Monday, November 2, 2026
spot_img
More
    spot_img
    HomeSportsCricketWPL 2025: ರಿಚಾ ಘೋಷ್, ಸ್ನೇಹ್ ರಾಣಾ ಅಬ್ಬರ ವ್ಯರ್ಥ; ಸತತ 5 ಸೋಲುಂಡು ಎಲಿಮಿನೇಟ್...

    WPL 2025: ರಿಚಾ ಘೋಷ್, ಸ್ನೇಹ್ ರಾಣಾ ಅಬ್ಬರ ವ್ಯರ್ಥ; ಸತತ 5 ಸೋಲುಂಡು ಎಲಿಮಿನೇಟ್ ಆದ ಆರ್‌ಸಿಬಿ

    ಲಕ್ನೋ: ಲಕ್ನೋ: ಇಲ್ಲಿನ ಏಕನ ಕ್ರೀಡಾಂಗಣದಲ್ಲಿ ಇಂದು (ಮಾರ್ಚ್ 8) ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್‌ನ 18ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಯುಪಿ ವಾರಿಯರ್ಸ್ 12 ರನ್‌ಗಳ ಗೆಲುವನ್ನು ಕಂಡಿದೆ. ಈ ಮೂಲಕ ಹಾಲಿ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೂರ್ನಿಯಿಂದ ಹೊರಬಿದ್ದಿದೆ.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಯುಪಿ ವಾರಿಯರ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 225 ರನ್ ಕಲೆಹಾಕಿ ಬೆಂಗಳೂರಿಗೆ 226 ರನ್‌ಗಳ ಕಠಿಣ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು 19.3 ಓವರ್‌ಗಳಲ್ಲಿ 213 ರನ್‌ಗಳಿಗೆ ಆಲ್‌ಔಟ್ ಆಗಿದೆ.

    ಯುಪಿ ವಾರಿಯರ್ಸ್ ಪರ ಆರಂಭಿಕರಾಗಿ ಕಣಕ್ಕಿಳಿದ ಗ್ರೇಸ್ ಹ್ಯಾರಿಸ್ 39 ರನ್ ಗಳಿಸಿದರೆ, ಜಾರ್ಜಿಯಾ ವಾಲ್ ಕೊನೆಯವರೆಗೂ ಅಬ್ಬರದ ಬ್ಯಾಟಿಂಗ್ ನಡೆಸಿ ಶತಕ ವಂಚಿತರಾದರು. ಜಾರ್ಜಿಯಾ ವಾಲ್ 56 ಎಸೆತಗಳಲ್ಲಿ 17 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 99 ರನ್ ಗಳಿಸಿದರು.

    ಇನ್ನುಳಿದಂತೆ ಕಿರಣ್ ನವ್‌ಗೈರ್ 46, ಸಿನೆಲ್ ಹೆನ್ರಿ 19, ಸೋಫಿ ಎಕ್ಸೆಲ್‌ಟನ್ 13 ಹಾಗೂ ದೀಪ್ತಿ ಶರ್ಮಾ ಅಜೇಯ 1 ರನ್ ಗಳಿಸಿದರು.

    ಅರ್‌ಸಿಬಿ ಪರ ಜಾರ್ಜಿಯಾ ವಾರೆಹಮ್ ಎರಡು ವಿಕೆಟ್ ಹಾಗೂ ಚಾರ್ಲಿ ಡೀನ್ ಒಂದು ವಿಕೆಟ್ ಪಡೆದರು.

    ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್: ತಂಡದ ನಾಯಕಿ ಸ್ಮೃತಿ ಮಂಧಾನ ವೇಗವಾಗಿ ಪೆವಿಲಿಯನ್ ಸೇರಿಕೊಂಡ ಕಾರಣ ತಂಡ ಆರಂಭಿಕ ಆಘಾತ ಅನುಭವಿಸಿತು. ಮಧ್ಯಮ ಕ್ರಮಾಂಕದಲ್ಲಿ ರಿಚಾ ಘೋಷ್ ಅಬ್ಬರಿಸಿದ್ದು ಹಾಗೂ 19ನೇ ಓವರ್‌ನಲ್ಲಿ 5 ಎಸೆತಗಳಲ್ಲಿ ಸ್ನೇಹ್ ರಾಣಾ 26 ರನ್ ಬಾರಿಸಿದ್ದು ಬಿಟ್ಟರೆ ತಂಡದ ಉಳಿದವರೆಲ್ಲಾ ನೆಲಕಚ್ಚಿದರು.

    ಸ್ಮೃತಿ ಮಂಧಾನ 4, ಸಬ್ಭಿನೇನಿ ಮೇಘನ 27, ಆಲಿಸ್ ಪೆರಿ 26, ರಾಘ್ವಿ ಬಿಸ್ಟ್ 14, ರಿಚಾ ಘೋಷ್ 33 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 5 ಬೌಂಡರಿ ಸಹಿತ 69 ರನ್, ಕನಿಕಾ ಅಹುಜಾ 8, ಜಾರ್ಜಿಯಾ ವಾರೆಹಮ್ 17, ಷಾರ್ಲೊಟ್ ಡೀನ್ 9, ಸ್ನೇಹ್ ರಾಣಾ 6 ಎಸೆತಗಳಲ್ಲಿ 2 ಸಿಕ್ಸರ್ ಹಾಗೂ 3 ಸಿಕ್ಸರ್ ಸಹಿತ 26 ರನ್, ರೇಣುಕಾ ಸಿಂಗ್ 1 ಹಾಗೂ ಕಿಮ್ ಗಾರ್ತ್ ಅಜೇಯ 3 ರನ್ ಗಳಿಸಿದರು.

    ಯುಪಿ ಪರ ಎಕ್ಸೆಲ್‌ಸ್ಟನ್ ಹಾಗೂ ದೀಪ್ತಿ ಶರ್ಮಾ ತಲಾ 3 ವಿಕೆಟ್ ಪಡೆದರೆ, ಶಿನೆಲ್ ಹೆನ್ರಿ 2 ವಿಕೆಟ್ ಹಾಗೂ ಅಂಜಲಿ ಒಂದು ವಿಕೆಟ್ ಪಡೆದರು.



    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search