ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನವೆಂಬರ್ 4ರಂದು ರಾಜ್ಯ ಸರ್ಕಾರ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ನಡೆಸಿದ್ದು, 2018 ಹಾಗೂ 2019ರಲ್ಲಿ ಬಿಡುಗಡೆಯಾದ ಚಿತ್ರಗಳಲ್ಲಿ ಅತ್ಯುತ್ತಮವಾದ ಚಿತ್ರಗಳು ಹಾಗೂ ಉತ್ತಮ ನಟನೆ ಮಾಡಿದ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿತು.
ಈ ಸಮಾರಂಭದಲ್ಲಿ ರಿಷಬ್ ಶೆಟ್ಟಿ ನಿರ್ದೇಶಿಸಿದ್ದ ʼಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಕೊಡುಗೆ ರಾಮಣ್ಣ ರೈʼ ಚಿತ್ರಕ್ಕೆ ಅತ್ಯುತ್ತಮ ಮನರಂಜನಾ ಚಿತ್ರ ಹಾಗೂ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಲಭಿಸಿತು. ಸಿಎಂ ಸಿದ್ದರಾಮಯ್ಯ ಬಳಿ ರಿಷಬ್ ಶೆಟ್ಟಿ ಹಾಗೂ ಪತ್ನಿ ಪ್ರಗತಿ ಶೆಟ್ಟಿ ಪ್ರಶಸ್ತಿಗಳನ್ನು ಸ್ವೀಕರಿಸಿದರು.
ಆದರೆ ಕೆಲ ನೆಟ್ಟಿಗರು ಇದನ್ನು ನೆಪೋಟಿಸಂ ಎಂದು ಕಿಡಿಕಾರಿದ್ದಾರೆ. ರಿಷಬ್ ಶೆಟ್ಟಿ ನಿರ್ದೇಶಿಸಿದ ಚಿತ್ರಕ್ಕೆ ಪ್ರಶಸ್ತಿ ಬಂತು ಸರಿ. ಆದರೆ ವೇದಿಕೆ ಮೇಲೆ ಅವರ ಪತ್ನಿಗೇಕೆ ಅವಕಾಶ ಮಾಡಿಕೊಡಲಾಯಿತು, ಅವರ ಕೊಡುಗೆ ಏನು ಎಂದು ಕಿಡಿಕಾರಿದ್ದಾರೆ. ಅಂದಹಾಗೆ ಪ್ರಗತಿ ಶೆಟ್ಟಿಗೆ ವೇದಿಕೆ ಮೇಲೆ ಈ ಪ್ರಶಸ್ತಿ ಸ್ವೀಕರಿಸುವ ಹಕ್ಕಿದೆ. ಏಕೆಂದರೆ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು ರಿಷಬ್ ಶೆಟ್ಟಿ ಫಿಲ್ಮ್ಸ್. ರಿಷಬ್ ಪತ್ನಿ ಪ್ರಗತಿ ಶೆಟ್ಟಿ ಈ ಬ್ಯಾನರ್‌ನ ಸಹ ಮಾಲೀಕರೂ ಸಹ ಹೌದು.
ಹೀಗಾಗಿ ಅವರು ನಿರ್ಮಿಸಿದ ಚಿತ್ರದ ಪ್ರಶಸ್ತಿಯನ್ನು ಸ್ವೀಕರಿಸುವ ಹಕ್ಕು ಅವರಿಗಿದೆ. ಅಲ್ಲದೇ ಚಿತ್ರಕ್ಕೆ ಪ್ರಗತಿ ಶೆಟ್ಟಿ ವಸ್ತ್ರ ವಿನ್ಯಾಸಕಿಯಾಗಿ ಸಹ ಕೆಲಸ ಮಾಡಿದ್ದಾರೆ. ಈ ಸತ್ಯ ಅರಿಯದ ಹಲವರು ಇದನ್ನು ನೆಪೋಟಿಸಂ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು 2018 ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಸಮಾರಂಭ ಸಹ ಮಾಡಲಾಗಿದ್ದು, ಅದರ ಲಿಸ್ಟ್ ಹೀಗಿದೆ.
ಮೊದಲ ಅತ್ಯುತ್ತಮ ಚಿತ್ರ: ಆ ಕರಾಳ ರಾತ್ರಿ
ಎರಡನೇ ಅತ್ಯುತ್ತಮ ಚಿತ್ರ: ರಾಮನ ಸವಾರಿ
ಮೂರನೇ ಅತ್ಯುತ್ತಮ ಚಿತ್ರ: ಒಂದಲ್ಲಾ ಎರಡಲ್ಲಾ
ವಿಶೇಷೆ ಸಾಮಾಜಿಕ ಕಾಳಜಿಯ ಚಿತ್ರ: ಸಂತಕವಿ ಕನಕದಾಸರ ರಾಮಧ್ಯಾನ
ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಸ. ಹಿ. ಪ್ರಾ.ಶಾಲೆ ಕಾಸರಗೋಡು
ಅತ್ಯುತ್ತಮ ನಿರ್ದೇಶಕ: ರಿಷಬ್ ಶೆಟ್ಟಿ
ಅತ್ಯುತ್ತಮ ಮಕ್ಕಳ ಚಿತ್ರ : ಹೂವು ಬಳ್ಳಿ
ನಿರ್ದೇಶಕರ ಪ್ರಥಮ ನಿರ್ದೇಶನ ಅತ್ಯುತ್ತಮ ಚಿತ್ರ : ಬೆಳಕಿನ ಕನ್ನಡಿ
ಅತ್ಯುತ್ತಮ ಕರ್ನಾಟಕ ಪ್ರಾದೇಶಿಕ ಭಾಷಾ ಚಿತ್ರ : ದೇಯಿ ಬೈದೇತಿ (ತುಳು)
ಅತ್ಯುತ್ತಮ ನಟ : ರಾಘವೇಂದ್ರ ರಾಜಕುಮಾರ
ಅತ್ಯುತ್ತಮ ಪೋಷಕ ನಟಿ : ವೀಣಾ ಸುಂದರ್
ಅತ್ಯುತ್ತಮ ಸಂಭಾಷಣೆ : ಶಿರೀಷ್ ಜೋಶಿ
ಅತ್ಯುತ್ತಮ ಸಂಕಲನ : ಸುರೇಶ್ ಆರ್ಮುಗಂ
ಅತ್ಯುತ್ತಮ ಕಲಾ ನಿರ್ದೇಶನ : ಶಿವಕುಮಾರ್ ಜೆ
ಅತ್ಯುತ್ತಮ ಹಿನ್ನೆಲೆಗಾಯಕಿ : ಕಲಾವತಿ ದಯಾನಂದ
ಅತ್ಯುತ್ತಮ ನಟಿ : ಮೇಘನಾ ರಾಜ್
ಅತ್ಯುತ್ತಮ ಕಥೆ : ಹರೀಶ್ ಎಸ್
ಅತ್ಯುತ್ತಮ ಛಾಯಾಗ್ರಹಣ : ನವೀನ್ ಕುಮಾರ್ ಐ
ಅತ್ಯುತ್ತಮ ಬಾಲ ನಟ : ಮಾಸ್ಟರ್ ಅರೆನ್
ಅತ್ಯುತ್ತಮ ಗೀತರಚನೆ : ಡಾ. ಬರಗೂರು ರಾಮಚಂದ್ರ
ತೀರ್ಪುಗಾರರ ವಿಶೇಷ ಪ್ರಶಸ್ತಿ : ಅನಂತರಾಯಪ್ಪ ಹೆಚ್
ಅತ್ಯುತ್ತಮ ಪೋಷಕ ನಟ: ಬಾಲಾಜಿ ಮನೋಹರ್
ಅತ್ಯುತ್ತಮ ಚಿತ್ರಕಥೆ : ಪಿ ಶೇಷಾದ್ರಿ
ಅತ್ಯುತ್ತಮ ಸಂಗೀತ ನಿರ್ದೇಶನ : ರವಿ ಬಸ್ರೂರು
ಅತ್ಯುತ್ತಮ ಬಾಲ ನಟಿ : ಬೇಬಿ ಸಿಂಚನ
ಅತ್ಯುತ್ತಮ ಹಿನ್ನೆಲೆಗಾಯಕ : ಸಿದ್ಧಾರ್ಥ ಬೆಳ್ಮಣ್ಣು
ತೀರ್ಪುಗಾರರ ವಿಶೇಷ ಪ್ರಶಸ್ತಿ : ವಿ ಥಾಮಸ್
ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿ : ಚಿತ್ರಕಥೆ ಹಾಗೆಂದರೇನು.
ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ : ಪಡುವಾರಳ್ಳಿ
ಭಾರತ vs ಆಸ್ಟ್ರೇಲಿಯಾ 4ನೇ ಟಿ20: ಬ್ಯಾಟಿಂಗ್ ವಿಭಾಗ ಕೈಕೊಟ್ಟರೂ ಬೌಲರ್‌ಗಳ ದಯೆಯಿಂದ ಗೆದ್ದ ಟೀಮ್ ಇಂಡಿಯಾ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


