ಕೆನಡಾದ ಸರ್ರೆಯಲ್ಲಿ ಇರುವ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಅವರ ‘ಕ್ಯಾಪ್ಸ್ ಕೆಫೆ’ ಮೇಲೆ ಗುರುವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆದಿತ್ತು. ಏಕಾಏಕಿ ಕೆಫೆಗೆ ನುಗ್ಗಿದ 25ಜನರ ತಂಡ ಗುಂಡಿನ ದಾಳಿ ನಡೆಸಿದೆ
ಇದರ ಹಿಂದೆ ಪಾತಕಿ ಲಾರೆನ್ಸ್ ಬಿಷ್ಣೋಯಿ ತಂಡದ ಕೈವಾಡವಿರುವುದು ಬೆಳಕಿಗೆ ಬಂದಿದೆ.
ಇನ್ನು ದಾಳಿಯ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರಲ್ಲಿ ಗುಂಡಿನ ಸದ್ದಿನ ನಡುವೆ ಒಂದು ಧ್ವನಿ ಕೇಳಿಸುತ್ತಿದೆ. ನಾವು ಗುರಿಯಿಟ್ಟಿದ್ದ ವ್ಯಕ್ತಿಗೆ ಕರೆ ಮಾಡಿದ್ದೆವು, ಆತ ಕರೆ ಸ್ವೀಕರಿಸಿರಲಿಲ್ಲ. ಆದ್ದರಿಂದ ನಾವು ಕ್ರಮ ಕೈಗೊಳ್ಳಬೇಕಾಯಿತು. ಅವನಿಗೆ ಇನ್ನೂ ಕರೆ ಕೇಳಿಸದಿದ್ದರೆ, ಮುಂದಿನ ಕ್ರಮವನ್ನು ಶೀಘ್ರದಲ್ಲೇ ಮುಂಬೈನಲ್ಲಿ ತೆಗೆದುಕೊಳ್ಳಲಾಗುವುದು ಎಂದು ಒಬ್ಬ ದಾಳಿಕೋರ ಕಿರುಚಾಡುತ್ತಿರುವುದನ್ನು ಕಾಣಬಹುದಾಗಿದೆ.
ದಾಳಿ ಬಗ್ಗೆ ಬಿಷ್ಣೋಯಿ ಗ್ಯಾಂಗ್ ಫೇಸ್ಬುಕ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ʻಜೈ ಶ್ರೀ ರಾಮ್, ಸತ್ ಶ್ರೀ ಅಕಾಲ್. ಎಲ್ಲ ಸಹೋದರರಿಗೆ ರಾಮ್ ರಾಮ್. ಕೆನಡಾದ ಸರ್ರೆಯಲ್ಲಿರುವ ಕಪಿಲ್ ಶರ್ಮಾ ‘ಕ್ಯಾಪ್ಸ್ ಕೆಫೆ’ಯಲ್ಲಿ ಇಂದು ನಡೆದ ಗುಂಡಿನ ದಾಳಿಗೆ ಗೋಲ್ಡಿ ಧಿಲ್ಲೋನ್ ಮತ್ತು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊಣೆ. ನಾವು ಅವನಿಗೆ ಕರೆ ಮಾಡಿದೆವು, ಆದರೆ, ಅವನಿಗೆ ರಿಂಗ್ ಶಬ್ದ ಕೇಳಿಸಲಿಲ್ಲ, ಆದ್ದರಿಂದ ನಾವು ಗುಂಡಿನ ದಾಳಿಯ ಕ್ರಮ ಕೈಗೊಳ್ಳಬೇಕಾಯಿತು ಎಂದು ಹೇಳಿದ್ದಾರೆ.
ಈ ಗ್ಯಾಂಗ್ ಖಲಿಸ್ತಾನ ಪರವಾಗಿರುವ ಬಬ್ಬರ್ ಖಾಲ್ಸಾ ಇಂಟರ್ನ್ಯಾಷನಲ್ ಜತೆಗೆ ಸಂಬಂಧ ಹೊಂದಿದೆ. ಹಾಸ್ಯನಟನ ಹೇಳಿಕೆಯಿಂದ ಮನನೊಂದಿದ್ದರಿಂದ ಲಡ್ಡಿ ಗ್ಯಾಂಗ್ನ ಸದಸ್ಯ ಗುಂಡಿನ ದಾಳಿಗೆ ಆದೇಶಿಸಿದ್ದಾನೆ ಎಂದು ಕೆನಡಾ ಮಾಧ್ಯಮಗಳು ವರದಿ ಮಾಡಿವೆ.
,ಬೆಂಗಳೂರು ಸೆಂಟ್ರಲ್ನಲ್ಲಿ ಕಾಂಗ್ರೆಸ್ ಸೋಲಲು ಮತಗಳ್ಳತನ ಕಾರಣ: ಜಮೀರ್ ಅಹ್ಮದ್
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


