Friday, September 18, 2026
spot_img
More
    spot_img
    HomeLatest newsಬಿಹಾರದಲ್ಲಿ ಎನ್‌ಡಿಎ ಕೈತಪ್ಪಲಿದೆ ಅಧಿಕಾರ, ಡಿಸಿಎಂ ಸೇರಿ 12 ಸಚಿವರಿಗೆ ಸೋಲು!

    ಬಿಹಾರದಲ್ಲಿ ಎನ್‌ಡಿಎ ಕೈತಪ್ಪಲಿದೆ ಅಧಿಕಾರ, ಡಿಸಿಎಂ ಸೇರಿ 12 ಸಚಿವರಿಗೆ ಸೋಲು!

    ಬಿಹಾರ ವಿಧಾನಸಭೆ ಚುನಾವಣೆ 2025ರ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದೆ. 243 ಕ್ಷೇತ್ರಗಳ ಪೈಕಿ 122 ಸೀಟುಗಳಲ್ಲಿ ಮತದಾನ ನಡೆದಿದ್ದು, ಶೇ 64.66ರಷ್ಟು ದಾಖಲೆಯ ಮತದಾನವಾಗಿದೆ. ಅತಿ ಹೆಚ್ಚಿನ ಮತದಾನ ಆಗಿರುವುದು ಸೋಲು ಗೆಲುವಿನ ಲೆಕ್ಕಾಚಾರವನ್ನು ಬುಡಮೇಲು ಮಾಡಿದೆ.

    Advertisement

    ನವೆಂಬರ್ 11ರಂದು ಉಳಿದ 122 ಸೀಟುಗಳಿಗೆ ಮತದಾನ ನಡೆಯಲಿದೆ. ನವೆಂಬರ್ 14ರಂದು ಮತ ಎಣಿಕೆ ನಡೆಯಲಿದೆ. ಬಿಹಾರದಲ್ಲಿ ಬಿಜೆಪಿ-ಜೆಡಿಯು ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್-ಆರ್‌ಜೆಡಿ ನೇತೃತ್ವದ ಮಹಾಘಟಬಂಧನ್ ಎದುರಾಳಿಗಳು. ಯಾರಿಗೆ ಬಿಹಾರದ ಅಧಿಕಾರ? ಎಂಬದು ಕುತೂಹಲಕ್ಕೆ ಕಾರಣವಾಗಿದೆ.

    12 ಸಚಿವರಿಗೆ ಸೋಲು: ಕಾಂಗ್ರೆಸ್ ನಾಯಕ ರಾಜೀವ್ ಶುಕ್ಲಾ ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶದ ಕುರಿತು ಮಾತನಾಡಿದ್ದಾರೆ. “ಅತಿ ಹೆಚ್ಚಿನ ಮತದಾನ ಪ್ರಮಾಣ ಚುನಾವಣಾ ಫಲಿತಾಂಶದ ಚಿತ್ರಣವನ್ನು ಬದಲಾವಣೆ ಮಾಡಲದೆ” ಎಂದು ಭವಿಷ್ಯ ನುಡಿದಿದ್ದಾರೆ.

    “ದಾಖಲೆ ಪ್ರಮಾಣದ ಮತದಾನ ಎನ್‌ಡಿಎ ಮೈತ್ರಿಕೂಟವನ್ನು ಅಧಿಕಾರದಿಂದ ಕೆಳಗಿಳಿಸುವ ಸ್ಪಷ್ಟಸೂಚನೆಯಾಗಿದೆ. 12ಕ್ಕೂ ಅಧಿಕ ಸಚಿವರು, ಎಲ್ಲಾ ಉಪಮುಖ್ಯಮಂತ್ರಿಗಳು ಚುನಾವಣೆಯಲ್ಲಿ ಸೋಲಲಿದ್ದಾರೆ” ಎಂದು ರಾಜೀವ್ ಶುಕ್ಲಾ ವಿವರಣೆ ನೀಡಿದ್ದಾರೆ.

    “ಮತದಾನ ಪ್ರಮಾಣ ಹೆಚ್ಚಾದಾಗ ಯಾವಾಗಲೂ ಜನರು ಬದಲಾವಣೆಗಾಗಿ ಮತದಾನ ಮಾಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕಿದೆ. ಬಿಹಾರದಲ್ಲಿಯೂ ಅದೇ ಆಗಿದೆ. ಎನ್‌ಡಿಎ ಅಧಿಕಾರ ಕಳೆದುಕೊಳ್ಳುವುದು ಖಚಿತ” ಎಂದು ಮಾಜಿ ಕೇಂದ್ರದ ಮಾಜಿ ಸಚಿವರೂ ಆಗಿರುವ ಶುಕ್ಲಾ ಹೇಳಿದರು.

    “ನಮಗೆ ಬಂದಿರುವ ಕೆಲವು ಬೂತ್ ಮಟ್ಟದ ವರದಿಗಳ ಪ್ರಕಾರ ಆಡಳಿತಾರೂಢ ಎನ್‌ಡಿಎಗೆ ಈ ಬಾರಿ ಭಾರೀ ಸೋಲು ಎದುರಾಗಬಹುದು. ಮೊದಲ ಹಂತದ ಮತದಾನ ನಡೆದ ಕ್ಷೇತ್ರಗಳಲ್ಲಿ 15 ಸಚಿವರು ಸ್ಪರ್ಧಿಸಿದದ್ದರು. ಈ ಪೈಕಿ 12 ಕ್ಷೇತ್ರಗಳಲ್ಲಿ ಸಚಿವರು ಸೋಲುವ ಮಾಹಿತಿ ಇದೆ. ಇಬ್ಬರೂ ಉಪಮುಖ್ಯಮಂತ್ರಿಗಳು ಸಹ ಸೋಲಿನ ಅಂಚಿನಲ್ಲಿದ್ದಾರೆ” ಎಂದರು.

    ಉಪಮುಖ್ಯಮಂತ್ರಿ ವಿಜಯ್ ಕುಮಾರ್ ಸಿನ್ಹಾ ಲಖಿಸರಾಯಿ ಕ್ಷೇತ್ರದಿಂದ 4ನೇ ಬಾರಿ ಕಣಕ್ಕಿಳಿದಿದ್ದಾರೆ. ಸಮ್ರಾಟ್ ಚೌಧರಿ ತಾರಾಪುರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದಾರೆ. ಆದರೆ ಇಬ್ಬರು ಡಿಸಿಎಂಗಳು ಸಹ ಸೋಲಲಿದ್ದಾರೆ ಎಂದು ರಾಜೀವ್ ಶುಕ್ಲಾ ಹೇಳಿದ್ದಾರೆ.

    “ಈ ಬಾರಿಯ ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆ ಇನ್ನಷ್ಟು ಉತ್ತಮಗೊಳ್ಳಲಿದೆ. ಹಿಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗಿತ್ತು ಕೇವಲ 19 ಸ್ಥಾನಗಳನ್ನು ಗೆದ್ದಿತ್ತು. ಈ ಬಾರಿ 61 ಸೀಟುಗಳಲ್ಲಿ ಪಕ್ಷ ಸ್ಪರ್ಧಿಸಿದ್ದು, ಹೆಚ್ಚಿನ ಸೀಟು ಗೆಲ್ಲಲಿದೆ” ಎಂದು ತಿಳಿಸಿದ್ದಾರೆ.

    ಈ ಬಾರಿ ಕಾಂಗ್ರೆಸ್ ಮಹಾಘಟಬಂಧನ್ ಮೈತ್ರಿಕೂಟದಲ್ಲಿ ಆರ್‌ಜೆಡಿ, ಮೂರು ಎಡಪಂಥೀಯ ಪಕ್ಷಗಳು ಹಾಗೂ ಮಾಜಿ ಸಚಿವ ಮುಕೇಶ್ ಸಾಹ್ನಿ ಅವರ ವಿಕಸಶೀಲ ಇನ್ಸಾನ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸಿದೆ. ಆರ್‌ಜೆಡಿಯ ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ ಮತ್ತು ಮುಕೇಶ್ ಸಾಹ್ನಿ ಡಿಸಿಎಂ ಅಭ್ಯರ್ಥಿಯಾಗಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading