ಚಳಿಗಾಲ (ಮಳೆಗಾಲ) ಬಂದಿತೆಂದರೆ ವೈರಲ್ ಜ್ವರ, ನೆಗಡಿ ಮತ್ತು ಕೆಮ್ಮು ಸಾಮಾನ್ಯ. ಇದಕ್ಕೆ ಮುಖ್ಯ ಕಾರಣ, ಈ ಸಮಯದಲ್ಲಿ ವಾತಾವರಣದಲ್ಲಿನ ತೇವಾಂಶದಿಂದ ಹಾನಿಕಾರಕ ವೈರಾಣುಗಳು ಮತ್ತು ಸೂಕ್ಷ್ಮಾಣು ಜೀವಿಗಳು ಹೆಚ್ಚು ಸಕ್ರಿಯವಾಗಿರುವುದು. ಆಗಾಗ ಅನಾರೋಗ್ಯಕ್ಕೆ ಒಳಗಾಗದಂತೆ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು, ನಿಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು (Immunity Power) ಹೆಚ್ಚಿಸಿಕೊಳ್ಳುವುದು ಅತ್ಯಗತ್ಯ.
ರೋಗನಿರೋಧಕ ಶಕ್ತಿಯು ನಮ್ಮ ದೇಹವನ್ನು ಬ್ಯಾಕ್ಟೀರಿಯಾಗಳು, ವೈರಸ್‌ಗಳು ಮತ್ತು ಇತರ ರೋಗಕಾರಕಗಳ ಆಕ್ರಮಣದಿಂದ ರಕ್ಷಿಸುವ ಪ್ರಮುಖ ಸಾಮರ್ಥ್ಯವಾಗಿದೆ.ಆಯುರ್ವೇದದಲ್ಲಿ ಇದನ್ನು ‘ವ್ಯಾಧಿಕ್ಷಮತ್ವ’ ಎಂದು ಕರೆಯುತ್ತಾರೆ.
ದೇಹದಲ್ಲಿ ರೋಗನಿರೋಧಕ ಶಕ್ತಿ ಉತ್ತಮ ಮಟ್ಟದಲ್ಲಿ ಇದ್ದರೆ, ಪದೇಪದೇ ಕಾಯಿಲೆಗೆ ಬೀಳುವ ಸಂದರ್ಭ ಎದುರಾಗುವುದಿಲ್ಲ. ಒಬ್ಬ ವ್ಯಕ್ತಿ ಆರೋಗ್ಯವಾಗಿ ಇರಲು ಇದು ಅತ್ಯಗತ್ಯ.
ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಆಗಾಗ್ಗೆ ಜ್ವರ, ಕೆಮ್ಮು, ಶೀತ, ಅತಿಯಾದ ಆಯಾಸ, ಗಾಯಗಳು ಬೇಗ ಒಣಗದೆ ಇರುವುದು, ಸೋಮಾರಿತನ ಮತ್ತು ಜೀರ್ಣಕ್ರಿಯೆಯಲ್ಲಿ ಸಮಸ್ಯೆಗಳು ಎದುರಾಗುತ್ತವೆ.
ಆಗಾಗ ಅನಾರೋಗ್ಯಕ್ಕೆ ಒಳಗಾಗದಂತೆ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಅಂದರೆ ಮೊದಲು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಬೇಕು. ಅದಕ್ಕಾಗಿ ಮನೆಯಲ್ಲೇ ಸಿಗುವ ಆಹಾರಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ.
ಬೆಳ್ಳುಳ್ಳಿ (Garlic)
ಬೆಳ್ಳುಳ್ಳಿಯು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಪ್ರಬಲ ಶಕ್ತಿಯನ್ನು ಹೊಂದಿದೆ ಮತ್ತು ದೇಹದ ರಕ್ತಸಂಚಾರವನ್ನು ಸುಧಾರಿಸುತ್ತದೆ, ಜೊತೆಗೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.
ಪ್ರತಿದಿನ ಖಾಲಿ ಹೊಟ್ಟೆಯಲ್ಲಿ 1-2 ಬೆಳ್ಳುಳ್ಳಿ ಎಸಳುಗಳನ್ನು ಹಸಿಯಾಗಿ ಅಥವಾ ಊಟದ ಭಾಗವಾಗಿ ಸೇವಿಸುವುದು ಉತ್ತಮ.ಕೆಲವು ಅಧ್ಯಯನಗಳ ಪ್ರಕಾರ, ವಾರದಲ್ಲಿ 6 ಕ್ಕಿಂತ ಹೆಚ್ಚು ಬೆಳ್ಳುಳ್ಳಿ ಎಸಳುಗಳನ್ನು ಸೇವಿಸುವುದರಿಂದ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು.
ಗೆಣಸು (Sweet Potato)
ಪ್ರಯೋಜನಗಳು: ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ, ಗೆಣಸು ತ್ವಚೆಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.ಗೆಣಸಿನಲ್ಲಿ ಹೇರಳವಾಗಿರುವ ವಿಟಮಿನ್ ಎ (Vitamin A) ತ್ವಚೆಯನ್ನು ಆರೋಗ್ಯಪೂರ್ಣವಾಗಿರಿಸುತ್ತದೆ. ತ್ವಚೆಯು ರೋಗಕಾರಕಗಳ ವಿರುದ್ಧ ಹೋರಾಡುವ ಪ್ರಮುಖ ತಡೆಗೋಡೆಯಾಗಿದೆ.
ಕಿವಿ ಹಣ್ಣು (Kiwi Fruit)
ಪ್ರಯೋಜನಗಳು: ಕಿವಿ ಹಣ್ಣಿನಲ್ಲಿ ಹೇರಳವಾಗಿರುವ ವಿಟಮಿನ್ ಇ ಅಂಶವು ದೇಹವನ್ನು ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕುಗಳಿಂದ ಕಾಪಾಡುವ ಶಕ್ತಿಯನ್ನು ಹೊಂದಿದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಶುಂಠಿ (Ginger)
ಶುಂಠಿಗೆ ಉರಿಯೂತ ನಿವಾರಕ (Anti-inflammatory) ಗುಣಗಳಿವೆ. ಇದು ವಿಶೇಷವಾಗಿ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ (Respiratory issues) ನಿಮ್ಮನ್ನು ಕಾಪಾಡುವ ಶಕ್ತಿಯನ್ನು ಹೊಂದಿದೆ.ಶುಂಠಿಯನ್ನು ಬಿಸಿ ಚಹಾ ಅಥವಾ ಇತರ ಬಿಸಿಯಾದ ಪಾನೀಯಗಳ ಜತೆ ಸೇರಿಸಿ ಕುಡಿಯುವುದರಿಂದ ಅದರ ಪ್ರಯೋಜನಗಳನ್ನು ಪೂರ್ಣವಾಗಿ ಪಡೆಯಬಹುದು.
ಮೊಳಕೆ ಕಾಳುಗಳು, ಬಾದಾಮಿ, ವಾಲ್ನಟ್ಸ್, ಗೋಡಂಬಿ, ಕುಂಬಳಕಾಯಿ ಬೀಜಗಳು, ಚಿಯಾ ಬೀಜಗಳು, ಅಗಸೆ ಬೀಜಗಳ ಸೇವನೆ ಮೂಲಕವೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.
ಬೆಟ್ಟದ ನೆಲ್ಲಿಕಾಯಿ;
ಸಾಮಾನ್ಯವಾಗಿ ಚಳಿಗಾಲದ ಸೀಸನ್‌ನಲ್ಲಿ ಹೆಚ್ಚಾಗಿ ಲಭ್ಯವಾಗುವ ಬೆಟ್ಟದ ನೆಲ್ಲಿಕಾಯಿ (Amla), ನಿಮ್ಮ ಆರೋಗ್ಯಕ್ಕೆ ಅತ್ಯಗತ್ಯವಾದ ಪೌಷ್ಟಿಕ ಸತ್ವಗಳು ಮತ್ತು ವಿಟಮಿನ್‌ಗಳನ್ನು ಒದಗಿಸುತ್ತದೆ.
ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಬೆಟ್ಟದ ನೆಲ್ಲಿಕಾಯಿಯನ್ನು ಆಗಾಗ್ಗೆ ಸೇವಿಸಬಹುದು.ಸಾಮಾನ್ಯ ಕಿತ್ತಳೆ ಹಣ್ಣುಗಳಿಗೆ ಹೋಲಿಸಿದರೆ ಇದರಲ್ಲಿ ಸುಮಾರು 20 ಪಟ್ಟು ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ‘ಸಿ’ ಅಂಶ ದೊರೆಯುತ್ತದೆ.
ಗಡಿ ಮೀರಿ ಕನ್ನಡ ನುಡಿ:ಯಾವ ರಾಜ್ಯದಲ್ಲಿ ಎಷ್ಟು ಜನ ನಮ್ಮ ಭಾಷೆ ಮಾತಾಡ್ತಾರೆ ಗೊತ್ತಾ?ಇಲ್ಲಿದೆ ಟಾಪ್ 7 ರಾಜ್ಯಗಳ ಪಟ್ಟಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


