ನವದೆಹಲಿ: ಇಂದು (ಫೆಬ್ರವರಿ 8) ದೆಹಲಿ ವಿಧಾನಸಭಾ ಚುನಾವಣೆಯ ಮತಎಣಿಕೆ ನಡೆಯುತ್ತಿದ್ದು, ಬಿಜೆಪಿ ಸ್ಪಷ್ಟ ಬಹುಮತ ಪಡೆದುಕೊಂಡು ಪ್ರಚಂಡ ಗೆಲುವು ಸಾಧಿಸುವತ್ತ ದಾಪುಗಾಲು ಇಟ್ಟಿದೆ.
ಇನ್ನು ಆಮ್ ಆದ್ಮಿ ಪಾರ್ಟಿಯ ಅರವಿಂದ್ ಕೇಜ್ರಿವಾಲ್ ಹಾಗೂ ಮನೀಶ್ ಸಿಸೊಡಿಯಾ ರೀತಿಯ ಬಲಿಷ್ಠ ನಾಯಕರೇ ಸೋಲನ್ನು ಅನುಭವಿಸಿದ್ದು, ಮನಿಲಾಂಡರಿಂಗ್ ಪ್ರಕರಣದಲ್ಲಿ ಸುದೀರ್ಘ ಕಾಲ ಜೈಲುವಾಸಿಯಾಗಿದ್ದ ಆಪ್‌ನ ಸತ್ಯೇಂದ್ರ ಜೈನ್ ಸಹ ಸೋಲನ್ನು ಅನುಭವಿಸಿದ್ದಾರೆ.
ಹೌದು, ಶಕುರ್ ಬಸ್ತಿ ಕ್ಷೇತ್ರದಲ್ಲಿ ಕಣಕ್ಕಿಳಿದಿದ್ದ ಸತ್ಯೇಂದ್ರ ಜೈನ್ ಬಿಜೆಪಿಯ ಕರ್ನೈಲ್ ಸಿಂಗ್ ವಿರುದ್ಧ ಸುಮಾರು 20 ಸಾವಿರಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲುಂಡು ತೀವ್ರ ಮುಖಭಂಗ ಅನುಭವಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


