ಬೆಂಗಳೂರು: ಸಾರಿಗೆ ಸಂಸ್ಥೆಯು ನಾಲ್ಕೂ ನಿಗಮಗಳ ಪ್ರಯಾಣ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿ ಪಾಸ್‌ಗಳ ದರದಲ್ಲಿ ಏರಿಕೆಯಾಗಿದೆ.
ನಾಳೆಯಿಂದಲೇ ಬಿಎಂಟಿಸಿ ಪಾಸ್‌ಗಳ ದರ ಏರಿಕೆ ಆಗಲಿದೆ. ಹಳೆಯ ಪಾಸ್ ದರವನ್ನು ಪರಿಷ್ಕರಿಸಿ ಹೊಸ ದರ ಕುರಿತು ಪ್ರಕಟಣೆ ಹೊರಡಿಸಲಾಗಿದೆ.
70 ರೂಪಾಯಿ ಇದ್ದ ಬಿಎಂಟಿಸಿ ಡೈಲಿ ಪಾಸ್ ದರ ಈಗ 80 ರೂಪಾಯಿ ಆಗಿದೆ. 300 ರೂ ಇದ್ದ ಬಿಎಂಟಿಸಿ ವಾರದ ಪಾಸ್ ದರ ಈಗ 350ರೂಗೆ ಏರಿಕೆಯಾಗಿದೆ. 945ರೂ ಇದ್ದ ಹಿರಿಯ ನಾಗರಿಕೆ ಮಾಸಿಕ ಪಾಸ್ ಈಗ 1080ರೂ ಆಗಿದೆ. 1050ರೂ ಇದ್ದ ಸಾಮಾನ್ಯ ಮಾಸಿಕ ಪಾಸ್ ದರ ಈಗ 1200ರೂಗೆ ಏರಿಕೆಯಾಗಿದೆ. 2200ರೂ ಇದ್ದ ನೈಸ್ ರೋಡ್ ಮಾಸಿಕ ಪಾಸ್ ದರ ಈಗ 2350 ರೂಗೆ ಏರಿಕೆಯಾಗಿದೆ.
ಇನ್ನು ಒಪ್ಪಂದದ ಮೇಲೆ ಪಡೆಯುವ ಬಸ್‌ಗಳ ದರವನ್ನು ಸಾರಿಗೆ ಇಲಾಖೆ ಏರಿಕೆ ಮಾಡಿದೆ. ಸಾಂದರ್ಭಿಕ ಒಪ್ಪಂದದ ಮೇಲೆ ಒದಗಿಸುವ ಬಸ್‌ಗಳ ಬಾಡಿಗೆ ಪರಿಷ್ಕರಣೆ ಮಾಡಲಾಗಿದೆ. ಈ ದರವನ್ನು ಕೆಎಸ್‌ಆರ್‌ಟಿಸಿ ಶೇಕಡಾ.15ರಷ್ಟು ಹೆಚ್ಚಳ ಮಾಡಿದೆ.
ಪ್ರತೀ ಕಿ.ಮೀ ದರದ ಮೇಲೆ ಬಾಡಿಗೆ ದರ ಹೆಚ್ಚಳ ಮಾಡಲಾಗಿದ್ದು, ಸಾಮಾನ್ಯ ಸಾರಿಗೆ, ಅಶ್ವಮೇಧ ಸೇರಿದಂತೆ 16 ಬಗೆಯ ಬಸ್‌ಗಳ ಬಾಡಿಗೆ ದರವನ್ನು ಸಹ ಏರಿಕೆ ಮಾಡಲಾಗಿದೆ.
ಇನ್ನು ಈಗಾಗಲೇ ಬುಕ್ಕಿಂಗ್ ಆಗಿರುವ ಒಪ್ಪಂದದ ವಾಹನಗಳಿಗೆ ಹಳೆಯ ದರವನ್ನೇ ವಿಧಿಸುವಂತೆ ಆದೇಶ ಹೊರಡಿಸಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


