Monday, August 31, 2026
spot_img
More
    spot_img
    HomeEntertainmentಸಿನಿಮಾ ಚೆನ್ನಾಗಿಲ್ಲ ಅಂದ್ರೆ ರಿವ್ಯೂ ಮಾಡಬೇಡಿ ನಷ್ಟವಾಗುತ್ತೆ ಎಂದ ಡಾರ್ಲಿಂಗ್ ಕೃಷ್ಣ; ಪ್ರೇಕ್ಷಕರ ದುಡ್ಡಿಗೆ ಬೆಲೆ...

    ಸಿನಿಮಾ ಚೆನ್ನಾಗಿಲ್ಲ ಅಂದ್ರೆ ರಿವ್ಯೂ ಮಾಡಬೇಡಿ ನಷ್ಟವಾಗುತ್ತೆ ಎಂದ ಡಾರ್ಲಿಂಗ್ ಕೃಷ್ಣ; ಪ್ರೇಕ್ಷಕರ ದುಡ್ಡಿಗೆ ಬೆಲೆ ಇಲ್ವಾ?

    ಲವ್‌ ಮಾಕ್‌ಟೇಲ್‌ ಚಿತ್ರದ ಮೂಲಕ ಸಕ್ಸಸ್‌ ಕಂಡ ಡಾರ್ಲಿಂಗ್‌ ಕೃಷ್ಣ ಕೈನಲ್ಲಿ ಲವ್‌ ಮಿ ಆರ್‌ ಹೇಟ್‌ ಮಿ ಹಾಗೂ ಫಾದರ್‌ ಚಿತ್ರಗಳಿವೆ. ತನ್ನ ನಟನೆ ಮೂಲಕ ಜನರ ಮನ ಗೆದ್ದಿರುವ ಕೃಷ್ಣ ಕಡೆಯಿಂದ ಕನ್ನಡ ಸಿನಿ ರಸಿಕರು ಮತ್ತೊಮ್ಮೆ ಲವ್‌ ಮಾಕ್‌ಟೇಲ್‌ ಮಟ್ಟದ ಚಿತ್ರವನ್ನು ನಿರೀಕ್ಷೆ ಮಾಡುತ್ತಿದ್ದಾರೆ.

    Advertisement

    ಇನ್ನು ಡಾರ್ಲಿಂಗ್‌ ಕೃಷ್ಣ ನಟನೆ ಜೊತೆಗೆ ನಿರ್ದೇಶನ ಹಾಗೂ ನಿರ್ಮಾಪಕನಾಗಿಯೂ ಕೆಲಸ ಮಾಡಿದ್ದಾರೆ. ಹೀಗಾಗಿ ಸಿನಿಮಾ ವ್ಯವಹಾರದ ಬಗ್ಗೆ ಕೃಷ್ಣಗೆ ಜ್ಞಾನವೂ ಇದೆ. ಇಂತಹ ಡಾರ್ಲಿಂಗ್‌ ಕೃಷ್ಣ ನಿರ್ಮಾಪಕನ ಪರ ಮಾತನಾಡಲು ಹೋಗಿ ಎಡವಟ್ಟು ಮಾಡಿಕೊಂಡಿದ್ದಾರೆ.

    ʼಸಿನಿಮಾ ಚೆನ್ನಾಗಿತ್ತು ಎಂದರೆ ಆ ಸಿನಿಮಾವನ್ನು ಚೆನ್ನಾಗಿ ಹೊಗಳಿ, ನೆಗೆಟಿವ್ಸ್‌ ಹೇಳಿಕೊಂಡು ಕೂರಬೇಡಿ. ಈ ಸಿನಿಮಾ ಚೆನ್ನಾಗಿದೆ ಅಂತ ಹೇಳಿ. ನಿಮಗೆ ಸಿನಿಮಾ ಇಷ್ಟವಾಗದಿದ್ದರೆ ದಯವಿಟ್ಟು ರಿವ್ಯೂನೇ ಮಾಡಬೇಡಿ. ಸಿನಿಮಾ ನೋಡಬೇಡಿ, ನೋಡೋಕೂ ಲಾಯಕ್‌ ಇಲ್ಲ ಅಂತ ಹೇಳಬೇಡಿ. ಹಾಗೆಲ್ಲ ಹೇಳಿದರೆ ಟಿವಿ ರೈಟ್ಸ್‌ ಸಮಸ್ಯೆ ಆಗುತ್ತೆ. ಆದರೆ ಒಬ್ಬರಿಗೆ ಒಳ್ಳೆಯದನ್ನು ಮಾಡೋಣ. ಒಬ್ಬ ನಿರ್ಮಾಪಕ ಎರಡರಿಂದ ಮೂರು ಕೋಟಿ ಹಾಕಿ ಬಂದಿರುತ್ತಾರೆ. ನೆಗೆಟಿವ್‌ ರಿವ್ಯೂ ಮಾಡದೇ ಇದ್ದರೆ ಐದರಿಂದ ಹತ್ತು ಲಕ್ಷ ಕಲೆಕ್ಷನ್‌ ಜಾಸ್ತಿಯಾಗಬಹುದು. ಚೂರಾದರೂ ಉಸಿರಾಡಿಕೊಳ್ಳಲಿ ಅಲ್ವಾ? ನಾವೇಕೆ ಇನ್ನೊಬ್ಬರ ಅನ್ನ ಹಾಳು ಮಾಡಬೇಕುʼ ಎಂದು ಡಾರ್ಲಿಂಗ್‌ ಕೃಷ್ಣ ಇತ್ತೀಚೆಗೆ ನಡೆದ ಒಂದು ಸಂದರ್ಶನದಲ್ಲಿ ಹೇಳಿಕೆ ನೀಡಿದ್ದಾರೆ.

    ಕೃಷ್ಣ ಅವರ ಈ ಹೇಳಿಕೆ ಸದ್ಯ ವಿವಾದ ಎಬ್ಬಿಸಿದೆ. ನಿರ್ಮಾಪಕನೊಬ್ಬ ಎರಡರಿಂದ ಮೂರು ಕೋಟಿ ಹಾಕಿ ಕೆಟ್ಟ ಸಿನಿಮಾ ಮಾಡಿದರೆ ಅದನ್ನು ಬೆವರು ಸುರಿಸಿ ಸಂಪಾದಿಸಿದ ಹಣದಲ್ಲಿ ನೋಡುವ ಪ್ರೇಕ್ಷಕ ಏನೂ ಹೇಳದೇ ತೆಪ್ಪಗಿರಬೇಕೆನ್ನುವುದು ಎಷ್ಟು ಸರಿ? ಅಷ್ಟಕ್ಕೂ ಸಿನಿಮಾ ಚೆನ್ನಾಗಿದ್ದರೆ ತೆಗಳುವವರು ಯಾರು? ನಿರ್ಮಾಪಕನಿಗೆ ನಷ್ಟವಾಗಲಿದೆ ಎನ್ನುವ ಕಾರಣಕ್ಕೆ ರಿವ್ಯೂ ಹೇಳದೇ ಚಿತ್ರ ಎಷ್ಟು ಕೆಟ್ಟದಾಗಿದೆಯೋ ಅದನ್ನು ಒಪ್ಪಿಕೊಂಡರೆ ಪ್ರೇಕ್ಷಕ ಹಾಕಿದ ಹಣಕ್ಕೆ ಬೆಲೆ ಇಲ್ವಾ? ಅಲ್ಲದೇ ಅಂತಹ ಕೆಟ್ಟ ಸಿನಿಮಾಗಳನ್ನೇ ತೆಪ್ಪಗೆ ನೋಡಿದ್ದಾರೆ ಇನ್ನು ನಮ್ಮ ಚಿತ್ರವನ್ನು ನೋಡುವುದಿಲ್ವ ಎಂದು ಪ್ರತಿಭೆಯೇ ಇಲ್ಲದವರು ಇನ್ನಷ್ಟು ಕೆಟ್ಟ ಸಿನಿಮಾಗಳನ್ನು ಮಾಡಲು ಮುಂದಾಗಲ್ವಾ?

    ಇದೇ ಅಭಿಪ್ರಾಯವನ್ನು ಕಾಮೆಂಟ್‌ಗಳಲ್ಲಿ ಹಾಗೂ ಎಕ್ಸ್‌ನಲ್ಲಿ ಸಿನಿ ರಸಿಕರು ಹೊರಹಾಕಿದ್ದು, ನಿಮ್ಮ ದುಡ್ಡು ಮಾತ್ರ ದುಡ್ಡಾ ಪ್ರೇಕ್ಷಕರ ಹಣಕ್ಕೆ ಬೆಲೆ ಇಲ್ವಾ? ಪ್ರೇಕ್ಷಕರು ಅವರ 300 ರೂ ಕೊಟ್ಟು ನಿಮ್ಮ ಕೆಟ್ಟ ಸಿನಿಮಾ ನೋಡಿಕೊಂಡು ಬರಬೇಕಾ? ಎಂದು ಡಾರ್ಲಿಂಗ್‌ ಕೃಷ್ಣ ಅವರ ಈ ವಿಡಿಯೊ ಹಂಚಿಕೊಂಡು ಕಿಡಿಕಾರಿದ್ದಾರೆ.

    ಜನರಿಗೆ ಎಲ್ಲೇ ಸಮಸ್ಯೆಯಾದರೂ ಪ್ರಶ್ನೆ ಮಾಡುವುದು ನನ್ನ ಕರ್ತವ್ಯ: ಪ್ರಕಾಶ್‌ ರಾಜ್

    ಕೃಷಿ ಎಐ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading