ಬೆಂಗಳೂರು: ಮುಂಬರುವ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಈ ಸಲುವಾಗಿ ಬಿಸಿಸಿಐ ಎಲ್ಲ ಫ್ರಾಂಚೈಸಿಗಳಿಗೂ ಆಟಗಾರ್ತಿಯರ ರಿಟೆನ್ಷನ್ ಮಾಡಿಕೊಳ್ಳಲು ತಿಳಿಸಿತ್ತು.
ಅದರಂತೆ ಇಂದು ( ನವೆಂಬರ್ 6 ) ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ನಾಲ್ವರು ಆಟಗಾರ್ತಿಯರನ್ನು ಉಳಿಸಿಕೊಂಡು ಉಳಿದ ಆಟಗಾರ್ತಿಯರನ್ನು ಕೈಬಿಟ್ಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲನೆಯದಾಗಿ ಸ್ಮೃತಿ ಮಂಧಾನರನ್ನು ಉಳಿಸಿಕೊಂಡಿದ್ದು, 3.5 ಕೋಟಿ ನೀಡಿದೆ. ಎರಡನೆಯದಾಗಿ 2.75 ಕೋಟಿ ನೀಡಿ ರಿಚಾ ಘೋಷ್‌ರನ್ನು ಉಳಿಸಿಕೊಂಡಿದೆ. ಮೂರನೆಯದಾಗಿ ಆಸ್ಟ್ರೇಲಿಯಾದ ಎಲ್ಲಿಸ್ ಪೆರಿಯನ್ನು 2 ಕೋಟಿ ನೀಡಿ ಉಳಿಸಿಕೊಂಡಿದೆ. ನಾಲ್ಕನೆಯದಾಗಿ ಕನ್ನಡತಿ ಶ್ರೇಯಾಂಕ ಪಾಟೀಲ್‌ಗೆ 60 ಲಕ್ಷ ನೀಡಿ ಉಳಿಸಿಕೊಂಡಿದೆ.
ಇನ್ನು ಪ್ರತಿ ತಂಡಕ್ಕೆ 15 ಕೋಟಿ ರೂಗಳನ್ನು ಹರಾಜಿಗೆ ಬಳಸಲು ಬಿಸಿಸಿಐ ನಿಯಮ ಹೊರಡಿಸಿತ್ತು. ಸದ್ಯ ರಿಟೆನ್ಷನ್ ಬಳಿಕ ಆರ್‌ಸಿಬಿ ಬಳಿ 6.15 ಕೋಟಿ ರೂಪಾಯಿ ಉಳಿದುಕೊಂಡಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


