ನವದೆಹಲಿ: ರಾಜ್ಯ ರಾಜಕೀಯದಲ್ಲಿ ಸೆಪ್ಟೆಂಬರ್ ಕ್ರಾಂತಿ ಬಿರುಗಾಳಿ ಜೋರಾಗಿ ಬೀಸುತ್ತಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಅವರನ್ನು ಎಐಸಿಸಿ ಒಬಿಸಿ ರಾಷ್ಟ್ರೀಯ ಸಲಹಾ ಮಂಡಳಿ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.
ಈ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯ ರಾಜಕಾರಣವನ್ನು ತೊರೆದು ರಾಷ್ಟ್ರ ರಾಜಕಾರಣಕ್ಕೆ ತೆರಳಲಿದ್ದಾರೆಯೇ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಇದೇ ಸಮಯದಲ್ಲಿ ಬಿಜೆಪಿ ಶಾಸಕ ಶ್ರೀರಾಮುಲು ಈ ಕುರಿತು ಮಾತನಾಡಿದ್ದು, ಸಿದ್ದರಾಮಯ್ಯನವರನ್ನು ಈ ಜವಾಬ್ದಾರಿ ಕೊಟ್ಟು ಕೇಂದ್ರಕ್ಕೆ ಕರೆತರುತ್ತಿರುವುದು ಮೋದಿಗೆ ಪ್ರತಿಸ್ಪರ್ಧಿ ಮಾಡಲೆಂದು ಎಂದು ಹೇಳಿಕೆ ನೀಡಿದ್ದಾರೆ.
ಯಾವತ್ತೂ ಸಹ ಇಂತಹ ನಿರ್ಧಾರ ಕೈಗೊಳ್ಳದ ಕಾಂಗ್ರೆಸ್ ಈಗ ಮಾಡುತ್ತಿದೆ ಎಂದ ಶ್ರೀರಾಮುಲು ಸಿದ್ದರಾಮಯ್ಯನವರಿಗೆ ಎಂತಹ ದೊಡ್ಡ ಹುದ್ದೆ ಕೊಟ್ಟಿದ್ದಾರೆ ನೋಡಿ ಎಂದರು. ಅಲ್ಲದೇ ಅವರನ್ನು ಇಲ್ಲೇ ಉಳಿಸುವುದಿಲ್ಲ, ರಾಜ್ಯದಿಂದ ದೆಹಲಿಗೆ ಹೊತ್ತುಕೊಂಡು ಬರುತ್ತಾರೆ, ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಕಾಂಪಿಟೇಟರ್ ಅನ್ನಾಗಿ ಮಾಡುತ್ತಾರೆ ಎಂದು ರಾಮುಲು ಹೇಳಿದ್ದಾರೆ.
ರಾಜಣ್ಣ ಅವರ ಹೇಳಿಕೆ ನೋಡಿ, ಶಿವಕುಮಾರ್ ಅವರ ಹೇಳಿಕೆ ನೋಡಿ, ರಾಮನಗರ ಶಾಸಕರ ಹೇಳಿಕೆ ನೋಡಿ, ಇದೇ ಸಮಯಕ್ಕೆ ಒಬಿಸಿ ಅಧ್ಯಕ್ಷ ಮಾಡಿದ್ದು ನೋಡಿ ಎಂದು ಶ್ರೀರಾಮುಲು ತಮ್ಮ ಊಹೆಯನ್ನು ಸಮರ್ಥಿಸಿಕೊಂಡರು.
ಸಿದ್ದರಾಮಯ್ಯನವರನ್ನು ಕೇಂದ್ರಕ್ಕೆ ಸುಮ್ಮನೆ ಕರೆದುಕೊಂಡು ಬರಲು ಆಗುವುದಿಲ್ಲ, ಹಾಗಾಗಿಯೇ ಈ ಹುದ್ದೆಯನ್ನು ನೀಡಲಾಗಿದೆ ಎಂದು ರಾಮುಲು ಹೇಳಿದರು.
ಬುಧವಾರ ಮತ್ತೆ ದೆಹಲಿಗೆ ಸಿಎಂ ಸಿದ್ದರಾಮಯ್ಯ; ಕಾರಣ ಬಹಿರಂಗ
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


