ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಜಾಮೀನಿನ ಮೇರೆಗೆ ಹೊರಬಂದಿರುವ ದರ್ಶನ್ ಹೊರಗೆಲ್ಲೂ ಕಾಣಿಸಿಕೊಂಡಿರಲಿಲ್ಲ. ಬೆನ್ನು ನೋವಿನ ಕಾರಣ ಜಾಮೀನು ಪಡೆದಿರುವ ದರ್ಶನ್ ಆಸ್ಪತ್ರೆಗೆಂದು ಹೊರಬಂದದ್ದು ಬಿಟ್ಟರೆ ಇನ್ನೆಲ್ಲೂ ಕಾಣಿಸಿಕೊಂಡಿರಲಿಲ್ಲ.
ಹೀಗೆ ವಿಶ್ರಾಂತಿ ಪಡೆಯುತ್ತಿರುವ ದರ್ಶನ್ ಹುಟ್ಟುಹಬ್ಬ ಸಮೀಪಿಸುತ್ತಿದ್ದು, ಹುಟ್ಟುಹಬ್ಬದಂದು ಈ ಬಾರಿ ತಾನು ಅಭಿಮಾನಿಗಳಿಗೆ ಸಿಗುವುದಿಲ್ಲ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ವಿಡಿಯೊ ಹಂಚಿಕೊಳ್ಳುವ ಮೂಲಕ ತಿಳಿಸಿದ್ದಾರೆ.
ಅಲ್ಲದೇ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ದರ್ಶನ್ ಚಿತ್ರರಂಗದ ಮೂವರಿಗೆ ತುಂಬಾ ಥ್ಯಾಂಕ್ಸ್ ಎಂದಿದ್ದಾರೆ. “ಈ ಮುಖಾಂತರ ನಾನು ಮೂರು ಜನಕ್ಕೆ ತುಂಬಾನೇ ಥ್ಯಾಂಕ್ಸ್ ಹೇಳಬೇಕು. ವಿಶೇಷವಾಗಿ ನಮ್ಮ ಹೀರೊ ಧನ್ವೀರ್ ಅವರಿಗೆ. ಯಾಕಂದ್ರೆ ಆತ ಪಾಪ ಯಾವಾಗಲೂ ಜೊತೆಗೇ ಇದ್ದು, ದೊಡ್ಡ ಬೆನ್ನೆಲುಬು, ಮಾರಲ್ ಸಪೋರ್ಟ್ ಆಗಿದ್ದ. ಹಾಗೆನೇ ನಮ್ಮ ಬುಲ್ಬುಲ್ ರಚಿತಾ ರಾಮ್ ಅವರಿಗೂ ತುಂಬಾನೇ ಥ್ಯಾಂಕ್ಸ್. ನನ್ನ ಪ್ರಾಣ ಸ್ನೇಹಿತೆಯಾದ ರಕ್ಷಿತಂಗೂ ಥ್ಯಾಂಕ್ಸ್. ಆಮೇಲೆ ಎಲ್ಲಾ ನನ್ನ ಸೆಲೆಬ್ರಿಟಿಗಳಿಗೂ ಅನಂತ ಅನಂತ ಧನ್ಯವಾದಗಳು”
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


