ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್ ಪಂದ್ಯ ಸದ್ಯ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಟ್ರೋಫಿಗಾಗಿ ಸೆಣಸಾಟ ನಡೆಸಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಮೊದಲು ಬ್ಯಾಟಿಂಗ್ ಮಾಡಿದ್ದು, ಪವರ್‌ಪ್ಲೇನಲ್ಲಿ ಅಬ್ಬರದ ಆರಂಭ ಪಡೆದುಕೊಂಡು ನಂತರದ ಓವರ್‌ಗಳಲ್ಲಿ ಭಾರತದ ಬೌಲಿಂಗ್ ದಾಳಿ ಮುಂದೆ ಮಂಕಾಗಿದೆ.
ಸದ್ಯ ಡ್ರಿಂಕ್ಸ್ ಬ್ರೇಕ್ ವೇಳೆಗೆ 36 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 156 ರನ್ ಗಳಿಸಿದೆ. 36ನೇ ಓವರ್ ಮಾಡಿದ ಜಡೇಜಾ ಎಸೆದ ಕೊನೆಯ ಎಸೆತಕ್ಕೆ ಗ್ಲೆನ್ ಫಿಲಿಪ್ಸ್ ಮಿಡ್ ವಿಕೆಟ್‌ನತ್ತ ಬಾರಿಸಿದ್ದರು. ಆದರೆ ಶುಬ್‌ಮನ್ ಗಿಲ್ ಕ್ಯಾಚ್ ಪಡೆಯಲು ಪ್ರಯತ್ನಿಸಿದರಾದರೂ ಯಶಸ್ವಿಯಾಗಲಿಲ್ಲ.
ಹೀಗೆ ಗಿಲ್ ಹೆಚ್ಚು ಶ್ರಮ ಹಾಕದೇ ಕ್ಯಾಚ್ ಬಿಟ್ಟಿದ್ದನ್ನು ಕಂಡ ಬೌಲರ್ ಜಡೇಜಾ ಎರಡೂ ಕೈಗಳನ್ನು ಪ್ರಶ್ನಾರ್ಥಕವಾಗಿ ತೋರಿಸಿ ಬೇಸರ ಹೊರಹಾಕಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


