್ಟಿವೆ.
ಬಿಸಿಸಿಐ ನಿಯಮದ ಪ್ರಕಾರ ಒಂದು ತಂಡಕ್ಕೆ 15 ಕೋಟಿ ಮಿತಿ ಇದ್ದು, ರಿಟೆನ್ಷನ್ ಪ್ರಕ್ರಿಯೆ ಬಳಿಕ ಯಾವ ತಂಡದ ಬಳಿ ಎಷ್ಟು ಹಣ ಉಳಿದುಕೊಂಡಿದೆ, ಯಾವ ತಂಡ ಯಾರಿಗೆ ಎಷ್ಟು ಹಣ ನೀಡಿ ರಿಟೈನ್ ಮಾಡಿಕೊಂಡಿದೆ ಎಂಬ ಮಾಹಿತಿ ಮುಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಮೊದಲನೆಯದಾಗಿ ಸ್ಮೃತಿ ಮಂಧಾನರನ್ನು ಉಳಿಸಿಕೊಂಡಿದ್ದು, 3.5 ಕೋಟಿ ನೀಡಿದೆ. ಎರಡನೆಯದಾಗಿ 2.75 ಕೋಟಿ ನೀಡಿ ರಿಚಾ ಘೋಷ್‌ರನ್ನು ಉಳಿಸಿಕೊಂಡಿದೆ. ಮೂರನೆಯದಾಗಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರಿಯನ್ನು 2 ಕೋಟಿ ನೀಡಿ ಉಳಿಸಿಕೊಂಡಿದೆ. ನಾಲ್ಕನೆಯದಾಗಿ ಕನ್ನಡತಿ ಶ್ರೇಯಾಂಕ ಪಾಟೀಲ್‌ಗೆ 60 ಲಕ್ಷ ನೀಡಿ ಉಳಿಸಿಕೊಂಡಿದೆ. ಆರ್‌ಸಿಬಿ ಬಳಿ 6.15 ಕೋಟಿ ಉಳಿದುಕೊಂಡಿದೆ.
ಮುಂಬೈ ಇಂಡಿಯನ್ಸ್: ಮೊದಲನೆಯದಾಗಿ ಬ್ರಂಟ್‌ಗೆ 3.5 ಕೋಟಿ ನೀಡಿದರೆ, ಹರ್ಮನ್‌ಪ್ರೀತ್ ಕೌರ್‌ಗೆ 2.5 ಕೋಟಿ ನೀಡಿ ಎರಡನೇ ಆಟಗಾರ್ತಿಯನ್ನಾಗಿ ಉಳಿಸಿಕೊಂಡಿದೆ. ಇನ್ನುಳಿದಂತೆ ಹೇಲಿ ಮ್ಯಾಥ್ಯೂಸ್ ಮೂರನೇ ಆಟಗಾರ್ತಿಯಾಗಿದ್ದು, 1.75 ಕೋಟಿ ನೀಡಿದೆ. ನಾಲ್ಕನೇ ಆಟಗಾರ್ತಿಯನ್ನಾಗಿ ಅಮನ್‌ಜೋತ್ ಕೌರ್ ಉಳಿಸಿಕೊಂಡು 1 ಕೋಟಿ ನೀಡಿದೆ. ಗುಣಳನ್ ಕಮಲಿನಿಗೆ 50 ಲಕ್ಷ ನೀಡಿ ಐದನೇ ಆಟಗಾರ್ತಿಯನ್ನಾಗಿ ಉಳಿಸಿಕೊಂಡಿದೆ. ಮುಂಬೈ ಬಳಿ ಹರಾಜಿಗೆ 5.75 ಕೋಟಿ ಉಳಿದುಕೊಂಡಿದೆ.
ಡೆಲ್ಲಿ ಕ್ಯಾಪಿಟಲ್ಸ್: ಜೆಮಿಮಾ ರೊಡ್ರಿಗ್ಸ್ 2.2 ಕೋಟಿ, ಮಾರಿಜಾನ್ ಕಾಪ್ 2.2 ಕೋಟಿ, ಶಫಾಲಿ ವರ್ಮಾ 2.2 ಕೋಟಿ, ಆನಾಬೆಕ್ ಸದರ್‌ಲ್ಯಾಂಡ್ 2.2 ಕೋಟಿ ಹಾಗೂ ನಿಕಿ ಪ್ರಸಾದ್ 50 ಲಕ್ಷ. ತಂಡದ ಬಳಿ 5.7 ಕೋಟಿ ಉಳಿದಿದೆ.
ಗುಜರಾತ್ ಜೈಂಟ್ಸ್: ಆಶ್ಲೀ ಗಾರ್ಡ್‌ನರ್ 3.5 ಕೋಟಿ ಹಾಗೂ ಬೆತ್ ಮೂನಿ 2.5 ಕೋಟಿ. ಉಳಿದ ಹಣ 9 ಕೋಟಿ
ಯುಪಿ ವಾರಿಯರ್ಸ್: ಶ್ವೇತಾ ಶೆರಾವತ್ 50 ಲಕ್ಷ. ಉಳಿದ ಹಣ 14.50 ಕೋಟಿ
ನವೆಂಬರ್‌ನಲ್ಲಿ ಯಾವ ಕ್ರಾಂತಿಯೂ ಆಗಲ್ಲ 2028ಕ್ಕೆ ದೊಡ್ಡ ಕ್ರಾಂತಿಯಾಗುತ್ತೆ ಎಂದ ಡಿಕೆಶಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


