Friday, September 4, 2026
spot_img
More
    spot_img
    HomeEntertainmentಯುವರಾಜ್‌ಕುಮಾರ್‌ 2ನೇ ಚಿತ್ರ ʼಎಕ್ಕʼ ಟ್ರೈಲರ್‌ ಬಿಡುಗಡೆ ದಿನಾಂಕ, ಸಮಯ ಘೋಷಣೆ

    ಯುವರಾಜ್‌ಕುಮಾರ್‌ 2ನೇ ಚಿತ್ರ ʼಎಕ್ಕʼ ಟ್ರೈಲರ್‌ ಬಿಡುಗಡೆ ದಿನಾಂಕ, ಸಮಯ ಘೋಷಣೆ

    ʼರತ್ನನ್‌ ಪ್ರಪಂಚʼದಂತಹ ಕ್ಲಾಸ್‌ ಚಿತ್ರವನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದ ನಿರ್ದೇಶಕ ರೋಹಿತ್‌ ಪದಕಿ ನಿರ್ದೇಶನದ ಎರಡನೇ ಚಿತ್ರ ʼಎಕ್ಕʼ ಸದ್ಯ ಭಾರೀ ಸೌಂಡ್‌ ಮಾಡುತ್ತಿದೆ.

    Advertisement

    ಮೊದಲ 6 ತಿಂಗಳಲ್ಲಿ ದೊಡ್ಡ ಹಿಟ್‌ ಚಿತ್ರಗಳಿಲ್ಲದೇ ಬರಡಾಗಿರುವ ಕನ್ನಡ ಚಿತ್ರರಂಗಕ್ಕೆ ಈ ಚಿತ್ರ ತುಸು ಚೇತರಿಕೆ ಕೊಡುವ ಭರವಸೆಯನ್ನು ಮೂಡಿಸಿದೆ. ಪ್ರಮುಖವಾಗಿ ಚಿತ್ರದ ಹಾಡುಗಳ ಮೂಲಕ ಪ್ರೇಕ್ಷಕರನ್ನು ಈಗಾಗಲೇ ತಲುಪಿರುವ ಈ ಚಿತ್ರ ʼಬ್ಯಾಂಗಲ್‌ ಬಂಗಾರಿʼ ಹಾಡಿನ ಮೂಲಕ ಭಾರೀ ಪ್ರಚಾರ ಗಿಟ್ಟಿಸಿಕೊಂಡಿದೆ.

    ಹೀಗೆ ಸಣ್ಣ ಹೈಪ್‌ ಹುಟ್ಟುಹಾಕಿರುವ ಈ ಚಿತ್ರತಂಡ ಇದೀಗ ಥಿಯೇಟ್ರಿಕಲ್‌ ಟ್ರೈಲರ್‌ ಬಿಡುಗಡೆ ಮಾಡುವ ಮೂಲಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿ ಸಿನಿ ರಸಿಕರನ್ನು ಚಿತ್ರಮಂದಿರಗಳೆಡೆಗೆ ಕರೆತರುವ ಯತ್ನ ಮಾಡಲು ಮುಂದಾಗಿದೆ.

    ಎಕ್ಕ ಚಿತ್ರದ ಟ್ರೈಲರ್‌ ಇದೇ ಶುಕ್ರವಾರ ( ಜುಲೈ 11 ) ಸಂಜೆ 6 ಗಂಟೆಗೆ ಎಲ್ಲಾ ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲೂ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿಕೊಂಡಿದೆ.

    ಚಿತ್ರದಲ್ಲಿ ನಾಯಕಿಯರಾಗಿ ಸಂಜನಾ ಆನಂದ್‌ ಹಾಗೂ ಸಂಪದಾ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಕೆಆರ್‌ಜಿ ಸ್ಟುಡಿಯೊಸ್‌, ಪಿಆರ್‌ಕೆ ಪ್ರೊಡಕ್ಷನ್ಸ್‌ ಹಾಗೂ ಜಯಣ್ಣ ಫಿಲ್ಮ್ಸ್‌ ಬಂಡವಾಳ ಹೂಡಿವೆ. ಸಂಗೀತ ಮಾಂತ್ರಿಕ ಚರಣ್‌ ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಇನ್ನು ಚಿತ್ರ ಇದೇ ತಿಂಗಳ 18ರಂದು ಬಿಡುಗಡೆಯಾಗಲಿದೆ.

    ಯುವ ರಾಜ್‌ಕುಮಾರ್‌ ಜತೆಗಿನ ಸಂಬಂಧದ ಬಗ್ಗೆ ಕೊನೆಗೂ ಮೌನ ಮುರಿದ ನಟಿ ಸಪ್ತಮಿ ಗೌಡ!

    ಕೃಷಿ ಎಐ ಕನ್ನಡ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading