Tuesday, September 1, 2026
spot_img
More
    spot_img
    HomeLatest newsಡಾರ್ಕ್ ಚಾಕೊಲೇಟ್‌: ಸಿಹಿಯಷ್ಟೆ ಅಲ್ಲ ಆರೋಗ್ಯಕ್ಕೂ ಅಮೂಲ್ಯ ಉಡುಗೊರೆ

    ಡಾರ್ಕ್ ಚಾಕೊಲೇಟ್‌: ಸಿಹಿಯಷ್ಟೆ ಅಲ್ಲ ಆರೋಗ್ಯಕ್ಕೂ ಅಮೂಲ್ಯ ಉಡುಗೊರೆ

    ಅಪ್ಪನ ಹತ್ತಿರ ಕಾಡಿ, ಒಂದೆರಡು ರೂಪಾಯಿಗಳನ್ನು ತೆಗೆದುಕೊಂಡು, ಶಾಲೆಯ ಅಕ್ಕಪಕ್ಕದ ಗೂಡಂಗಡಿಗೆ ಓಡುತ್ತಿದ್ದೇವು. ಕೈಮುಗಿದು ಹಿಡಿಯುವಷ್ಟು ಚಾಕೊಲೇಟ್‌ಗಳನ್ನು ಚಡ್ಡಿ ಕಿಸೆಯಲ್ಲಿ ತುಂಬಿಸಿಕೊಂಡು ಒಂದೊಂದಾಗಿ ಆನಂದದಿಂದ ತಿನ್ನುತ್ತಿದ್ದ ದಿನಗಳು ಈಗಲೂ ಕಣ್ಣೆದುರು ಬರುತ್ತವೆ. ಚಾಕೊಲೇಟ್‌ವಿನ ರುಚಿಗೆ ಮಾರು ಆಗದವರು ಯಾರಿದ್ದಾರೆ ಹೇಳಿ? ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಇದನ್ನು ಇಷ್ಟಪಡುವರು.ಆದರೆ ಕೆಲವರು ಚಾಕೊಲೇಟ್ ತಿಂದರೆ ಹಲ್ಲು ನೋವು ಆಗುತ್ತದೆ ಎಂದು ದೂರವಾಗುತ್ತಾರೆ. ಹೆಚ್ಚಿನ ಸಕ್ಕರೆ ಇರುವ ಚಾಕೊಲೇಟ್‌ ಆರೋಗ್ಯಕ್ಕೆ ಒಳ್ಳೆಯದಾಗಿಲ್ಲ ಅನ್ನೋದು ಸತ್ಯ. ಆದರೆ ಡಾರ್ಕ್ ಚಾಕೊಲೇಟ್ ಮಾತ್ರ ವಿಭಿನ್ನ.ಡಾರ್ಕ್ ಚಾಕೊಲೇಟ್‌ನಲ್ಲಿ ಹೆಚ್ಚಿನ ಪ್ರಮಾಣದ ಕೋಕೋ ಮತ್ತು ಫ್ಲೇವನಾಯ್ಡ್ ಎಂಬ ಶಕ್ತಿಶಾಲಿ ಆಂಟಿಆಕ್ಸಿಡೆಂಟ್‌ಗಳಿವೆ. ಇವು ನಮ್ಮ ದೇಹದ ಜೀವಕೋಶಗಳನ್ನು ಹಾನಿಕಾರಕ ಫ್ರೀ ರಾಡಿಕಲ್ಸ್‌ಗಳಿಂದ ರಕ್ಷಿಸುತ್ತವೆ.

    Advertisement

    ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುವ ಗುಣವನ್ನೂ ಹೊಂದಿವೆ.ಅಳತೆ ಮೀರದ ಪ್ರಮಾಣದಲ್ಲಿ ಡಾರ್ಕ್ ಚಾಕೊಲೇಟ್ ಸೇವಿಸಿದರೆ ಅದು ಆಂಟಿಆಕ್ಸಿಡೆಂಟ್‌ಗಳು, ಖನಿಜಗಳು ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಇದರಿಂದ ಹೃದಯ ಆರೋಗ್ಯ ಸುಧಾರಣೆಯಾಗಬಹುದು ಮತ್ತು ಕೆಲವೊಂದು ಅಧ್ಯಯನಗಳ ಪ್ರಕಾರ, ಹೃದಯ ರೋಗಗಳ ಅಪಾಯವೂ ಕಡಿಮೆಯಾಗಬಹುದು.ಹೆಚ್ಚಿದ ಸಕ್ಕರೆ ಮತ್ತು ಕ್ಯಾಲೊರಿಯನ್ನು ತಪ್ಪಿಸಿ, ಒಳ್ಳೆಯ ಕೋಕೋ ಅಂಶ ಇರುವ ಡಾರ್ಕ್ ಚಾಕೊಲೇಟ್ ಆಯ್ದುಕೊಳ್ಳಿ ಅದು ರುಚಿಗೂ ಚೆನ್ನಾಗಿರುತ್ತದೆ, ಆರೋಗ್ಯಕ್ಕೂ ಹಿತವಾಗಿರುತ್ತದೆ!ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ದೊರೆಯವ ಆರೋಗ್ಯದ ಪ್ರಯೋಜನಗಳೇನು?ಎಂಬುದರ ಬಗ್ಗೆ ತಿಳಿಯೋಣ.

    ಡಾರ್ಕ್ ಚಾಕೊಲೇಟ್ ಸೇವಿಸುವುದರಿಂದ ದೊರೆಯವ ಆರೋಗ್ಯದ ಪ್ರಯೋಜನಗಳೇನು?

    ಉತ್ಕರ್ಷಣ ನಿರೋಧಕ;

    ಅನೇಕರಿಗೆ ಪ್ರಿಯವಾದ ಡಾರ್ಕ್ ಚಾಕೊಲೇಟ್‌ ಅನ್ನು ಕೇವಲ ರುಚಿಗಾಗಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಪ್ರಶಂಸಿಸಬಹುದಾಗಿದೆ. ಇದರಲ್ಲಿ ಎಪಿಕಾಟೆಚಿನ್ ಮತ್ತು ಕ್ಯಾಟೆಚಿನ್ ಎಂಬ ಶಕ್ತಿಶಾಲಿ ಉತ್ಕರ್ಷಣ ನಿರೋಧಕಗಳು (antioxidants) ಸಮೃದ್ಧವಾಗಿವೆ.ಈ ಉತ್ಕರ್ಷಣ ನಿರೋಧಕಗಳು ದೇಹದಲ್ಲಿನ ಹಾನಿಕಾರಕ ಸ್ವತಂತ್ರ ರಾಡಿಕಲ್‌ಗಳನ್ನು ತಟಸ್ಥಗೊಳಿಸುವ ಮೂಲಕ ಜೀವಕೋಶಗಳನ್ನು ಹಾನಿಯಿಂದ ರಕ್ಷಿಸುತ್ತವೆ. ಈ ಮೂಲಕ ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುತ್ತವೆ. ಇದು ದೀರ್ಘಕಾಲಿಕ ಕಾಯಿಲೆಗಳಾದ ಹೃದಯ ಕಾಯಿಲೆ, ಕ್ಯಾನ್ಸರ್ ಹಾಗೂ ಇತರೆ ಜೀವಘಾತಕ ಸಮಸ್ಯೆಗಳ ಅಪಾಯವನ್ನು ಗಣನೀಯವಾಗಿ ಕಡಿಮೆ ಮಾಡುವ ಸಾಧ್ಯತೆಯಿದೆ ಎಂಬುದು ವೈದ್ಯಕೀಯ ಅಧ್ಯಯನಗಳಿಂದ ತಿಳಿದುಬಂದಿದೆ.

    ಹೃದಯದ ಆರೋಗ್ಯಕ್ಕೆ

    ಹಲವಾರು ವೈದ್ಯಕೀಯ ಅಧ್ಯಯನಗಳ ಪ್ರಕಾರ, ಡಾರ್ಕ್ ಚಾಕೊಲೇಟ್‌ನಲ್ಲಿ ಇರುವ ಫ್ಲೇವನಾಯ್ಡ್‌ಗಳು ಹೃದಯದ ಆರೋಗ್ಯವನ್ನು ಬೆಂಬಲಿಸುವ ಪ್ರಮುಖ ಸಂಯುಕ್ತಗಳಾಗಿವೆ. ಇವು ರಕ್ತದೊತ್ತಡವನ್ನು ಕಡಿಮೆ ಮಾಡುವಲ್ಲಿಯೂ, ರಕ್ತದ ಹರಿವನ್ನು ಸುಧಾರಿಸುವಲ್ಲಿಯೂ ಮಹತ್ವಪೂರ್ಣ ಪಾತ್ರವಹಿಸುತ್ತವೆ.ಡಾರ್ಕ್ ಚಾಕೊಲೇಟ್‌ ಸೇವನೆಯು “ಕೆಟ್ಟ” ಕೊಲೆಸ್ಟ್ರಾಲ್ (LDL) ಮಟ್ಟವನ್ನು ಕಡಿಮೆ ಮಾಡುತ್ತವೆ ಮತ್ತು “ಉತ್ತಮ” ಕೊಲೆಸ್ಟ್ರಾಲ್ (HDL) ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದರಿಂದ ಪಾರ್ಶ್ವವಾಯು (ಸ್ಟ್ರೋಕ್), ಹೃದ್ರೋಗ (ಹಾರ್ಟ್ ಅಟ್ಯಾಕ್) ಸೇರಿದಂತೆ ಹಲವಾರು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆಯಾಗುತ್ತದೆ.ಇದಲ್ಲದೇ, ಮಿತ ಪ್ರಮಾಣದಲ್ಲಿ ನಿಯಮಿತವಾಗಿ ಡಾರ್ಕ್ ಚಾಕೊಲೇಟ್ ಸೇವಿಸಿದರೆ, ರಕ್ತಸಂಚಾರ ಉತ್ತಮವಾಗುತ್ತದೆ. ಇದರ ಪರಿಣಾಮವಾಗಿ ರಕ್ತದೊತ್ತಡ ಸಮತೋಲನದಲ್ಲಿರುತ್ತಿದ್ದು, ಹೃದಯದ ಆರೋಗ್ಯ ಸಹ ಧೃಡವಾಗಿರುತ್ತದೆ. ಹೀಗಾಗಿ, ಸಕ್ಕರೆ ಪ್ರಮಾಣ ಕಡಿಮೆ ಇರುವ ಉತ್ತಮ ಗುಣಮಟ್ಟದ ಡಾರ್ಕ್ ಚಾಕೊಲೇಟ್‌ ಅನ್ನು ಆಯ್ಕೆಮಾಡಿ, ರುಚಿಯ ಜೊತೆಗೆ ಆರೋಗ್ಯಕ್ಕೂ ಪ್ರಾಮುಖ್ಯತೆ ನೀಡಿ

    ಚರ್ಮದ ಹೊಳಪಿಗೆ

    ಡಾರ್ಕ್ ಚಾಕೊಲೇಟ್ ಸೇವನೆಯು ಕೇವಲ ಆರೋಗ್ಯಕ್ಕೂ ಅಲ್ಲ, ಚರ್ಮದ ಸಹಾರಣ್ಯಕ್ಕೂ ಸಹ ಬೆಂಬಲ ನೀಡುತ್ತದೆ ಎಂದು ಅಧ್ಯಯನಗಳು ಸೂಚಿಸುತ್ತಿವೆ. ಇದರಲ್ಲಿ ಇರುವ ಫ್ಲೇವನಾಯ್ಡ್‌ಗಳು ಚರ್ಮಕ್ಕೆ ರಕ್ತ ಪರಿಚಲನೆಯನ್ನು ಸುಧಾರಿಸುತ್ತವೆ, ಪರಿಣಾಮವಾಗಿ ಚರ್ಮ ಹೆಚ್ಚು ಆರೋಗ್ಯಕರವಾಗಿ ಮತ್ತು ಪ್ರಕಾಶಮಾನವಾಗಿ ಕಾಣಿಸುತ್ತದೆ.ಇದೇ ಅಲ್ಲ, ಡಾರ್ಕ್ ಚಾಕೊಲೇಟ್‌ನಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಚರ್ಮವನ್ನು ಹಾನಿಕಾರಕ ಅಲ್ಟ್ರಾ ವೈಲೆಟ್ (UV) ಕಿರಣಗಳಿಂದ ರಕ್ಷಿಸುತ್ತವೆ. ಇದು ಚರ್ಮದ ನೈಸರ್ಗಿಕ ರಕ್ಷಣಾತ್ಮಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ, ಕಡಿಮೆ ವಯಸ್ಸಿನಲ್ಲಿ ವಯಸ್ಸಾದಂತ ಕಂಡುಬರುವ ಲಕ್ಷಣಗಳನ್ನು (early signs of ageing) ತಡೆಯಲು ಸಹಕಾರಿಯಾಗಿದೆ.ಅಧಿಕವಾಗಿ, ನಿಯಮಿತವಾಗಿ ಅಳತೆ ಮೀರದ ಪ್ರಮಾಣದಲ್ಲಿ ಡಾರ್ಕ್ ಚಾಕೊಲೇಟ್ ಸೇವಿಸುವುದು, ಚರ್ಮದ ತಾಜಾತನವನ್ನು ಕಾಪಾಡಿ, ನೈಸರ್ಗಿಕ ಕಾಂತಿಯನ್ನೂ ಹೆಚ್ಚಿಸುತ್ತದೆ.

    ತೂಕ ನಿಯಂತ್ರಣ

    ಡಾರ್ಕ್ ಚಾಕೊಲೇಟ್ ಅನ್ನು ಮಧ್ಯಮ ಪ್ರಮಾಣದಲ್ಲಿ ಸೇವಿಸುವುದರಿಂದ ತೂಕ ನಿಯಂತ್ರಣಕ್ಕೆ ಸಹಾಯವಾಗಬಹುದು ಎಂದು ಹಲವು ಅಧ್ಯಯನಗಳು ಸೂಚಿಸುತ್ತವೆ. ಡಾರ್ಕ್ ಚಾಕೊಲೇಟ್‌ನಲ್ಲಿರುವ ಫ್ಲೇವನಾಯ್ಡ್‌ಗಳು ಮತ್ತು ಫೈಬರ್ ದೀರ್ಘಕಾಲ ಹಸಿವನ್ನು ಕಡಿಮೆ ಮಾಡುವ ಮೂಲಕ ಒಟ್ಟು ಆಹಾರ ಸೇವನೆಗೆ ತಡೆಯೊಡ್ಡುತ್ತವೆ. ಇದರಿಂದ ಹೆಚ್ಚುವರಿ ಕ್ಯಾಲೊರಿ ಸೇವನೆ ತಗ್ಗುತ್ತದೆ.ಎಣ್ಣೆಯುಕ್ತ ಆಹಾರಗಳು ಮತ್ತು ಜಂಕ್ ಫುಡ್‌ಗಳನ್ನು ತಪ್ಪಿಸುವುದು ತೂಕ ನಿಯಂತ್ರಣಕ್ಕೆ ಇನ್ನಷ್ಟು ಸಹಾಯಕವಾಗುತ್ತದೆ.ಡಾರ್ಕ್ ಚಾಕೊಲೇಟ್ ಕಾರ್ಟಿಸೋಲ್ ಎಂಬ ಒತ್ತಡದ ಹಾರ್ಮೋನ್ ಮಟ್ಟವನ್ನು ಕಡಿಮೆ ಮಾಡಬಹುದು ಎಂಬ ಸೂಚನೆಗಳಿವೆ, ಇದರಿಂದ ಒತ್ತಡದಿಂದ ಉಂಟಾಗುವ ಹೆಚ್ಚುವರಿ ಆಹಾರ ಸೇವನೆ (emotional eating) ತಡೆಯಬಹುದು.ಡಾರ್ಕ್ ಚಾಕೊಲೇಟ್ ಮಾನಸಿಕ ಆರೋಗ್ಯವನ್ನು ಸುಧಾರಿಸುವಲ್ಲಿ ಸಹ ಸಹಾಯಕವಾಗಬಹುದು, ಏಕೆಂದರೆ ಅದು ಮೆದುಳಿನಲ್ಲಿ ಸೆರೋಟೊನಿನ್ ಮತ್ತು ಎಂಡಾರ್ಫಿನ್ ಹಾರ್ಮೋನ್ ಬಿಡುಗಡೆಗೆ ಉತ್ತೇಜನ ನೀಡುತ್ತದೆ.

    ಮಧುಮೇಹಕ್ಕೆ

    ಡಾರ್ಕ್ ಚಾಕೊಲೇಟ್‌ನಲ್ಲಿರುವ ಎಪಿಕಾಟೆಚಿನ್ (Epicatechin) ಎಂಬ ಫ್ಲೇವನಾಯ್ಡ್ ಸಂಯುಕ್ತವು ದೇಹದಲ್ಲಿ ಇನ್ಸುಲಿನ್ ಉತ್ಪಾದನೆ ಮತ್ತು ಅದರ ಪರಿಣಾಮಕಾರಿತ್ವವನ್ನು ಹೆಚ್ಚಿಸುವಲ್ಲಿ ಸಹಾಯಕವಾಗುತ್ತದೆ. ಇದರಿಂದ ರಕ್ತದಲ್ಲಿನ ಶರ್ಕರ ಮಟ್ಟವನ್ನು ನಿಯಂತ್ರಿಸುವಲ್ಲಿ ನೆರವಾಗಬಹುದು.ವೈಜ್ಞಾನಿಕ ಅಧ್ಯಯನಗಳ ಪ್ರಕಾರ ವಾರಕ್ಕೆ ಕನಿಷ್ಠ ಐದು ಔನ್ಸ್ ಡಾರ್ಕ್ ಚಾಕೊಲೇಟ್ ಸೇವಿಸುವವರು, ಚಾಕೊಲೇಟ್ ಸೇವಿಸದವರಿಗಿಂತ ಮಧುಮೇಹ (ಟೈಪ್ 2 ಡಯಾಬಿಟಿಸ್) ಬರುವ ಸಾಧ್ಯತೆ ಶೇಕಡಾ 21ರಷ್ಟು ಕಡಿಮೆ ಎಂದು ತಿಳಿದುಬಂದಿದೆ.ಡಾರ್ಕ್ ಚಾಕೊಲೇಟ್‌ನಲ್ಲಿರುವ ಎಪಿಕಾಟೆಚಿನ್ ದೇಹದ ಕೋಶಗಳು ಇನ್ಸುಲಿನ್‌ಗೆ ಉತ್ತಮ ಪ್ರತಿಕ್ರಿಯೆ ನೀಡುವಂತೆ ಮಾಡುತ್ತದೆ, ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.ಡಾರ್ಕ್ ಚಾಕೊಲೇಟ್ ಹೆಚ್ಚು ಸೇವಿಸುವುದು ಶಿಫಾರಸು ಮಾಡಲಾಗದು. ದಿನಕ್ಕೆ 20-30 ಗ್ರಾಂ ಅಥವಾ ವಾರಕ್ಕೆ 5 ಔನ್ಸ್ (140 ಗ್ರಾಂ) ಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ.

    ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ

    ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ (LDL) ಮಟ್ಟ ಹೆಚ್ಚಾದರೆ ಹೃದಯಕ್ಕೆ ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ. LDL ಮಟ್ಟವನ್ನು ನಿಯಂತ್ರಣದಲ್ಲಿರಿಸಲು ಆರೋಗ್ಯಕರ ಆಹಾರ ಪದ್ಧತಿ ಮತ್ತು ಪ್ರತಿ ದಿನ ಮಿತ ಪ್ರಮಾಣದಲ್ಲಿ ಡಾರ್ಕ್ ಚಾಕೊಲೇಟ್ ಸೇವಿಸುವುದು ಸಹಕಾರಿ ಎಂದು ಆರೋಗ್ಯ ತಜ್ಞರು ಸೂಚಿಸುತ್ತಾರೆ.ಡಾರ್ಕ್ ಚಾಕೊಲೇಟ್‌ನಲ್ಲಿ ಕಂಡುಬರುವ ಪ್ಲಾಂಟ್ ಸ್ಟೆರಾಲ್‌ಗಳು ಮತ್ತು ಕೋಕೋ ಫ್ಲ್ಯಾವೊನೋಲ್‌ಗಳು LDL ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗಿವೆ. ಈ ಸಂಯುಕ್ತಗಳು ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅಂಶವನ್ನು ತಗ್ಗಿಸುವ ಮೂಲಕ ಹೃದಯದ ಆರೋಗ್ಯವನ್ನು ರಕ್ಷಿಸುತ್ತವೆ. ಆದ್ದರಿಂದ, ದಿನವೂ ಸಣ್ಣ ಪ್ರಮಾಣದಲ್ಲಿ ಡಾರ್ಕ್ ಚಾಕೊಲೇಟ್ ಸೇವಿಸುವ ಅಭ್ಯಾಸ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಹೆಚ್ಚಿನ ಪ್ರಮಾಣದಲ್ಲಿ ಸೇವನೆ ತಪ್ಪಿಸಿ, balanced diet ಮತ್ತು ನಿಯಮಿತ ವ್ಯಾಯಾಮದ ಜೊತೆಗೆ ಡಾರ್ಕ್ ಚಾಕೊಲೇಟ್ ಅನ್ನು ಒಳಗೊಂಡಿರುವ ಆಹಾರ ಪದ್ಧತಿ ಅನುಸರಿಸುವುದು ಉತ್ತಮ.

    ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬ ಮಾತು ಡಾರ್ಕ್ ಚಾಕೊಲೇಟ್‌ನಿಗೂ ಅನ್ವಯಿಸುತ್ತದೆ. ಚಾಕೊಲೇಟ್ ಇಷ್ಟವಿದ್ದರೂ, ಅದನ್ನು ಮಿತವಾಗಿ ಮಾತ್ರ ಸೇವನೆ ಮಾಡುವುದು ಆರೋಗ್ಯಕ್ಕೆ ಉತ್ತಮ. ಆರೋಗ್ಯ ತಜ್ಞರ ಪ್ರಕಾರ, ದಿನಕ್ಕೆ 30 ರಿಂದ 60 ಗ್ರಾಂಕ್ಕಿಂತ ಹೆಚ್ಚು ಡಾರ್ಕ್ ಚಾಕೊಲೇಟ್ ಸೇವನೆ ಮಾಡಬಾರದು. ಇದಕ್ಕೆ ಕಾರಣ, ಚಾಕೊಲೇಟ್‌ನಲ್ಲಿ ಹೆಚ್ಚಿನ ಕ್ಯಾಲೊರಿ ಮತ್ತು ಕೊಬ್ಬು ಅಂಶಗಳು ಇರುವುದರಿಂದ, ಅತಿಯಾಗಿ ಸೇವಿಸಿದರೆ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಇದೆ.ಮಿತ ಪ್ರಮಾಣದಲ್ಲಿ ಸೇವಿಸಿದರೆ ಮಾತ್ರ ಡಾರ್ಕ್ ಚಾಕೊಲೇಟ್‌ನ ಆರೋಗ್ಯ ಲಾಭಗಳನ್ನು ಪಡೆಯಲು ಸಾಧ್ಯ.

    ನಿಮ್ಮ ಮಗು ತೆಳ್ಳಗಿದೆಯೆನಿಸುತ್ತಿದೆಯಾ? ವಯಸ್ಸಿಗೆ ತಕ್ಕ ತೂಕ ಎಷ್ಟು ಇರಬೇಕು ಗೊತ್ತಾ?

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಎಐ ಅಡ್ವೋಕೇಟ್‌ ಅಸಿಸ್ಟೆಂಟ್‌ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading