Friday, September 4, 2026
spot_img
More
    spot_img
    HomeSportsCricketಸ್ಕಾಟ್ಲೆಂಡ್‌ಗೆ ಮರ್ಮಾಘಾತ; ಪಂದ್ಯ ಗೆದ್ದು ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಇಟಲಿ!

    ಸ್ಕಾಟ್ಲೆಂಡ್‌ಗೆ ಮರ್ಮಾಘಾತ; ಪಂದ್ಯ ಗೆದ್ದು ಟಿ20 ವಿಶ್ವಕಪ್‌ಗೆ ಅರ್ಹತೆ ಪಡೆದ ಇಟಲಿ!

    ಹಾಗ್‌ನ ಸ್ಪೋರ್ಟ್ಸ್‌ ಪಾರ್ಕ್‌ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಪುರುಷರ ಟಿ20 ವಿಶ್ವಕಪ್ ಯುರೋಪ್‌ ಕ್ವಾಲಿಫಯರ್‌ 2025ರ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ವಿರುದ್ಧ ಇಟಲಿ 12 ರನ್‌ಗಳ ಗೆಲುವು ದಾಖಲಿಸುವ ಮೂಲಕ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿದೆ.

    Advertisement

    ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಟಲಿ ಎಮಿಲಿಯೊ ಗೇ ಹಾಗೂ ಸ್ಟೆವರ್ಟ್‌ ಅಬ್ಬರದ ಆಟದ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 167 ರನ್‌ ಕಲೆಹಾಕಿ ಎದುರಾಳಿ ಸ್ಕಾಟ್ಲೆಂಡ್‌ಗೆ 168 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಸ್ಕಾಟ್ಲೆಂಡ್‌ 20 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 155 ರನ್‌ ಮಾತ್ರ ಗಳಿಸಲಷ್ಟೇ ಶಕ್ತವಾಗಿದೆ.

    ಇಟಲಿ ಇನ್ನಿಂಗ್ಸ್:‌ ಜಸ್ಟಿನ್‌ ಮೊಸ್ಕಾ 11, ಎಮಿಲಿಯೊ ಗೇ 50, ಜೋ ಬರ್ನ್ಸ್‌ 8, ಹ್ಯಾರಿ ಮೆನೆಂಟಿ 38, ಮಾರ್ಕಸ್‌ ಕಾಂಪೊಪಿಯಾನೊ ಡಕ್‌ಔಟ್‌, ಬೆನ್‌ ಮೆನೆಂಟಿ 10, ಸ್ಟೆವರ್ಟ್‌ ಅಜೇಯ 44 ಹಾಗೂ ಆಂಟೊನಿ ಮೊಸ್ಕಾ ಅಜೇಯ 2 ರನ್‌ ಕಲೆಹಾಕಿದರು.

    ಸ್ಕಾಟ್ಲೆಂಡ್‌ ಪರ ಮೈಕೆಲ್‌ ಲೀಸ್ಕ್‌ 3 ವಿಕೆಟ್‌, ಬ್ರಾಡ್‌ ಕ್ಯೂರಿ, ಮಾರ್ಕ್‌ ವ್ಯಾಟ್‌ ಹಾಗೂ ಕ್ರಿಸ್‌ ಗ್ರೀವ್ಸ್‌ ತಲಾ ಒಂದೊಂದು ವಿಕೆಟ್‌ ಪಡೆದರು.

    ಸ್ಕಾಟ್ಲೆಂಡ್‌ ಇನ್ನಿಂಗ್ಸ್‌: ಜಾರ್ಜ್‌ ಮುನ್ಸೆ 72, ಓಲ್ಲಿ ಹೇರ್ಸ್‌ 14, ಬ್ರೆಂಡನ್‌ ಮೆಕ್‌ಮುಲೆನ್‌ ಡಕ್‌ಔಟ್‌, ಮೈಕೆಲ್‌ ಲೀಸ್ಕ್‌ 3, ಮ್ಯಾಥ್ಯೂ ಕ್ರಾಸ್‌ 7 ಹಾಗೂ ರಿಚಿ ಬೆರಿಂಗ್‌ಟನ್‌ ಅಜೇಯ 46 ರನ್‌ ಗಳಿಸಿದರು.

    ಇಟಲಿ ಪರ ಹ್ಯಾರಿ ಮೆನೆಂಟಿ ಒಬ್ಬರೇ ಐದು ವಿಕೆಟ್‌ ಪಡೆದು ಮಿಂಚಿದರು.

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗೆ ಇಲ್ಲಿ ಕ್ಲಿಕ್‌ ಮಾಡಿ

    ಚಾಮರಾಜನಗರ: ಪಾಠ ಕೇಳುವಾಗಲೇ ಹೃದಯಾಘಾತದಿಂದ ಮೃತಪಟ್ಟ 4ನೇ ತರಗತಿ ವಿದ್ಯಾರ್ಥಿ!


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading