ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ನಿಂದ ಜಾಮೀನು ರದ್ದಾದ ನಂತರ ಮತ್ತೆ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಅವರ ದರ್ಪ ಇನ್ನೂ ಕಡಿಮೆಯಾದಂತೆ ಕಾಣುತ್ತಿಲ್ಲ.
ಹಿಂದಿನಂತೆ ಈಗ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿಲ್ಲ. ಐಪಿಎಸ್ ಅಧಿಕಾರಿ ಅಂಶು ಕುಮಾರ್ ಮುಖ್ಯ ಸೂಪರಿಂಟೆಂಡೆಂಟ್ ಆಗಿ ನೇಮಕಗೊಂಡ ನಂತರ ನಿಯಮಗಳು ಭಾರಿ ಕಠಿಣವಾಗಿವೆ. ದರ್ಶನ್ ಅವರೂ ಸಹ ಸಾಲಿನಲ್ಲಿ ನಿಂತು ಊಟ ತೆಗೆದುಕೊಂಡು ಬರಬೇಕು.ಶೌಚಾಲಯವನ್ನು ತಾವೇ ಸ್ವಚ್ಛ ಮಾಡಬೇಕು.ಈ ಕಠಿಣ ನಿಯಮಗಳಿಂದ ನಟ ದರ್ಶನ್ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ.
ಸಹಕೈದಿಗಳಿಗೆ ಕಿರುಕುಳದ ಆರೋಪ
ಜೈಲಿನಲ್ಲಿ ಕಠಿಣ ನಿಯಮಗಳಿಗೆ ಬೇಸತ್ತ ದರ್ಶನ್, ಇದೀಗ ತಮ್ಮ ಸೆಲ್‌ನಲ್ಲೇ ಇರುವ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇತರ ಆರೋಪಿಗಳಿಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ,ಕೆಲ ದಿನಗಳ ಹಿಂದೆ ದರ್ಶನ್ ಮತ್ತು ಸಹಕೈದಿ ಜಗ್ಗ ನಡುವೆ ದೊಡ್ಡ ಜಗಳವೇ ನಡೆದಿದೆ. ಜಗಳ ಜೋರಾಗುತ್ತಿದ್ದಂತೆ ಜೈಲಾಧಿಕಾರಿಗಳು ಬಂದು ಅದನ್ನು ಬಿಡಿಸಿದ್ದಾರೆ.
ನಟ ದರ್ಶನ್ ಇರುವ ಬೆಂಗಳೂರಿನ ಪರಪ್ಪನ ಅಗ್ರಹಾರದ ಸೆಲ್‌ನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದ ಇತರ ಐವರು ಆರೋಪಿಗಳೂ ಇದ್ದಾರೆ. ಅವರೆಂದರೆ: ಅನುಕುಮಾರ್, ಜಗ್ಗ, ನಾಗರಾಜು, ಪ್ರದೋಶ್, ಮತ್ತು ಲಕ್ಷ್ಮಣ್.ವರದಿಗಳ ಪ್ರಕಾರ, ಈ ಸಹಕೈದಿಗಳ ಪೈಕಿ ನಾಗರಾಜು ಅವರನ್ನು ಹೊರತುಪಡಿಸಿ ಉಳಿದ ಆರೋಪಿಗಳಿಗೆ ದರ್ಶನ್ ಅವರು ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಈಗಾಗಲೇ ಜಾಮೀನು ಸಿಗದೆ ಕಷ್ಟದಲ್ಲಿರುವ ಉಳಿದ ಆರೋಪಿಗಳು, ದರ್ಶನ್‌ನ ದೌರ್ಜನ್ಯದಿಂದ ತತ್ತರಿಸಿ ಹೋಗಿದ್ದಾರೆ.
ಮಲಗಿದ್ದ ಸಹಕೈದಿಗಳನ್ನು ಕಾಲಿನಲ್ಲಿ ಒದ್ದು ಎಬ್ಬಿಸುವುದು ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸುವುದು ಮುಂದುವರಿದಿದೆ ಎನ್ನಲಾಗಿದೆ.ದರ್ಶನ್ ಕಿರುಕುಳ ತಾಳಲಾರದೆ ಅನುಕುಮಾರ್ ಮತ್ತು ಜಗದೀಶ್ ಎಂಬ ಸಹಕೈದಿಗಳು, ತಮ್ಮನ್ನು ಚಿತ್ರದುರ್ಗ ಜೈಲಿಗೆ ಶಿಫ್ಟ್ ಮಾಡುವಂತೆ ಜೈಲಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ದರ್ಶನ್ ಹಿಂಸೆ ತಡೆಯಲಾಗುತ್ತಿಲ್ಲ ಎಂದು ಕಣ್ಣೀರಿಡುತ್ತಿದ್ದಾರೆ.ದರ್ಶನ್ ಕಿರುಕುಳದ ಹಿನ್ನೆಲೆಯಲ್ಲಿ, ಅವರ ಸೆಲ್ ಮೇಲೆ ಜೈಲಾಧಿಕಾರಿಗಳು ವಿಶೇಷ ನಿಗಾ ಇಟ್ಟಿದ್ದಾರೆ.
ಚಿನ್ನದ ಬೆಲೆ 2026ರಲ್ಲಿ ಏರುತ್ತಾ? ಇಳಿಯುತ್ತಾ? WGC ವರದಿ ನೋಡಿ ಹೂಡಿಕೆದಾರರು ಶಾಕ್!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


