Saturday, August 8, 2026
spot_img
More
    spot_img
    HomeTop StoryFact Check: ತಿರುಪತಿ ಕಾಲ್ತುಳಿತದಲ್ಲಿ ಸತ್ತ ಬಾಲಕನ ಶವ ಸಾಗಿಸಲು 20 ಸಾವಿರ ಕೇಳಿದ್ರಾ? ಇಲ್ಲಿದೆ...

    Fact Check: ತಿರುಪತಿ ಕಾಲ್ತುಳಿತದಲ್ಲಿ ಸತ್ತ ಬಾಲಕನ ಶವ ಸಾಗಿಸಲು 20 ಸಾವಿರ ಕೇಳಿದ್ರಾ? ಇಲ್ಲಿದೆ ಅಸಲಿಯತ್ತು

    ನಿನ್ನೆ ಪ್ರಸಿದ್ಧ ಯಾತ್ರಾಸ್ಥಳ ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಏಳು ಮಂದಿ ಸಾವನ್ನಪ್ಪಿದ್ದು, ಹಲವು ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಟಿಟಿಡಿಗೆ ಭಾರೀ ಹಿನ್ನಡೆಯನ್ನುಂಟುಮಾಡಿದ್ದು, ಸದ್ಯ ಟಿಟಿಡಿ ಹಾಗೂ ಸರ್ಕಾರದ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

    Advertisement

    ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊವೊಂದು ಹರಿದಾಡುತ್ತಿದ್ದು, “ತಿರುಪತಿ ಸರ್ಕಾರಿ ಆಸ್ಪತ್ರೆಯಲ್ಲಿ ಸತ್ತ 12 ವರ್ಷದ ಬಾಲಕನ ಶವ ಸಾಗಿಸಲು 20 ಸಾವಿರ ಹಣ ಕೇಳಿದ್ರು. ಹೀಗಾಗಿ ತಂದೆ ಹಣ ನೀಡಲಾಗದೇ ಬೈಕ್‌ನಲ್ಲಿ 90 ಕಿ.ಮೀ ತನ್ನ ಮಗನ ಶವವನ್ನು ಸಾಗಿಸಿದರು” ಎಂದು ಬರೆಯಲಾಗಿದೆ.

    ತಿರುಪತಿ ಕಾಲ್ತುಳಿತ ಸಂಭವಿಸಿದ ಬೆನ್ನಲ್ಲೇ ಈ ವಿಡಿಯೊವನ್ನು ಕೆಲವರು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದರ ಹಿಂದಿನ ಸತ್ಯಾಂಶ ಬೇರೆ. ಈ ವಿಡಿಯೊ ತಿರುಪತಿ ಸರ್ಕಾರಿ ಆಸ್ಪತ್ರೆಯದ್ದೇ. ಆದರೆ ಘಟನೆ ನಡೆದದ್ದು 2022ರ ಏಪ್ರಿಲ್‌ನಲ್ಲಿ. ಹೌದು, ಜೇಸವ ಎಂಬ 12 ವರ್ಷದ ಬಾಲಕನನ್ನು ಲಿವರ್‌ ಹಾಗೂ ಕಿಡ್ನಿ ಸಮಸ್ಯೆ ಕಾರಣದಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜೇಸವ ಸಾವನ್ನಪ್ಪಿದ್ದ. ಈ ವೇಳೆ ಶವ ಸಾಗಿಸಲು ಹಣ ಕೇಳಿದ ಕಾರಣ ಬೈಕ್‌ನಲ್ಲಿ ಆತನ ತಂದೆ ಬೈಕ್‌ ಮೇಲೆ ಮಗನ ಶವವನ್ನು 90 ಕಿಲೋ ಮೀಟರ್‌ ಸಾಗಿಸಿ ತಮ್ಮ ಗ್ರಾಮ ತಲುಪಿದ್ದರು. ಈ ಕುರಿತ ಸುದ್ದಿಯನ್ನು ಹಲವು ವೆಬ್‌ತಾಣಗಳೂ ಸಹ ಪ್ರಕಟಿಸಿದ್ದವು.

    ಹೀಗೆ ಹಳೆ ವಿಡಿಯೊವನ್ನು ಹಂಚಿಕೊಳ್ಳುತ್ತಿರುವುದು ಜನರಿಗೆ ತಪ್ಪು ಸಂದೇಶ ತಲುಪಿಸುತ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading