ಕ್ವೀನ್ಸ್‌ಲ್ಯಾಂಡ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ನಾಲ್ಕನೇ ಪಂದ್ಯದಲ್ಲಿ ಭಾರತ 48 ರನ್‌ಗಳ ಗೆಲುವನ್ನು ದಾಖಲಿಸಿ 5 ಪಂದ್ಯಗಳ ಸರಣಿಯಲ್ಲಿ 2 – 1 ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಕಲೆಹಾಕಿ ಆಸ್ಟ್ರೇಲಿಯಾಗೆ 168 ರನ್‌ಗಳ ಗುರಿಯನ್ನು ನೀಡಿತ್ತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಆಸ್ಟ್ರೇಲಿಯಾ 18.2 ಓವರ್‌ಗಳಲ್ಲಿ ಕೇವಲ 119 ರನ್‌ಗೆ ಆಲ್‌ಔಟ್ ಆಯಿತು. ಬ್ಯಾಟಿಂಗ್ ವಿಭಾಗ ಹೇಳಿಕೊಳ್ಳುವಂತಹ ಪ್ರದರ್ಶನ ನೀಡದಿದ್ದರೂ ಬೌಲರ್‌ಗಳ ಆಕ್ರಮಣಕಾರಿ ಪ್ರದರ್ಶನದ ನೆರವಿನಿಂದ ಭಾರತ ಗೆಲುವು ಕಂಡಿದೆ.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ 28 ರನ್ ಗಳಿಸಿದರೆ ಏಕದಿನ ಪಂದ್ಯದ ಹಾಗೆ ಬ್ಯಾಟ್ ಬೀಸಿದ ಶುಬ್‌ಮನ್ ಗಿಲ್ 46 ರನ್ ಕಲೆಹಾಕಿದರು. ಇನ್ನುಳಿದಂತೆ ಶಿವಮ್ ದುಬೆ 22, ನಾಯಕ ಸೂರ್ಯಕುಮಾರ್ ಯಾದವ್ 20, ತಿಲಕ್ ವರ್ಮಾ 5, ಜಿತೇಶ್ ಶರ್ಮಾ 3, ವಾಷಿಂಗ್ಟನ್ ಸುಂದರ್ 12, ಅರ್ಷ್‌ದೀಪ್ ಸಿಂಗ್ ಡಕ್‌ಔಟ್, ವರುಣ್ ಚಕ್ರವರ್ತಿ ಅಜೇಯ 1 ಹಾಗೂ ಅಕ್ಷರ್ ಪಟೇಲ್ ಅಜೇಯ 21 ರನ್ ಗಳಿಸಿದರು.
ಆಸ್ಟ್ರೇಲಿಯಾದ ಪರ ನಾಥನ್ ಎಲ್ಲಿಸ್ ಹಾಗೂ ಆಡಂ ಜಂಪಾ ತಲಾ 3 ವಿಕೆಟ್, ಕ್ಷೇವಿಯರ್ ಬಾರ್ಟ್ಲೆಟ್ ಹಾಗೂ ಮಾರ್ಕಸ್ ಸ್ಟಾಯ್ನಿಸ್ ತಲಾ ಒಂದೊಂದು ವಿಕೆಟ್ ಪಡೆದರು.
ಆಸ್ಟ್ರೇಲಿಯಾ ಇನ್ನಿಂಗ್ಸ್: ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ಹಾಗೂ ಮ್ಯಾಥ್ಯೂ ಶಾರ್ಟ್ ಬಿಟ್ಟರೆ ಉಳಿದ ಯಾವ ಆಟಗಾರನೂ ಸಹ 20 ರನ್‌ಗಳ ಗಡಿ ದಾಟಲಿಲ್ಲ. ಮಾರ್ಷ್ 30 ರನ್ ಗಳಿಸಿದರೆ, ಶಾರ್ಟ್ 25 ರನ್ ಗಳಿಸಿದರು. ಉಳಿದಂತೆ ಜೋಶ್ ಇಂಗ್ಲಿಸ್ 12, ಟಿಮ್ ಡೇವಿಡ್ 14, ಜೋಶ್ ಫಿಲಿಪ್ 10, ಮಾರ್ಕಸ್ ಸ್ಟಾಯ್ನಿಸ್ 17, ಗ್ಲೆನ್ ಮ್ಯಾಕ್ಸ್‌ವೆಲ್ 2, ಬೆನ್ ಡ್ವಾರ್ಶಸ್ 5, ಕ್ಷೇವಿಯರ್ ಬಾರ್ಟ್ಲೆಟ್ ಡಕ್‌ಔಟ್, ಆಡಂ ಜಂಪಾ ಡಕ್‌ಔಟ್ ಹಾಗೂ ನಾಥನ್ ಎಲ್ಲಿಸ್ ಅಜೇಯ 2 ರನ್ ಕಲೆಹಾಕಿದರು.
ಭಾರತದ ಪರ ವಾಷಿಂಗ್ಟನ್ ಸುಂದರ್ 3, ಶಿವಮ್ ದುಬೆ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್, ಅರ್ಷ್‌ದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಹಾಗೂ ವರುಣ್ ಚಕ್ರವರ್ತಿ ತಲಾ ಒಂದೊಂದು ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


