ಬೆಂಗಳೂರು: ಮುಂಬರುವ 2026ರ ಮಹಿಳಾ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಲುವಾಗಿ ನವೆಂಬರ್ 27ರಂದು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದ್ದು, ಬಿಸಿಸಿಐ ಇದಕ್ಕೂ ಮುನ್ನ ಫ್ರಾಂಚೈಸಿಗಳಿಗೆ ಆಟಗಾರ್ತಿಯರ ರಿಟೆನ್ಷನ್ ಪಟ್ಟಿಯನ್ನು ಕೇಳಿತ್ತು.
ಮೂವರು ಭಾರತೀಯ ಆಟಗಾರ್ತಿಯರು ಹಾಗೂ ಇಬ್ಬರು ವಿದೇಶಿ ಆಟಗಾರ್ತಿಯರವರೆಗೆ ಒಟ್ಟು ಐವರನ್ನು ರಿಟೈನ್ ಮಾಡಿಕೊಳ್ಳಬಹುದು ಎಂದು ನಿಯಮವನ್ನು ಹಾಕಿತ್ತು ಹಾಗೂ ಎಲ್ಲ ತಂಡಗಳಿಗೂ ಒಟ್ಟು 15 ಕೋಟಿ ವೆಚ್ಚ ಮಾಡುವ ಅವಕಾಶ ನೀಡಿತ್ತು.
ಅದರಂತೆ ಇಂದು ( ನವೆಂಬರ್ 6 ) ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಾನು ರಿಟೈನ್ ಮಾಡಿಕೊಳ್ಳುತ್ತಿರುವ ಐವರು ಆಟಗಾರ್ತಿಯರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಎಲ್ಲರೂ ಇತ್ತೀಚೆಗಷ್ಟೆ ಭಾರತಕ್ಕೆ ವನಿತೆಯರ ವಿಶ್ವಕಪ್ ತಂದುಕೊಟ್ಟ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್‌ನ ಮೊದಲ ರಿಟೆನ್ಷನ್ ಆಟಗಾರ್ತಿ ಎಂದೇ ಊಹಿಸಿದ್ದರು.
ಆದರೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಹರ್ಮನ್‌ಪ್ರೀತ್ ಕೌರ್ ಬದಲು ಇಂಗ್ಲೆಂಡ್‌ನ ನಾಟ್ ಸೀವರ್ ಬ್ರಂಟ್‌ಗೆ ಮೊದಲ ಆದ್ಯತೆ ನೀಡಿದೆ. ಬ್ರಂಟ್‌ಗೆ 3.5 ಕೋಟಿ ನೀಡಿದರೆ, ಹರ್ಮನ್‌ಪ್ರೀತ್ ಕೌರ್‌ಗೆ 2.5 ಕೋಟಿ ನೀಡಿ ಎರಡನೇ ಆಟಗಾರ್ತಿಯನ್ನಾಗಿ ಉಳಿಸಿಕೊಂಡಿದೆ. ಇನ್ನುಳಿದಂತೆ ಹೇಲಿ ಮ್ಯಾಥ್ಯೂಸ್ ಮೂರನೇ ಆಟಗಾರ್ತಿಯಾಗಿದ್ದು, 1.75 ಕೋಟಿ ನೀಡಿದೆ. ನಾಲ್ಕನೇ ಆಟಗಾರ್ತಿಯನ್ನಾಗಿ ಅಮನ್‌ಜೋತ್ ಕೌರ್ ಉಳಿಸಿಕೊಂಡು 1 ಕೋಟಿ ನೀಡಿದೆ. ಗುಣಳನ್ ಕಮಲಿನಿಗೆ 50 ಲಕ್ಷ ನೀಡಿ ಐದನೇ ಆಟಗಾರ್ತಿಯನ್ನಾಗಿ ಉಳಿಸಿಕೊಂಡಿದೆ.
15 ಕೋಟಿಯಲ್ಲಿ 9 ಕೋಟಿ 25 ಲಕ್ಷವನ್ನು ರಿಟೆನ್ಷನ್‌ಗೆ ಬಳಸಿರುವ ಮುಂಬೈ ಇಂಡಿಯನ್ಸ್ ಪರ್ಸ್‌ನಲ್ಲಿ ಇನ್ನೂ 5.75 ಕೋಟಿ ಹರಾಜಿಗೆ ಉಳಿದಿದೆ.
ಭಾರತ vs ಆಸ್ಟ್ರೇಲಿಯಾ 4ನೇ ಟಿ20: ಬ್ಯಾಟಿಂಗ್ ವಿಭಾಗ ಕೈಕೊಟ್ಟರೂ ಬೌಲರ್‌ಗಳ ದಯೆಯಿಂದ ಗೆದ್ದ ಟೀಮ್ ಇಂಡಿಯಾ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


