Tuesday, August 4, 2026
spot_img
More
    spot_img
    HomeLatest newsಶಾಲಾ ಮಕ್ಕಳಿಗೆ ಚಾಕೋಲೇಟ್ ಮೂಲಕ ಉಚಿತವಾಗಿ ಡ್ರಗ್ ವಿತರಣೆ; ಪರಮೇಶ್ವರ್ ಆಕ್ರೋಶ

    ಶಾಲಾ ಮಕ್ಕಳಿಗೆ ಚಾಕೋಲೇಟ್ ಮೂಲಕ ಉಚಿತವಾಗಿ ಡ್ರಗ್ ವಿತರಣೆ; ಪರಮೇಶ್ವರ್ ಆಕ್ರೋಶ

    ಬೆಂಗಳೂರು: ರಾಜ್ಯವನ್ನು ಮಾದಕ ವ್ಯಸನ ಮುಕ್ತಗೊಳಿಸುವ ನಿಟ್ಟಿನಲ್ಲಿ ಮಾದಕ ವಸ್ತುಗಳ ಮಾರಾಟಗಾರರು, ಬಳಕೆದಾರರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಸಮರ ಸಾರಿದ್ದು, ಗುರಿ ಸಾಧಿಸುವವರೆಗೆ ವಿರಮಿಸುವುದಿಲ್ಲ ಎಂದು ಗೃಹ ಸಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.

    Advertisement

    ಬೆಂಗಳೂರು ಸಿಟಿ ಪೊಲೀಸ್‌ ಹಾಗೂ ಫೆಡರೇಷನ್‌ ಆಫ್‌ ಹಿಸ್ಟೋರಿಕ್‌ ವೆಹಿಕಲ್ಸ್‌ ಆಫ್‌ ಇಂಡಿಯಾ (ಎಫ್ಎಚ್ ವಿಐ) ಸಹಯೋಗದಲ್ಲಿ ಪೌಲ್‌ ಜಾನ್‌ ರೆಸಾರ್ಟ್‌ ಮತ್ತು ಹೊಟೇಲ್‌ ಸಂಸ್ಥೆ ಭಾನುವಾರ ಆಯೋಜಿಸಿದ್ದ ಡ್ರಗ್ಸ್‌ ಮುಕ್ತ ಕರ್ನಾಟಕಕ್ಕಾಗಿ ವಿಂಟೇಜ್‌ ಕಾರ್‌ ರ‍್ಯಾಲಿ ಜಾಗೃತಿ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.

    “ಕರ್ನಾಟಕ ಮಾತ್ರವಲ್ಲ, ವಿಶ್ವದೆಲ್ಲೆಡೆ ಸಮಾಜ ಮಾದಕ ವ್ಯಸನದ ಜತೆ ಹೋಗುತ್ತಿದೆ. ಮಾದಕ ವಸ್ತುಗಳನ್ನು ಯಾರು ಬೆಂಬಲಿಸುತ್ತಾರೋ ಅವರು ಮನುಷ್ಯರಲ್ಲ, ಜನರ ಜೀವನದ ಜತೆ ಆಟವಾಡುತ್ತಾರೆ. ಅವರ ಭವಿಷ್ಯ, ಆರೋಗ್ಯವನ್ನು ನಾಶ ಮಾಡುತ್ತಾರೆ. ಇದನ್ನು ಮನಗಂಡು ನಮ್ಮ ಸರ್ಕಾರ ಕರ್ನಾಟಕವನ್ನು ಮಾದಕ ವ್ಯಸನ ಮಕ್ತ ರಾಜ್ಯವಾಗಿ ರೂಪಿಸುವ ಬಗ್ಗೆ ಸರ್ಕಾರ ಘೋಷಿಸಿತ್ತು,” ಎಂದರು.

    “ಘೋಷಣೆಯಾದ ಕೂಡಲೇ ಕರ್ನಾಟಕ ಮಾದಕ ವ್ಯಸನ ಮುಕ್ತವಾಯಿತು ಎಂದು ಅರ್ಥವಲ್ಲ. ಅದರ ವಿರುದ್ಧ ಯುದ್ಧ ಆರಂಭಿಸಿದ್ದೇವೆ. ಸರ್ಕಾರ ಮತ್ತು ಪೊಲೀಸರು ಯುದ್ಧ ಮಾಡುತ್ತಿದ್ದಾರೆ. ಇದರ ಪರಿಣಾಮ ಕಳೆದ ವರ್ಷದಿಂದ 300 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಸಾವಿರಾರು ಜನರನ್ನು ಬಂಧಿಸಿದ್ದು, ಕೆಲವರು ಇನ್ನೂ ಜೈಲಿನಲ್ಲಿದ್ದಾರೆ. ವಿದೇಶದಿಂದ ಶಿಕ್ಷಣಕ್ಕಾಗಿ ಬಂದವರೂ ಇಂಥ ದುಷ್ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ,” ಎಂದು ಹೇಳಿದರು.

    “ಡ್ರಗ್ಸ್ ದಂಧೆಕೋರರು ಎಷ್ಟು ಕೀಳು ಮಟ್ಟಕ್ಕೆ ಇಳಿದ್ದಾರೆ ಎಂದರೆ, ಶಾಲೆಗೆ ತೆರಳಿ ಚಾಕೋಲೇಟ್ ಮೂಲಕ ಮಕ್ಕಳಿಗೆ ಉಚಿತವಾಗಿ ಡ್ರಗ್ಸ್ ಹಂಚುತ್ತಿದ್ದಾರೆ. ಮಕ್ಕಳು ಅದಕ್ಕೆ ದಾಸರಾಗುವಂತೆ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ,” ಎಂದು ಹೇಳಿದ ಸಚಿವರು, ಮಾದಕ ವಸ್ತುಗಳ ಬಳಕೆಯಿಂದ ದೂರ ಇರಬೇಕು ಎಂದು ವಿದ್ಯಾರ್ಥಿ ಸಮುದಾಯ ಮತ್ತು ಐಟಿ ಪದವೀಧರರು ಸೇರಿದಂತೆ ಯುವ ಸಮುದಾಯವನ್ನು ಮನವಿ ಮಾಡಿದರು.

    ಕಾರ್ಯಕ್ರದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎಸ್.ಸಲೀಂ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಫೆಡೆರೇಷನ್ ಆಫ್ ಹಿಸ್ಟೋರಿಕಲ್ ವೆಹಿಕಲ್ ಇಂಡಿಯಾದ ಡಾ.ರವಿಪ್ರಕಾಶ್, ಚಿತ್ರನಟ ಮದನ್ ಪಟೇಲ್ ಮತ್ತಿತರರು ಪಾಲ್ಗೊಂಡಿದ್ದರು.

    ವಿಧಾನಸೌಧದ ಮುಭಾಗದಿಂದ ಹೊಟ ವಿಂಟೇಜ್‌ ಕಾರುಗಳ ಈ ಆಕರ್ಷಕ ಮೆರವಣಿಗೆ, ಬಿಗ್‌ ಬನಿಯಾನ್‌ ವೈನ್‌ಯಾರ್ಡ್‌ ಅಂಡ್‌ ರೆಸಾರ್ಟ್‌ ತನಕ ಸಾಗಿತು.ಸಾವಿರಾರು ಮಂದಿ ರಸ್ತೆ ಬದಿ ನಿಂತು ಮೆರವಣಿಗೆ ವೀಕ್ಷಿಸಿದರು.

    ಏಕದಿನ ರ‍್ಯಾಂಕಿಂಗ್‌ನಲ್ಲಿ 4ನೇ ಸ್ಥಾನದಲ್ಲಿರುವ ಕೊಹ್ಲಿ ನಂಬರ್ 1 ಆಗಲು ಇಂದಿನ ಪಂದ್ಯದಲ್ಲಿ ಇಷ್ಟು ರನ್ ಬಾರಿಸಲೇಬೇಕಿತ್ತು


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading