ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯ ಸದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸುತ್ತಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಒವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 251 ರನ್ ಕಲೆಹಾಕಿರುವ ನ್ಯೂಜಿಲೆಂಡ್ ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿದೆ.
ಇನ್ನು ಕಿವೀಸ್ ತಂಡ ದೊಡ್ಡ ಮೊತ್ತವನ್ನು ಕಲೆಹಾಕಲು ಬಿಡದೇ ಉತ್ತಮವಾಗಿ ಬೌಲಿಂಗ್ ಮಾಡಿದ್ದು ಭಾರತದ ಸ್ಪಿನ್ ವಿಭಾಗ. ಈ ಪೈಕಿ ಕುಲ್‌ದೀಪ್ ಹಾಗೂ ವರುಣ್ ಚಕ್ರವರ್ತಿ ತಲಾ ಎರಡು ವಿಕೆಟ್ ಪಡೆದರೆ, ಜಡೇಜಾ ಹಾಗೂ ಶಮಿ ಒಂದು ವಿಕೆಟ್ ಪಡೆದರು.
ಅತ್ತ ಜಡೇಜಾ ತಮ್ಮ ಹತ್ತನೇ ಓವರ್ ಬೌಲಿಂಗ್ ಮಾಡಿ ಮುಗಿಸಿದ ಬಳಿಕ ವಿರಾಟ್ ಕೊಹ್ಲಿ ಜಡೇಜಾ ಅವರನ್ನು ಮೈದಾನದಲ್ಲಿಯೇ ಅಪ್ಪಿ ಅಭಿನಂದಿಸಿದ್ದಾರೆ. ಈ ವಿಡಿಯೊ ಇದು ಜಡೇಜಾ ಅವರ ಕೊನೆಯ ಏಕದಿನ ಪಂದ್ಯನಾ ಎಂಬ ಅನುಮಾನ ಮೂಡಿಸಿವೆ.
ಏಕೆಂದರೆ ಈ ಹಿಂದೆ ಇದೇ ರೀತಿ ನಿವೃತ್ತಿ ಘೋಷಿಸುವ ಮುನ್ನ ಆಸ್ಟ್ರೇಲಿಯಾದ ಸ್ಮಿತ್ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಕೊಹ್ಲಿ ಇದೇ ರೀತಿ ಅಪ್ಪಿ ಅಭಿನಂದಿಸಿದ್ದರು. ಒಟ್ಟಿನಲ್ಲಿ ಇಂದಿನ ಪಂದ್ಯ ಮುಗಿದ ಬಳಿಕ ಜಡೇಜಾ ನಿವೃತ್ತಿ ಘೋಷಿಸುವ ಸಾಧ್ಯತೆಗಳು ಕಂಡುಬರುತ್ತಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


