ಪೋಸ್ಟ್ ಆಫೀಸ್(Post office) ತನ್ನ ಹೂಡಿಕೆದಾರರಿಗೆ ಸುರಕ್ಷಿತ ಮತ್ತು ಲಾಭದಾಯಕ ಯೋಜನೆಗಳನ್ನು ಒದಗಿಸುತ್ತಿದ್ದು,ಈ ಯೋಜನೆಯಲ್ಲಿ ಹೂಡಿಕೆ(Invest) ಮಾಡಿ, ನೀವು ಪ್ರತಿ ತಿಂಗಳು ₹20,000 ಬಡ್ಡಿ ಆದಾಯ ಪಡೆಯಬಹುದು.
ಪ್ರತಿಯೊಬ್ಬರೂ ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಉಳಿಸಲು ಬಯಸುತ್ತಾರೆ.ನಿವೃತ್ತಿಯ ನಂತರ ಮಾಸಿಕ(Monthly) ಗಳಿಕೆ ನಿಲ್ಲುತ್ತದೆ. ಆದ್ದರಿಂದ ಹಿರಿಯ ನಾಗರಿಕರು ತಮ್ಮ ಜೀವಮಾನದ ಉಳಿತಾಯವನ್ನು ಹಣ ಸುರಕ್ಷಿತವಾಗಿರುವ ಸ್ಥಳದಲ್ಲಿ ಹೂಡಿಕೆ ಮಾಡುತ್ತಾರೆ. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತವನ್ನು ಬಡ್ಡಿಯಾಗಿ ಪಡೆಯುತ್ತಾರೆ.
ಈ ಸಂದರ್ಭದಲ್ಲಿ ಫಿಕ್ಸೆಡ್ ಡೆಪಾಸಿಟ್(FD) ಮೊದಲ ಆಯ್ಕೆಯಾಗಿದೆ.ತೆಗೆದುಕೊಳ್ಳಬಹುದು.ನಮ್ಮ ದುಡ್ಡಿಗೇ ತಕ್ಕಂತೆ ವಂದು ಒಳ್ಳೆ ರಿಟರ್ನ್ ಅಮೌಂಟ್ ಪಡೆಯಬೇಕು ಅಂದ್ರೆ ನಿಮಗೆ ಹಣ ಹೂಡಿಕೆ ಮಾಡಲು ಪೋಸ್ಟ್ ಆಫೀಸ್ಗಿಂತ ಉತ್ತಮ ಜಾಗ ಬೇರೆ ಇಲ್ಲ.ತಮ್ಮ ಜೀವನದುದ್ದಕ್ಕೂ ದುಡಿದು ವ್ಯದ್ಯಾಪ್ಯದಲ್ಲಿ ಹಣವನ್ನು ಕೂಡಿಡುವುದೇ ದೊಡ್ಡ ಸಾಹಸ.
ಹೀಗಾಗಿ ಇನ್ನೊಬ್ಬರ ಮೇಲೆ ಆಧಾರವಾಗುವ ಅನಿವಾರ್ಯ ಎದುರಾಗುತ್ತದೆ. ಇದು ಸಾಕಷ್ಟು ಸಮಸ್ಯೆಗಳನ್ನೂ ತಂದೊಡ್ಡುತ್ತದೆ. ಅಂತಹ ಸಮಸ್ಯೆ ಎದುರಾಗಬಾರದು ಅಂದರೆ ಈ ಯೋಜನೆಯಲ್ಲಿ ಹೂಡಿಕೆ(Invest) ಮಾಡಿ ವೃದ್ಯಾಪ್ಯದಲ್ಲಿ ಕೂತಲ್ಲೇ ತಿಂಗಳಿಗೆ 20 ಸಾವಿರ ಪಡೆಯಿರಿ.ಜನರು ಸುರಕ್ಷಿತ ಹೂಡಿಕೆ ದೃಷ್ಟಿಯಿಂದ ಸರ್ಕಾರಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಚ್ಚಿಸುತ್ತಾರೆ. ನೀವೂ ಕೂಡ ನಿಯಮಿತ ಮಾಸಿಕ ಆದಾಯಕ್ಕಾಗಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ ನಿಮಗೆ ಲಾಭದಾಯಕವೆಂದು ಸಾಬೀತುಪಡಿಸಬಹುದು.
ಪೋಸ್ಟ್ ಆಫೀಸ್ ಸಣ್ಣಮಕ್ಕಳಿಂದ ಹಿರಿಯ ನಾಗರೀಕರವರೆಗೂ ಸಾಕಷ್ಟು ಹೂಡಿಕೆ ಯೋಜನೆಗಳನ್ನ ನೀಡುತ್ತಿದೆ.ಭಾರತೀಯ ನಾಗರೀಕರು ಯೋಜನೆಯ ಬಗ್ಗೆ ಮಾಹಿತಿ ತಿಳಿದುಕೊಂಡು ಹೂಡಿಕೆ ಮಾಡಬೇಕು. ಅಲ್ಲದೆ ಈ ಯೋಜನೆ ವಿಶೇಷವಾಗಿ ಹಿರಿಯ ನಾಗರಿಕರಿಗಾಗಿ ಮಾಡಲಾಗಿದೆ.ಐದು ವರ್ಷಗಳಿಗೆ ಇರುವಂತಹ ಮೆಚುರಿಟಿ ಅವಧಿಯನ್ನು ಐದು ವರ್ಷಗಳ ನಂತರ ಮತ್ತೆ ಹೆಚ್ಚುವರಿ 3 ವರ್ಷಗಳಿಗೆ ವಿಸ್ತರಿಸಬಹುದಾಗಿದೆ.15 ಲಕ್ಷ ರೂಪಾಯಿ ಇದ್ದಂತಹ ಮ್ಯಾಕ್ಸಿಮಮ್ ಇನ್ವೆಸ್ಟ್ಮೆಂಟ್ ಲಿಮಿಟ್ ಅನ್ನು 30 ಲಕ್ಷ ರೂಪಾಯಿಗಳಿಗೆ ಏರಿಸಲಾಗಿದೆ.30 ಲಕ್ಷ ರೂಪಾಯಿ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ವರ್ಷಕ್ಕೆ ನಿಮಗೆ ಬಡ್ಡಿ ರೂಪದಲ್ಲಿಯೇ 2.46 ಲಕ್ಷ ರೂಪಾಯಿಗಳ ಬಡ್ಡಿ ಸಿಗುತ್ತೆ ಅಂದ್ರೆ ಅದನ್ನ ತಿಂಗಳಿಗೆ ಕನ್ವರ್ಟ್ ಮಾಡಿದರೆ 20,500 ರೂಪಾಯಿ ಆಗುತ್ತದೆ. ಇದೊಂದು ಉತ್ತಮ ರಿಟೈರ್ಮೆಂಟ್ ಪ್ಲಾನ್ ಆಗಿದೆ.55 ರಿಂದ 60 ವರ್ಷದ ನಡುವಿನ ಸ್ವಯಂ ನಿವೃತ್ತಿಯನ್ನು(VRS) ಹೊಂದಿರುವಂತಹ ಹಿರಿಯ ನಾಗರಿಕರು ಕೂಡ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದಾಗಿದ್ದು ಇದಕ್ಕಾಗಿ ನೀವು ನಿಮ್ಮ ಹತ್ತಿರ ಇರುವಂತಹ ಅಂಚೆ ಕಚೇರಿಗೆ ಭೇಟಿ ನೀಡಬೇಕಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


