ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡ ಬಿಗ್‌ಬಾಸ್ ಸೀಸನ್-12 (Bigg Boss Kannada) ಶುರುವಾಗಲಿದೆ. ಯಾವ ಸ್ಪರ್ಧಿಗೆ ಎಷ್ಟು ಸಂಭಾವನೆ ಸಿಗುತ್ತೆ? ಯಾವ ಆಧಾರದ ಮೇಲೆ ಸಂಭಾವನೆ ಫಿಕ್ಸ್ ಆಗುತ್ತೆ ಎನ್ನುವ ವಿಚಾರ ಕಾರ್ಯಕ್ರಮದ ಆಯೋಜಕರು ಹಾಗೂ ಸ್ಪರ್ಧಿಗಳ ನಡುವೆಯೇ ಇರುತ್ತೆ. ಇನ್ನು ಬಿಗ್‌ಬಾಸ್ ಸೀಸನ್-6ರ ವಿನ್ನರ್ ಶಶಿ ಕುಮಾರ್ ಅವರು ಸಂಭಾವನೆ ಕುರಿತು ಅಚ್ಚರಿ ವಿಚಾರಗಳನ್ನು ರಿವೀಲ್ ಮಾಡಿದ್ದಾರೆ.
ಯುವ ರೈತರಾಗಿರುವ ಶಶಿ ಕುಮಾರ್ ಅವರು ಆರನೇ ಸೀಸನ್‌ನ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆ ಸೀಸನ್‌ನ ವಿನ್ನರ್ ಆಗಿಯೂ ಗೆದ್ದು ಬೀಗಿದ್ದರು. ಬರೋಬ್ಬರಿ ಐದು ಸೀಸನ್‌ಗಳು ಮುಗಿದ ನಂತರ ಅವರು ಬಿಗ್‌ಬಾಸ್ ಸಂಭಾವನೆಯ ಬಗ್ಗೆ ಹೇಳಿದ್ದಾರೆ.
ಬಿಗ್‌ಬಾಸ್‌ನಲ್ಲಿ ನಾನು ಮೂರು ತಿಂಗಳು ಇದ್ದೆ. 50 ಲಕ್ಷ ರೂ. ಕೊಟ್ಟರು, ಅದರಲ್ಲಿ 16 ಲಕ್ಷ ರೂ. ಸರ್ಕಾರದವರು ಇಟ್ಟುಕೊಂಡರು. ತೆರಿಗೆ ಎಲ್ಲ ಹೋಗಿ 34 ಲಕ್ಷ ರೂ. ಬಂತು. ಆದರೆ ನಾನು ಆ ಹಣ ವಾಪಸ್ ಪಡೆಯುವುದೇ ಮರೆತು ಹೋಗಿದ್ದೆ. ಬಿಗ್‌ಬಾಸ್ ಗೆದ್ದ ಖುಷಿಯಲ್ಲಿದ್ದೆ.
ನಾನು ಗೆದ್ದ ಹಣವನ್ನು ಪಡೆಯಬೇಕು ಅನ್ನೋದನ್ನೇ ಮರೆತುಬಿಟ್ಟಿದ್ದೆ. ಸುಮಾರು ಆರು ತಿಂಗಳು ಆದ ಮೇಲೆ ನನಗೆ ಪೇಮೆಂಟ್ ಬರಲಿಲ್ಲ ಎಂದು ಸಂಬಂಧಪಟ್ಟವರನ್ನ ಕೇಳಿದೆ. ಆದರೆ ಆಗ ನನಗೆ ಗೊತ್ತಾಗಿದ್ದು, ಈ ಹಣ ಪಡೆಯಲು ಕೆಲ ನಿಯಮಗಳಿದ್ದು, ಅದನ್ನು ಸ್ಪರ್ಧಿಗಳು ಮಾಡಬೇಕಿತ್ತು ಎನ್ನುವ ವಿಚಾರ ಹೇಳಿದ್ರು. ಬಿಗ್‌ಬಾಸ್ ಮನೆಗೆ ಹೋಗುವ ಮುನ್ನವೇ ಈ ಪ್ರಕ್ರಿಯೆ ಮುಗಿಸಬೇಕಿತ್ತು. ನಿಮ್ಮ ಕುಟುಂಬದವರು ಯಾರೂ ಇದಕ್ಕೆ ಸ್ಪಂದಿಸಲಿಲ್ಲ ಅಂದ್ರು’.
ನಮಗೆ ಇದ್ದಿದ್ದೇ ಕಡಿಮೆ ಸಂಭಾವನೆ, ನಾನು ಆಗ ವಾರಕ್ಕೆ 10,000 ರೂ. ಸಂಭಾವನೆ ಪಡೆಯುತ್ತಿದ್ದೆ. ಆ ಸೀಸನ್‌ನಲ್ಲಿ ನಾನೇ ಕಡಿಮೆ ಹಣ ಕೇಳಿದ್ದು, ಬೇರೆಯವರು ಒಂದು, ಎರಡು ಲಕ್ಷ ಪಡೆದವರೂ ಇದ್ದಾರೆ. ನಮ್ಮ ಡಿಮ್ಯಾಂಡ್ ಮೇಲೆ ಆ ಸಂಭಾವನೆ ನಿಗದಿ ಮಾಡುತ್ತಾರೆ. ಆಗ ನಾನು ಕೂಡ ಕೇಳಿದ್ರೆ ವಾರಕ್ಕೆ 40,000 ರೂ. ಕೊಡುತ್ತಿದ್ದರು ಅನಿಸುತ್ತೆ. ಆದರೆ ನಾನು ಅವಕಾಶ ಕೊಡುತ್ತಿದ್ದೀರಲ್ಲ? ದುಡ್ಡೇ ಬೇಡ ಅಂದಿದ್ದೆ. ಅವರು ಇಲ್ಲ ಹಾಗೆ ಮಾಡೋಕೆ ಆಗಲ್ಲ ಎಂದಿದ್ದರು’. ಬಿಗ್‌ಬಾಸ್‌ನವರು ನಿಯತ್ತಾಗಿ ಹಣ ಕೊಡ್ತಾರೆ. ಸಂಭಾವನೆ ತಡವಾಗಿ ಕೊಟ್ಟಿದ್ದು ಅವರ ತಪ್ಪಲ್ಲ, ಅದು ನನ್ನ ಎಡವಟ್ಟು’ ಎಂದೂ ಶಶಿಕುಮಾರ್ ಒಪ್ಪಿಕೊಂಡಿದ್ದಾರೆ.
,ಕಪಿಲ್ ಶರ್ಮಾ ಕೆಫೆ ಮೇಲೆ ಗುಂಡಿನ ದಾಳಿ ! ಫೈಯರಿಂಗ್ ಮಾಡಿದ್ದು ಯಾರು ?
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


