ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಳಿಕ ಜಾಮೀನು ಪಡೆದು ಹೊರಬಂದಿರುವ ನಟ ದರ್ಶನ್ ಚಿತ್ರೀಕರಣದಲ್ಲಿ ಯಾವಾಗಿನಿಂದ ಪಾಲ್ಗೊಳ್ಳಲಿದ್ದಾರೆ ಎಂದು ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.
ಅತ್ತ ಬೆನ್ನು ನೋವಿನಿಂದ ಬಳಲುತ್ತಿರುವ ದರ್ಶನ್ ಜೈಲಿನಿಂದ ಹೊರಬಂದ ಬಳಿಕ ಹೊರಗೆಲ್ಲೂ ಕಾಣಿಸಿಕೊಳ್ಳದೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಇದೇ ತಿಂಗಳು ಇರುವ ಹುಟ್ಟುಹಬ್ಬದಂದು ನೆಚ್ಚಿನ ನಟನನ್ನು ನೋಡಲು ಕಾಯುತ್ತಿದ್ದ ಅಭಿಮಾನಿಗಳಿಗೂ ಸಹ ಬೇಸರದ ಸುದ್ದಿಯನ್ನು ದರ್ಶನ್ ನೀಡಿದ್ದಾರೆ.
ಹೌದು, ಈ ಬಾರಿಯ ಹುಟ್ಟುಹಬ್ಬಕ್ಕೆ ತಾನು ಸಿಗುವುದಿಲ್ಲ ಎಂದು ವಿಡಿಯೊ ಹಂಚಿಕೊಳ್ಳುವ ಮೂಲಕ ತಿಳಿಸಿರುವ ದರ್ಶನ್ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.
ಅಲ್ಲದೇ ತಮಿಳು ಭಾಷೆಯ ಸಿನಿಮಾದಲ್ಲಿ ದರ್ಶನ್ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಇದರ ಕುರಿತೂ ಸಹ ಮಾತನಾಡಿರುವ ದರ್ಶನ್ “ಇಲ್ಲಿ ಇಷ್ಟೊಂದು ಪ್ರೀತಿ ಅಭಿಮಾನ ತೋರಿಸಿದ್ದೀರ, ಎಲ್ಲಾ ಮಾಡಿದ್ದೀರ. ಸುಮ್ನೇ ಎಲ್ಲಿಗೆ ಅಂತ ಹೋಗಲಿ? ಸಾಯುವರೆಗೂ ಇಲ್ಲೇನೇ. ಇಲ್ಲಿ ಬಿಟ್ಟು ಇನ್ನೆಲ್ಲೂ ನಾನು ಹೋಗೋಕೆ ಆಗೋದು ಇಲ್ಲ. ಏಕೆಂದರೆ ಒಂದು ಈಸಿಯಾಗಿ ಇದನ್ನ ಹೇಳ್ತೀನಿ. ಕಾವೇರಿ ಎಲ್ಲಿ ಹುಟ್ತಾಳೆ ಅನ್ನೋದು ನಿಮಗೂ ಚೆನ್ನಾಗಿ ಗೊತ್ತು. ಆ ಕೊಡಗಲ್ಲೇ ನಾನು ಹುಟ್ಟಿರೋದು. ಅವಳು ಅಲ್ಲಿ ಹುಟ್ತಾಳೆ ಕಾವೇರಿ. ಎಲ್ಲಾ ಕಡೆ ಹರಿದುಕೊಂಡು ಬರ್ತಾಳೆ. ನನ್ನ ಸೀಮಿತ ಇರೋದು ಬರೀ ಮೇಕೆದಾಟು ಅಷ್ಟೇನೆ. ಅದಕ್ಕಿಂತ ಮುಂದೆ ಎಲ್ಲಾದ್ರೂ ಹರಿದುಕೊಂಡು ಹೋಗಲಿ. ಅದುಕ್ಕೂ ನಂಗೂ ಸಂಬಂಧ ಇಲ್ಲ. ಆ ಥರ ನಾನು ಯಾವಾಗ ಸಿನಿಮಾ ಮಾಡಿದ್ರೂ, ಏನೇ ಸಿನಿಮಾ ಮಾಡಿದ್ರೂ ಇಲ್ಲೇನೆ. ಕನ್ನಡ ಸಿನಿಮಾನೇ ಮಾಡೋದು” ಎಂದು ಸ್ಪಷ್ಟನೆ ನೀಡಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


