ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಶಾಸಕರಿಂದಲೇ ಸಿಎಂ ಬದಲಾವಣೆ ಕೂಗು ಕೇಳಿಬರುತ್ತಿದ್ದು, ಅಂತಹ ಸಮಯದಲ್ಲಿ ಬಾಳೆ ಹೊನ್ನೂರಿನ ರಂಭಾಪುರಿ ಮಠದ ವೀರ ಸೋಮೇಶ್ವರ ಸ್ವಾಮೀಜಿ ಅವರೂ ಸಹ ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದರು.
ಡಿಕೆ ಶಿವಕುಮಾರ್ ಪಕ್ಷಕ್ಕಾಗಿ ದುಡಿದಿದ್ದು, ಅವರು ಅಧ್ಯಕ್ಷರಾದ ಮೇಲೆಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು ಅವರು ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಕುರಿತು ಇದೀಗ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು, ಮಾಧ್ಯಮದವರು ರಂಭಾಪುರಿ ಶ್ರೀಗಳು ಈ ರೀತಿ ಡಿಕೆ ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಹೇಳಿಕೆ ನೀಡಿದ್ದಾರೆ ಎಂದ ಕೂಡಲೇ ಪಕ್ಷಕ್ಕೂ ಅವರಿಗೂ ಸಂಬಂಧವಿಲ್ಲ, ನೀವು ಯಾರೋ ಹೇಳಿದ್ದನ್ನು ಯಾಕೆ ತಂದು ನನಗೆ ಕೇಳ್ತೀರಿ ಎಂದು ಕಿಡಿಕಾರಿದರು.
ಮುಖ್ಯಮಂತ್ರಿಯನ್ನು ಆರಿಸುವವರು ಶಾಸಕರು ಹಾಗೂ ಹೈಕಮಾಂಡ್, ಅದನ್ನು ಬಿಟ್ಟು ಯಾರೇ ಮಾತನಾಡಿದರೂ ಅದರ ಬಗ್ಗೆ ಏನು ಪ್ರತಿಕ್ರಿಯೆ ನೀಡುವುದು, ನಾವು ಏನೋ ಪ್ರತಿಕ್ರಿಯೆ ನೀಡಿದರೆ, ಅದಕ್ಕೆ ಅವರೊಂದು ಪ್ರತಿಕ್ರಿಯೆ ನೀಡಿ ಸುಮ್ಮನೆ ಘರ್ಷಣೆಯಾಗುತ್ತೆ ಎಂದು ತಿಳಿಸಿದರು.
ಸಮಾಜವನ್ನು ತಿದ್ದುವುದು ಹಾಗೂ ಆಶೀರ್ವಾದ ಮಾಡುವುದು ಅವರ ಕೆಲಸ ಎಂಬುದು ನನ್ನ ಭಾವನೆ ಎಂದ ಸತೀಶ್ ಜಾರಕಿಹೊಳಿ ಮಾತನಾಡಿದರು.
ಬೆಂಗಳೂರು ಶೇಷಾದ್ರಿಪುರಂನಲ್ಲಿ ಇಂಟೀರಿಯರ್ ಡಿಸೈನರ್/ಆರ್ಕಿಟೆಕ್ಟ್ ಹುದ್ದೆಗೆ ಅರ್ಜಿ ಆಹ್ವಾನ
ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


